Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಡಿ ಚಿತ್ರದ ‘ಸರ್ಸೆ ಸೆರಗ’ ಹಾಡಿನ ವಿವಾದ ವಿಚಾರ : ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ನೋರಾ ಫತೆಹಿ ಕ್ಷಮೆಯಾಚನೆ

BREAKING : ಬೆಂಗಳೂರು ಸೇರಿದಂತೆ ದೇಶಾದ್ಯಂತ 16 ಕಡೆ ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ‘ED’ ದಾಳಿ

SHOCKING : ಬೆಂಗಳೂರಲ್ಲಿ 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : ನೊಂದು 15ರ ಬಾಲಕ ಆತ್ಮಹತ್ಯೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ವಿಧಾನಪರಿಷತ್ತಿನಲ್ಲಿ ಸರಕು ಮತ್ತು ಸೇವೆಗಳ ತೆರಿಗೆ, ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ ಅಂಗೀಕಾರ
KARNATAKA

BREAKING: ವಿಧಾನಪರಿಷತ್ತಿನಲ್ಲಿ ಸರಕು ಮತ್ತು ಸೇವೆಗಳ ತೆರಿಗೆ, ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ ಅಂಗೀಕಾರ

By kannadanewsnow09

ಬೆಳಗಾವಿ ಸುವರ್ಣಸೌಧ: ಇಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡ “ಸರಕು ಮತ್ತು ಸೇವೆಗಳ ತೆರಿಗೆ 2024ನೇ ಸಾಲಿನ ಎರಡನೇ ತಿದ್ದುಪಡಿ ವಿಧೇಯಕ” ಹಾಗೂ “ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ 2024” ಅನ್ನು ಇಂದು (17/12/2024) ವಿಧಾನ ಪರಿಷತ್ ನಲ್ಲೂ ಸಹ ಕೂಲಂಕುಷ ಚರ್ಚೆಯ ನಂತರ ಅಂಗೀಕಾರ ನೀಡಲಾಗಿದೆ.

ತೆರಿಗೆದಾರರ ಹಾಗೂ ತೆರಿಗೆ ಸಂಗ್ರಹಿಸುವ ಅಧಿಕಾರಿಗಳ ನಡುವಿನ ಗೊಂದಲಕ್ಕೆ ತೆರೆ ಎಳೆಯುವ ಹಾಗೂ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಸ್ನೇಹಿ ಹೆಜ್ಜೆಯ ಭಾಗವಾಗಿ ಸರಕು ಮತ್ತು ಸೇವೆಗಳ ತೆರಿಗೆ 2024 ವಿಧೇಯಕಕ್ಕೆ ಎರಡನೇ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಸರಕು ಮತ್ತು ಸೇವೆಗಳ ತೆರಿಗೆ 2024ನೇ ಸಾಲಿನ ಎರಡನೇ ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ ಅವರು, “ಎಲ್ಲೆಲ್ಲಿ ತೆರಿಗೆದಾರರ ಹಾಗೂ ತೆರಿಗೆ ಅಧಿಕಾರಿಗಳ ನಡುವೆ ಗೊಂದಲ ಇದೆ, ಈ ಗೊಂದಲಗಳಿಗೆ ತೆರೆ ಎಳೆಯುವ ಹಾಗೂ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶ. ಕಳೆದ ನಾಲ್ಕೈದು ವರ್ಷಗಳ ಅನುಭವದಲ್ಲಿ ಎಲ್ಲೆಲ್ಲಿ ಕಾನೂನುಗಳ ಅಗತ್ಯ ಇದೆ ಅದನ್ನು ಅನುಭವದ ಆಧಾರದಲ್ಲಿ ಗುರುತಿಸಲಾಗಿದೆ. ಹಾಗೂ ಕೆಲವು ವಿಚಾರಗಳನ್ನು ವ್ಯಾಕ್ಯಾನ ಮಾಡುವಾಗ ಒಂದಕ್ಕೊಂದು ತದ್ವಿರುದ್ಧವಾಗಿದ್ದ ವಿಚಾರಗಳನ್ನು ಸರಳೀಕರಣಗೊಳಿಸುವ ಕೆಲಸ ಈ ತಿದ್ದುಪಡಿಯಲ್ಲಿ ಮಾಡಲಾಗಿದೆ” ಎಂದರು.

ತಿದ್ದುಪಡಿಯಿಂದ ಖಜಾನೆಗೆ 15,000 ತೆರಿಗೆ ಸಾಧ್ಯತೆ..!

