ತುಮಕೂರು : ಈಗಾಗಲೇ ದೇಶದಲ್ಲಿ ಅಂತಿಮ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಜೂನ್ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ ಈ ಕುರಿತಂತೆ ಮಾತನಾಡಿದ ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಜೂ ನಾಲ್ಕರಂದು ಫಲಿತಾಂಶ ಬಂದ ಬಳಿಕ ಇಡೀ ಸರ್ಕಾರವನ್ನೇ ಬದಲಾಯಿಸಿ ಬಿಡೋಣ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ನಾಲ್ಕರಂದು ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತದೆ ದಾವಣಗೆರೆಯಲ್ಲಿ ಯಾರೋ ಒಬ್ಬರು ಬಂದು ಮನವಿ ಸಲ್ಲಿಸಿದರು. ಸಂಬಳ ಹೆಚ್ಚಿಸಲು ಅಥವಾ ಅನುದಾನಕ್ಕೋ ಮನವಿ ಅಂತ ಅಂದುಕೊಂಡಿದ್ವಿ, ಆದರೆ ಅವರು ಏನಾದರೂ ಮಾಡಿ ಶಿಕ್ಷಣ ಸಚಿವರನ್ನು ಬದಲಿಸಿ ಎಂದು ಮನವಿ ಸಲ್ಲಿಸಿದರು.
ರೀಟೈಲ್ ಆಗಿ ಒಬ್ಬೊಬ್ಬ ಸಚಿವರನ್ನು ಬದಲಾಯಿಸುವ ಬದಲು ಹೋಲ್ ಸೇಲ್ ಆಗಿ ಎಲ್ಲರನ್ನೂ ಬದಲಾಯಿಸಿ ಬಿಡೋಣ. ಶಿಕ್ಷಣ ಸಚಿವರನ್ನು ಬದಲಿಸಲ್ಲ ಎನ್ಟೈರ್ ಸರ್ಕಾರನೇ ಬದಲಿಸೋಣ ಹೇಗೂ ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಬರುತ್ತದೆ. ರಿಸಲ್ಟ್ ಬಳಿಕ ಇಡೀ ಸರ್ಕಾರವನ್ನೇ ಬದಲಾಯಿಸಿ ಬಿಡೋಣ ಎಂದು ತುಮಕೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ತಿಳಿಸಿದರು.
ಇದೇ ವೇಳೆ ಬೆಂಗಳೂರಲ್ಲಿ ಪ್ಲಾನ್ ಅಪ್ರೂವಲ್ ಗೆ ಚದರಡಿಗೆ 70 ರೂಪಾಯಿ ತೆರಿಗೆ ಕಟ್ಟಬೇಕಂತೆ, ಇದು ಯಾವ ಟ್ಯಾಕ್ಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇಂದು ತುಮಕೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಪ್ರಶ್ನಿಸಿದರು.