ಗೌರಿಬಿದನೂರು: ಬಡಾವಣೆ ನಿವೇಶನಗಳನ್ನು ಖಾತೆ ಮಾಡಿಕೊಡುವುದಕ್ಕೆ 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, 20 ಲಕ್ಷ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ನಗರಸಭೆ ಅಧ್ಯಕ್ಷೆ ಗಂಡ, ಇಬ್ಬರು ಸದಸ್ಯರು ಗೌರಿಬಿದನೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ.
ಮಂಜುನಾಥ್ ರೆಡ್ಡಿ ಎಂಬುವರು ರೈತರ ಜಮೀನನನ್ನು ಖರೀದಿಸಿ, ಬಡವಾಣೆಯನ್ನಾಗಿ ಪರಿವರ್ತಿಸಿ ಮಾರಾಟ ಮಾಡೋದಕ್ಕೆ ಮುಂದಾಗಿದ್ದರು. ನಿವೇಶನಗಳನ್ನು ಖಾತೆ ಮಾಡಿಕೊಡುವುದಕ್ಕೆ ಗೌರಿಬಿದನೂರು ನಗರಸಭೆಯನ್ನು ಸಂಪರ್ಕಿಸಿದ್ದರು.
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಈಗ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕವೂ ಮಾನಸಿಕ ಆರೋಗ್ಯ ಸೇವೆ ಲಭ್ಯ
ಈ ವೇಳೆ ಗೌರಿಬಿದನೂರು ನಗರಸಭೆ ಸದಸ್ಯೆ ರೂಪಾ ಅವರ ಪತಿ ಅನಂತರಾಜು ಹಾಗೂ ಮಾಜಿ ನಗರಸಭೆ ಸದಸ್ಯ ಮೈಲಾರಿ ಹಾಗೂ ನಗರಸಭೆ ಸದಸ್ಯ ಮಂಜುನಾಥ್ ಎಂಬುವರು 8 ಎಕರೆಯಲ್ಲಿ ಪ್ರತಿ ಎಕೆರೆಗೆ ಐದು ಲಕ್ಷದಂತೆ ಒಟ್ಟು 40 ಲಕ್ಷ ಲಂಚ ನೀಡಿದರೇ ಮಾತ್ರ ಖಾತೆ ಮಾಡಿಕೊಡುವುದಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಹೀಗೆ ಲಂಚಕ್ಕೆ ಬೇಡಿಕೆ ಇಟ್ಟ ವಿಷಯವನ್ನು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇಂದು 40 ಲಕ್ಷ ಜಮೀನನ್ನು ಬಡಾವಣೆಯಾಗಿ ಪರಿವರ್ತಿಸಿ, ಮಾರಾಟ ಮಾಡೋದಕ್ಕೆ ಖಾತೆ ಮಾಡಿಕೊಡಲು, ಗೌರಿ ಬಿದನೂರು ನಗರಸಭೆಯನ್ನು ಸಂಪರ್ಕಿಸಲಾಗಿದೆ. ನಿವೇಶನ ಖಾತೆ ಮಾಡಿಕೊಡಿಕೊಡಲು ಮೊದಲ ಕಂತಿನ 20 ಲಕ್ಷ ಹಣವನ್ನು ಲಂಚವಾಗಿ ಪಡೆಯುತ್ತಿದ್ದಂತ ವೇಳೆಯಲ್ಲಿ ನಗರಸಭೆ ಪತಿ, ಇಬ್ಬರು ಸದಸ್ಯರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ.
BIG NEWS: ರಾಜ್ಯದ ದೇವಾಲಯಗಳಲ್ಲಿ ಮೊಬೈಲ್ ಬಳಕೆಗೆ ಬ್ರೇಕ್: ಶೀಘ್ರವೇ ರೂಲ್ಸ್ ಜಾರಿ.? | Mobile Ban