Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಕಾಂಗ್ರೆಸ್ ಕಚ್ಚಾಟಕ್ಕೆ ತೇಪೆ ಹಚ್ಚಲು, ರಾಹುಲ್ ಗಾಂಧಿ ಬೆಂಗಳೂರಲ್ಲೆ ಒಂದು ಮನೆ ಮಾಡಿದ್ರೆ ಒಳ್ಳೇದು : ಆರ್.ಅಶೋಕ್ ವ್ಯಂಗ್ಯ

BREAKING : ಬಿಜೆಪಿಗೆ `ಕೆ.ಅಣ್ಣಾಮಲೈ’ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ | Annamalai resigns

BREAKING : ವಿದೇಶಿ ಹೂಡಿಕೆದಾರರಿಗೆ ಗುಡ್ ನ್ಯೂಸ್ : ಸರ್ಕಾರಿ ಬಾಂಡ್‌ ಗಳ ಮೇಲಿನ ಬಂಡವಾಳ ಗಳಿಕೆ ತೆರಿಗೆ ರದ್ದುಗೊಳಿಸಿದ ಕೇಂದ್ರ ಸರ್ಕಾರ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದ್ದೂರು ಉದ್ಯೋಗ ಮೇಳ : ಗ್ರಾಮೀಣ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ – ಮನ್ ಮುಲ್ ನಿರ್ದೇಶಕ ಎಸ್‌.ಪಿ.ಸ್ವಾಮಿ
KARNATAKA

ಮದ್ದೂರು ಉದ್ಯೋಗ ಮೇಳ : ಗ್ರಾಮೀಣ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ – ಮನ್ ಮುಲ್ ನಿರ್ದೇಶಕ ಎಸ್‌.ಪಿ.ಸ್ವಾಮಿ

By ವಸಂತ ಬಿ ಈಶ್ವರಗೆರೆ

ಮಂಡ್ಯ :- ಮದ್ದೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಕ-ಯುವತಿಯರಿಗೆ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಇದರ ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಬಿಜೆಪಿ ಮುಖಂಡ ಹಾಗೂ ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಉದ್ಯೋಗಾಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.

ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಶ್ರೀನಿಧಿಗೌಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ಮತ್ತು ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಂಪ್ಯೂಟರ್ ಯುಗದಲ್ಲಿಯೂ ಉದ್ಯೋಗಗಳು ಕಡಿಮೆಯಾಗುತ್ತವೆ ಎಂಬ ಭ್ರಮೆ ಇದ್ದರೂ, ವಾಸ್ತವದಲ್ಲಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಯುಗದಲ್ಲಿ ಉದ್ಯೋಗಾವಕಾಶ ಇನ್ನಷ್ಟು ಹೆಚ್ಚಾಗಿವೆ. ವಿದ್ಯಾರ್ಥಿಗಳು ತಮ್ಮ ಸೂಕ್ತ ದಾಖಲಾತಿಗಳನ್ನು ನೀಡಿ ಕಂಪನಿಯವರ ಜತೆ ಉದ್ಯೋಗ ಮೇಳದಲ್ಲಿ ಮಾಹಿತಿಯನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ ಸಿಕ್ಕಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ನಿರಂತರ ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಾವಲಂಬಿಯಾಗಿ ಜೀವನ ನಡೆಸಬೇಕು. ಸಣ್ಣ ಸಣ್ಣ ವಿಷಯಗಳಲ್ಲಿ ಶಿಸ್ತು ಮತ್ತು ಜವಾಬ್ದಾರಿ ಬೆಳೆಸಿಕೊಂಡಾಗ ಸಾಧನೆಗೆ ಅನೇಕ ಅವಕಾಶಗಳು ದೊರಕುತ್ತವೆ ಎಂದು ಹೇಳಿದರು.

ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಮಾತನಾಡಿ, ಎಸ್.ಪಿ.ಸ್ವಾಮಿ ಅವರು ಕಳೆದ 20 ವರ್ಷಗಳಿಂದ ತಮ್ಮ ಪುತ್ರ ಶ್ರೀನಿಧಿ ಗೌಡ ಅವರ ಹೆಸರಿನಲ್ಲಿ ಪ್ರತಿ ವರ್ಷ ಉದ್ಯೋಗ ಮೇಳ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಬಡವರಿಗೆ ಉಚಿತ ಕಂಬಳಿ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆ ರಾಜಕೀಯವಾಗಿ ಶಕ್ತಿ ನೀಡಿದರೇ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಮುನ್ನುಡಿ ಬರೆಯಬಹುದು ಎಂದರು.

ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಯುವ ಜನತೆಗೆ ಉದ್ಯೋಗ ಕಲ್ಪಿಸುವಲ್ಲಿ ರಾಜ್ಯ ಸಕರ್ಾರ ಸಂಪೂರ್ಣವಾಗಿ ವಿಫಲವಾಗಿದೆ. ಕಂಪನಿಗಳು ರಾಜ್ಯದಿಂದ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಸರಿಯಾಗಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಎರಡು ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ ಇದ್ದರೂ ನೇಮಕಾತಿ ನಡೆದಿಲ್ಲ ಎಂದು ದೂರಿದರು.

ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ 60 ಕಂಪನಿಗಳು ಭಾಗಿಯಾಗಿ 500 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ಸ್ಥಳದಲ್ಲಿಯೇ 157 ಮಂದಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಿವಪುರದ ಶ್ರೀ ರಾಜು ಸ್ವಾಮೀಜಿ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ಜಿ.ಪಂ ಮಾಜಿ ಸದಸ್ಯರಾದ ಕೃಷ್ಣೇಗೌಡ, ಮರಿಹೆಗ್ಗಡೆ, ಬೋರಯ್ಯ, ನಗರ ಘಟಕ ಅಧ್ಯಕ್ಷ ಮಧು ಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎಂ.ರಘು, ಮುಖಂಡರಾದ ಅಶೋಕ್, ಮನುಕುಮಾರ್, ಮಧು, ಅಭಿಷೇಕ್, ಸುಧಾಕರ್, ಮತ್ತಿತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

SHOCKING: ‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ನೆಪದಲ್ಲಿ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆ!

BREAKING: ‘ಡಿಸಿ ಬರುವವರೆಗೆ ಇಳಿಯಲ್ಲ’ ಎಂದು 9ನೇ ಅಂತಸ್ತಿನ ಕಟ್ಟಡ ಏರಿ ಯುವಕನ ಆತ್ಮಹತ್ಯೆ ಬೆದರಿಕೆ

Share. Facebook Twitter LinkedIn WhatsApp Email

Related Posts

ರಾಜ್ಯ ಕಾಂಗ್ರೆಸ್ ಕಚ್ಚಾಟಕ್ಕೆ ತೇಪೆ ಹಚ್ಚಲು, ರಾಹುಲ್ ಗಾಂಧಿ ಬೆಂಗಳೂರಲ್ಲೆ ಒಂದು ಮನೆ ಮಾಡಿದ್ರೆ ಒಳ್ಳೇದು : ಆರ್.ಅಶೋಕ್ ವ್ಯಂಗ್ಯ

1 Min Read

BREAKING : ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ಹಿನ್ನೆಲೆ : ಕಾರಿಗೆ ಅಡ್ಡ ಮಲಗಿ ಬೆಂಬಲಿಗರಿಂದ ಪ್ರತಿಭಟನೆ!

1 Min Read

ರಾಮಲಿಂಗಾರೆಡ್ಡಿ ನನಗೆ ಬಹಳ ಆತ್ಮೀಯರು, ಅವರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ : ಸಿಎಂ ಡಿಕೆ ಶಿವಕುಮಾರ್

2 Mins Read
Recent News

ರಾಜ್ಯ ಕಾಂಗ್ರೆಸ್ ಕಚ್ಚಾಟಕ್ಕೆ ತೇಪೆ ಹಚ್ಚಲು, ರಾಹುಲ್ ಗಾಂಧಿ ಬೆಂಗಳೂರಲ್ಲೆ ಒಂದು ಮನೆ ಮಾಡಿದ್ರೆ ಒಳ್ಳೇದು : ಆರ್.ಅಶೋಕ್ ವ್ಯಂಗ್ಯ

BREAKING : ಬಿಜೆಪಿಗೆ `ಕೆ.ಅಣ್ಣಾಮಲೈ’ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ | Annamalai resigns

BREAKING : ವಿದೇಶಿ ಹೂಡಿಕೆದಾರರಿಗೆ ಗುಡ್ ನ್ಯೂಸ್ : ಸರ್ಕಾರಿ ಬಾಂಡ್‌ ಗಳ ಮೇಲಿನ ಬಂಡವಾಳ ಗಳಿಕೆ ತೆರಿಗೆ ರದ್ದುಗೊಳಿಸಿದ ಕೇಂದ್ರ ಸರ್ಕಾರ!

BIG NEWS : ಟೆಲಿಗ್ರಾಂನಲ್ಲಿ `NEET’ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆರೋಪ : ಸೈಬರ್ ಕ್ರೈಮ್ ತನಿಖೆಗೆ ವಹಿಸಿದ NTA

State News
KARNATAKA

ರಾಜ್ಯ ಕಾಂಗ್ರೆಸ್ ಕಚ್ಚಾಟಕ್ಕೆ ತೇಪೆ ಹಚ್ಚಲು, ರಾಹುಲ್ ಗಾಂಧಿ ಬೆಂಗಳೂರಲ್ಲೆ ಒಂದು ಮನೆ ಮಾಡಿದ್ರೆ ಒಳ್ಳೇದು : ಆರ್.ಅಶೋಕ್ ವ್ಯಂಗ್ಯ

By ಸುರೇಶ್‌ KARNATAKA 1 Min Read

ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದ ಹಿನ್ನೆಲೆಯಲ್ಲಿ ಅಸಮಾಧಾನ ಗೊಂಡ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.…

BREAKING : ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ಹಿನ್ನೆಲೆ : ಕಾರಿಗೆ ಅಡ್ಡ ಮಲಗಿ ಬೆಂಬಲಿಗರಿಂದ ಪ್ರತಿಭಟನೆ!

ರಾಮಲಿಂಗಾರೆಡ್ಡಿ ನನಗೆ ಬಹಳ ಆತ್ಮೀಯರು, ಅವರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ : ಸಿಎಂ ಡಿಕೆ ಶಿವಕುಮಾರ್

BREAKING : ಡಿಕೆ ಶಿವಕುಮಾರ್ ನೂತನ ಸಂಪುಟದಲ್ಲಿ ಮೊದಲ ವಿಕೆಟ್ ಪತನ : ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.