Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ
INDIA

ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ

By ವಸಂತ ಬಿ ಈಶ್ವರಗೆರೆ

ತಿರುವನಂತಪುರಂ: 2025ರ ಮಹಾಕುಂಭ ಮೇಳದಲ್ಲಿ ಸರಮಾಲೆ ಮಾರುವ ಮೂಲಕ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಮಧ್ಯಪ್ರದೇಶದ ಬೆಡಗಿ ಮೊನಾಲಿಸಾ, ಇದೀಗ ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಎಂಬ ಯುವಕನ ಕೈ ಹಿಡಿಯುವ ಮೂಲಕ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಪೋಷಕರ ವಿರೋಧದ ನಡುವೆಯೂ ಕೇರಳಕ್ಕೆ ತೆರಳಿ ಮದುವೆಯಾಗಿರುವ ಈ ಜೋಡಿಯ ನಡೆ ಈಗ ದೇಶಾದ್ಯಂತ ‘ಲವ್ ಜಿಹಾದ್’ ಚರ್ಚೆಗೆ ಕಾರಣವಾಗಿದೆ.

ದೇವಸ್ಥಾನದಲ್ಲೇ ನಡೆದ ವಿವಾಹ ಮಹೋತ್ಸವ

ಮಧ್ಯಪ್ರದೇಶದ ಮೊನಾಲಿಸಾ ಹಾಗೂ ಮಹಾರಾಷ್ಟ್ರದ ಫರ್ಮಾನ್ ಖಾನ್ ಮಾರ್ಚ್ 11 ರಂದು ಕೇರಳದ ಅರ್ಮನೂರ್ ಶ್ರೀ ನೈನಾರ್ ದೇವಾ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 6 ತಿಂಗಳಿನಿಂದ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಈ ಜೋಡಿ, ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.

VIDEO | Thiruvananthapuram, Kerala: “I got married according to Hindu rituals. It is not ‘love jihad’. I respect all religions and consider every religion equal,” says Viral Mahakumbh girl Monalisa.

(Full video available on https://t.co/n147TvrpG7) pic.twitter.com/LFNk6GzGMC

— Press Trust of India (@PTI_News) March 12, 2026

‘ಇದು ಲವ್ ಜಿಹಾದ್ ಅಲ್ಲ’ – ಸ್ಪಷ್ಟನೆ ನೀಡಿದ ನಟಿ

ಈ ಮದುವೆಯ ಸುದ್ದಿ ಹರಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದು ‘ಲವ್ ಜಿಹಾದ್’ ಸಂಚು ಎಂದು ಹಲವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ನವಜೋಡಿ ಸ್ಪಷ್ಟನೆ ನೀಡಿದ್ದಾರೆ:

“ನಮ್ಮ ಮದುವೆ ಲವ್ ಜಿಹಾದ್ ಅಲ್ಲ. ನಾವು ಪ್ರೀತಿಸಿ ಮದುವೆಯಾಗಿದ್ದೇವೆ. ಮನೆಯವರು ನನಗೆ ಇಷ್ಟವಿಲ್ಲದ ವ್ಯಕ್ತಿಯ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದರು. ಆದರೆ ನನಗೆ ಫರ್ಮಾನ್ ಮೇಲೆ ಇಷ್ಟವಿತ್ತು. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ನಮ್ಮ ಪ್ರೀತಿ ಗೆದ್ದಿದೆ,” ಎಂದು ಮೊನಾಲಿಸಾ ಹೇಳಿದ್ದಾರೆ.

ಸರಮಾಲೆ ಮಾರುತ್ತಿದ್ದ ಹುಡುಗಿ ‘ವೈರಲ್ ಸ್ಟಾರ್’ ಆಗಿದ್ದು ಹೇಗೆ?

2025ರ ಮಹಾ ಕುಂಭಮೇಳದ ಸಂದರ್ಭದಲ್ಲಿ ಸರಮಾಲೆ ಮಾರುತ್ತಿದ್ದ ಮೊನಾಲಿಸಾ ಅವರ ವಿಡಿಯೋವನ್ನು ಯೂಟ್ಯೂಬರ್ ಒಬ್ಬರು ಹಂಚಿಕೊಂಡಿದ್ದರು. ಅವರ ಆಕರ್ಷಕ ಕಣ್ಣುಗಳು ಮತ್ತು ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದರು. ಇದರ ಬೆನ್ನಲ್ಲೇ ಸಿನಿಮಾ, ಧಾರಾವಾಹಿ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಮೊನಾಲಿಸಾ ಬ್ಯುಸಿಯಾಗಿದ್ದರು.

ಪ್ರಸ್ತುತ ಈ ಅಂತರ್ಧರ್ಮೀಯ ವಿವಾಹವು ಪರ-ವಿರೋಧದ ಚರ್ಚೆಗಳಿಗೆ ವೇದಿಕೆ ಮಾಡಿಕೊಟ್ಟಿದ್ದು, ಕೇರಳದ ಈ ಮದುವೆ ಪ್ರಕರಣದ ಮೇಲೆ ಈಗ ಇಡೀ ದೇಶದ ಕಣ್ಣು ನೆಟ್ಟಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ 56,432 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ

Share. Facebook Twitter LinkedIn WhatsApp Email

Related Posts

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

1 Min Read

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

1 Min Read

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

2 Mins Read
Recent News

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

State News
KARNATAKA

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಲಸು ಮತ್ತು ಮಾವು ಪ್ರಿಯರಿಗಾಗಿ ಹಮ್ಮಿಕೊಳ್ಳಲಾಗಿರುವ ‘ಬೃಹತ್ ಹಲಸು ಮತ್ತು…

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.