ಬೆಂಗಳೂರು: ಮಹಾರಾಷ್ಟ್ರ ಸಚಿವರು ದಿನಾಂಕ 06-12-2022 ನಾಳೆ ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇಂತಹ ಸಚಿವರು ಕರ್ನಾಟಕದ ಬೆಳಗಾವಿ ಗಡಿಯನ್ನು ಪ್ರವೇಶಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಶಾಲಾ ಮಕ್ಕಳಿಗೆ ಬಹುಮುಖ್ಯ ಮಾಹಿತಿ: ಹೀಗಿದೆ 2022-23ನೇ ಸಾಲಿನ ‘ಬಾನ್ ದನಿ ರೇಡಿಯೋ ಪಾಠ’ ಪ್ರಸಾರ ವೇಳಾಪಟ್ಟಿ
ಈ ಕುರಿತಂತೆ ಬೆಳಗಾವಿ ಜಿಲ್ಲಾಧಿಕಾರಿಗಳಾದಂತ ನಿತೇಶ್ ಕೆ.ಪಾಟೀಲ್ ಅವರು ಆದೇಶ ಹೊರಡಿಸಿದ್ದು, ದಿನಾಂಕ 06-12-2022ರಂದು ಮಹಾರಾಷ್ಟ್ರ ರಾಜ್ಯದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಜವಳಿ ಹಾಗೂ ಸಂಸದೀಯ ವ್ಯವಹಾರ ಸಚಿವ ಚಂದ್ರಕಾಂತ ಪಾಟೀಲ್, ಅಬಕಾರಿ ಸಚಿವ ಶಂಬುರಾಜ ದೇಸಾಯಿ ಹಾಗೂ ಸಂಸದ ಧೈರ್ಯಶೀಲ ಅವರು ಬೆಳಗಾವಿ ಜಿಲ್ಲೆಗೆ ಆಗಮಿಸಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಿಳಿದು ಬಂದಿದೆ ಎಂದಿದ್ದಾರೆ.
ಬೆಳಗಾವಿ ಗಡಿಯನ್ನು ಪ್ರವೇಶಿಸಿ, ಈ ಸಚಿವರು, ಸಂಸದರು ಪ್ರಚೋದನಾಕಾರಿ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇವೆ. ಈ ಮೂಲಕ ಭಾಷಾ ವೈಷಮ್ಯ ಬೆಳೆದು, ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವ ಸಂಭವ ಇರುತ್ತದೆ. ಈ ನಿಟ್ಟಿನಲ್ಲಿ ದಿನಾಂಕ 06-12-2022ರಂದು ಮಹಾರಾಷ್ಟ್ರ ಸಚಿವರು, ಸಂಸದರು ಬೆಳಗಾವಿ ಗಡಿಯೊಳಗೆ ಪ್ರವೇಶಿಸದಂತೆ ನಿಷೇಧ ಹೇರಿ ಆದೇಶಿಸಿದ್ದಾರೆ.
BIGG NEWS : ‘ಬಲವಂತದ ಮತಾಂತರ ಗಂಭೀರ ವಿಷಯ’ : ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