ಬೆಳಗಾವಿ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೆಳಗಾವಿ ಗಡಿ ವಿವಾಧ ತಾರಕಕ್ಕೇರಿದೆ. ಮಹಾ ಸಚಿದ್ವಯರು ಬೆಳಗಾವಿ ಭೇಟಿ ರದ್ದುಗೊಂಡ ಬೆನ್ನಲ್ಲೇ, ಗಡಿ ಭಾಗದಲ್ಲಿ ಕರವೇ ಪ್ರತಿಭಟನೆಗೆ ಇಳಿದಿದೆ. ಅಲ್ಲದೇ ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಕರೆ ನೀಡಲಾಗಿದೆ.
ರೈತರಿಗೆ ಸದಾ ಪ್ರೋತ್ಸಾಹ ನೀಡುವ ಬಿಜೆಪಿ – ರೈತ ಮೋರ್ಚಾ ಪ್ರಭಾರಿ ಎನ್.ರವಿಕುಮಾರ್
ಈ ಬಗ್ಗೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು, ಮಹಾರಾಷ್ಟ್ರ ಬೆಳಗಾವಿ ಗಡಿಯ ವಿಚಾರವಾಗಿ ಪದೇ ಪದೇ ಖ್ಯಾತೆ ತೆಗೆಯುತ್ತಿದೆ. ಇದು ಸರಿಯಲ್ಲ. ಗಡಿ, ಭಾಷೆಯ ವಿಚಾರದಲ್ಲಿ ಕನ್ನಡಿಗರನ್ನು ಕೆಣಕಿದರೇ ಸರಿಯಲ್ಲ ಎಂಬುದಾಗಿ ಗುಡುಗಿದರು.
ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಬಿಜೆಪಿ ಮೋಡಿ – MLC ಎನ್.ರವಿಕುಮಾರ್
ಬೆಳಗಾವಿ ಗಡಿ ಕ್ಯಾತೆಯನ್ನು ತೆಗೆಯುತ್ತಿರುವಂತ ಮಹರಾಷ್ಟ್ರ ಸರ್ಕಾರದ ವಿರುದ್ಧ ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕರವೇಯಿಂದ ಪ್ರತಿಭಟನೆ ನಡೆಸಲಾಗುತ್ತದೆ. ಈ ಮೂಲಕ ಮಹಾರಾಷ್ಟ್ರ ಕ್ಯಾತೆಗೆ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದು ಹೇಳಿದರು.
ಮತ್ತೊಂದೆಡೆ ಮಹಾರಾಷ್ಟ್ರ ಸಚಿವರು ಇಂದು ಬೆಳಗಾವಿಗೆ ಆಗಮಿಸುತ್ತೇವೆ ಎಂದು ಘೋಷಿಸಿದ್ದಂತ ಭೇಟಿಯನ್ನು ರದ್ದುಗೊಳಿಸಿರೋದಕ್ಕೆ ಶಿವಸೇನೆ ಸಿಡಿದೆದ್ದಿದೆ. ಹೀಗಾಗಿ ಇಂದು ಸಂಜೆ 5 ಗಂಟೆಗೆ ಬೆಳಗಾವಿ ಗಡಿಯನ್ನು ಪ್ರವೇಶಿಸುವುದಾಗಿ ಹೇಳಿದೆ.
ಈ ಬಗ್ಗೆ ಮಾತನಾಡಿರುವಂತ ಕೊಲ್ಹಾಪುರದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಅವರು, ಇಂದು ಸಂಜೆ 5 ಗಂಟೆಗೆ ಕೊನಗನೋಳ್ಳಿ ಚೆಕ್ ಪೋಸ್ಟ್ ಗೆ ಬರುತ್ತೇವೆ. ಸಚಿವರು ಎರಡು ಬಾರಿ ಬೆಳಗಾವಿಗೆ ಬರೋದಾಗಿ ಹೇಳಿ, ರದ್ದು ಮಾಡಿದ್ದಾರೆ. ಮಹಾ ಸಚಿದ್ವಯರ ನಿಲುವು ಸಂಶಯಾಸ್ವದವಾಗಿದೆ. ಈ ಹಿನ್ನಲೆಯಲ್ಲಿಯೇ ಇಂದು ಸಂಜೆ 5 ಗಂಟೆಗೆ ನಾವು ಟೋಲ್ ಗೇಟ್ ಬಳಿ ಬರುತ್ತೇವೆ ಎಂದು ತಿಳಿಸಿದ್ದಾರೆ.