ಬೆಂಗಳೂರು: ಬಿಜೆಪಿ ಅವರು ನೆಪ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅದರ ಬದಲು PFI ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಗುಂಡೂರಾವ್, ಪಿಎಫ್ಐಯನ್ನು ನಿಷೇಧಿಸಲು ಇದು ಸಕಾಲವಾಗಿ ಎಂದು ತಿಳಿಸಿದ್ದಾರೆ.
BIGG NEWS: ಎಡಿಜಿಪಿ ಅಮೃತ್ಪಾಲ್ ಮಂಪರು ಪರೀಕ್ಷೆಗೆ ಸಿದ್ದರಾಮಯ್ಯ ಆಗ್ರಹ
ರಾಜ್ಯ ಸೇರಿದಂತೆ ದೇಶದ ಹಲವೆಡೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಪಿಎಫ್ಐ ಕಚೇರಿಯ ಮೇಲೆ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಭಯೋತ್ಪಾದನೆ, ದೇಶ ವಿರೋಧಿ ಚಟುವಟಿಕೆ, ವಿದೇಶಿ ಹಣವನ್ನು ಉಗ್ರಕೃತ್ಯಕ್ಕೆ ಬಳಸಿರುವ ಆರೋಪ ಪಿಎಫ್ಐ ಮೇಲಿದೆ. ಹಾಗಾಗಿ ಪಿಎಫ್ಐಯನ್ನು ನಿಷೇಧಿಸಲು ಇದು ಸಕಾಲ. ಬಿಜೆಪಿಯವರು ಇನ್ನಾದರೂ ನೆಪ ಹೇಳುವ ಬದಲು ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಿ.
ಯಾವುದೇ ಸಂಘಟನೆ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದರೆ ಆ ಸಂಘಟನೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಕೆಲವು ಗಲಭೆಗಳಾದಾಗ ಭಾರತೀಯ ಜನತಾ ಪಾರ್ಟಿ ಯವರು ಪಿಎಫ್ಐ ಸಂಘಟನೆಯ ವಿರುದ್ಧ ಬೊಟ್ಟು ತೋರಿಸಿ ದೇಶದ್ರೋಹದ ಆರೋಪ ಮಾಡುತ್ತಾರೆ, ನಂತರ ಸುಮ್ಮನಾಗುತ್ತಾರೆ.ವೃಥಾ ಆರೋಪ ಮಾಡುವ ಬದಲು ಈಗಲಾದರೂ ಪಿಎಫ್ಐ ಸಂಘಟನೆ ನಿಷೇಧಿಸಲಿ ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದರು.
1
ರಾಜ್ಯ ಸೇರಿದಂತೆ ದೇಶದ ಹಲವೆಡೆ NIA ಅಧಿಕಾರಿಗಳು #PFI ಕಚೇರಿಯ ಮೇಲೆ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಭಯೋತ್ಪಾದನೆ, ದೇಶ ವಿರೋಧಿ ಚಟುವಟಿಕೆ, ವಿದೇಶಿ ಹಣವನ್ನು ಉಗ್ರಕೃತ್ಯಕ್ಕೆ ಬಳಸಿರುವ ಆರೋಪ PFI ಮೇಲಿದೆ.
ಹಾಗಾಗಿ PFI ಯನ್ನು ನಿಷೇಧಿಸಲು ಇದು ಸಕಾಲ.
BJPಯವರು ಇನ್ನಾದರೂ ನೆಪ ಹೇಳುವ ಬದಲು PFI ಸಂಘಟನೆಯನ್ನು ನಿಷೇಧಿಸಲಿ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 23, 2022