ಸರ್ಕಾರ ಹಾಗೂ ತೆರಿಗೆದಾರರ ನಡುವೆ 80,000 ಸಾವಿರ ವ್ಯಾಜ್ಯ ಪ್ರಕರಣಗಳಿಗೆ. ಇಷ್ಟು ಪ್ರಕರಣಗಳ ಕಾರಣದಿಂದ ರೂ.15,000 ಕೋಟಿ ತಕರಾರಿನಲ್ಲಿದೆ. ಈಗಿನ ತಿದ್ದುಪಡಿಯಿಂದ ಎಲ್ಲಾ ಪ್ರಕರಣಗಳೂ ಇತ್ಯರ್ಥವಾದರೆ ಖಜಾನೆಗೆ ರೂ.15,000 ಕೋಟಿ ಹಣ ಹರಿದು ಬರುವ ಸಾಧ್ಯತೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಈ ಬಗ್ಗೆಯೂ ಸದನದ ಗಮನ ಸೆಳೆದ ಅವರು, “ ಅಧಿಕಾರಿಗಳ ಹಾಗೂ ತೆರಿಗೆ ಪಾವತಿದಾರರ ನಡುವೆ ಒಪ್ಪಂದಕ್ಕೆ ಬರದೆ ನಾವು ಅವರು ಎದುರು-ಬದುರು ಪ್ರಕರಣಗಳನ್ನು ನಡೆಸುವಂತಾಗಿದೆ. ಸುಮಾರು 80,000 ವ್ಯಾಜ್ಯ ಪ್ರಕರಣ ನ್ಯಾಯಾಲಯಗಳಲ್ಲಿವೆ. ಆರಂಭದಿಂದಲೂ ಕಾನೂನಲ್ಲಿ ಅವರೊಂತರಾ ವ್ಯಾಖ್ಯಾನ ಮಾಡಿದ್ದಾರೆ, ನಾವೊಂತರಾ ವ್ಯಾಖ್ಯಾನ ಮಾಡಿದ್ದೇವೆ. ಈ ಎಲ್ಲಾ ಪ್ರಕರಣಗಳೂ ಕಾನೂನು ಪ್ರಕ್ರಿಯೆಯಲ್ಲಿರುವ ಕಾರಣ ಬರುತ್ತಿರುವ ತೆರಿಗೆ ಸಹ ನಿಂತುಹೋಗಿದೆ” ಎಂದು ವಿಷಾದಿಸಿದರು.

ಮುಂದುವರೆದು, “ಈ ಹಿಂದೆ ವ್ಯಾಟ್‌ ಪದ್ಧತಿ (ಮೌಲ್ಯ ವರ್ಧಿತ ತೆರಿಗೆ) ಜಾರಿಯಲ್ಲಿದ್ದ ಸಂದರ್ಭದಲ್ಲಿ ಅಂದಿನ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ವ್ಯಾಟ್‌ ಬಗೆಗಿನ ವ್ಯಾಜ್ಯಗಳ ಇತ್ಯರ್ಥಕ್ಕೆ ಒನ್‌ ಟೈಮ್‌ ಸೆಟಲ್ಮೆಂಟ್‌ಗೆ ಅವಕಾಶ ಕೊಟ್ಟಿದ್ದರು. ಪ್ರಸ್ತುತ ಇದೇ ಮಾದರಿಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ. 80,000 ಪ್ರಕರಣಗಳಿಗೆ ಒನ್‌ಟೈಮ್‌ ಅವಕಾಶ ಮಾಡಿಕೊಡಲಾಗುತ್ತಿದೆ. ಈಗಲೇ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಂಡರೆ ಬಡ್ಡಿ ಹಾಗೂ ಪೆನಾಲ್ಟಿ ಹೊರತುಪಡಿಸಿ ಮೂಲ ಹಣ ಪಾವತಿ ಮಾಡಿದರೆ ಸಾಕು. 80,000 ಪ್ರಕರಣಗಳಿಂದ ರೂ.15,000 ಕೋಟಿ ಹಣ ತಕರಾರಿನಲ್ಲಿದೆ. ಈ ಸೆಟಲ್‌ಮೆಂಟ್‌ಗೆ ಅವಕಾಶ ನೀಡಿದರೆ, ಹಲವರು ಮುಂದೆ ಬರಬಹುದು. ಇದರಿಂದ ಸರ್ಕಾರದ ಖಜಾನೆಗೆ ಒಂದಷ್ಟು ಹಣ ಹರಿದುಬರಲಿದೆ.

ಒಂದು ವೇಳೆ ಕಾನೂನು ಪ್ರಕ್ರಿಯೆ ಮುಂದುವರೆದರೆ ಇಷ್ಟು ಪ್ರಮಾಣದ ಪ್ರಕರಣಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವುದು, ವಕೀಲರ ತಂಡ ಇಡುವುದು ಸರ್ಕಾರಕ್ಕೆ ಕಷ್ಟವಾಗಲಿದೆ. ಹೈಕೋರ್ಟ್‌ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್‌ ಯಾವಾಗ ಮುಗಿಯುತ್ತೆ ಎಂಬುದು ಗೊತ್ತಿಲ್ಲ. ಮುಗಿದರೂ ಮುಂದೆ ನಮಗೆ ಉಳಿಯುವುದೇನು? ಎಂಬ ಬಗ್ಗೆಯೂ ಖಚಿತತೆ ಇಲ್ಲ” ಎಂದು ಸದನಕ್ಕೆ ಮಾಹಿತಿ ನೀಡಿದರು.

ಇದಲ್ಲದೆ, “ತೆರಿಗೆದಾರರು ಜಿಎಸ್‌ಟಿ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ದಾಖಲಿಸುವಾಗ ಭದ್ರತಾ ಠೇವಣಿ ರೂಪದಲ್ಲಿ ರೂ.50 ಕೋಟಿ ಹಣ ಠೇವಣಿ ಇಡಬೇಕು. ತೆರಿಗೆದಾರರ ಪಾಲಿಗೆ ಇದು ದೊಡ್ಡ ಹೊರೆ. ಹೀಗಾಗಿ ಈ ಪ್ರಮಾಣವನ್ನು ರೂ.20 ಕೋಟಿಗೆ ಇಳಿಸಬೇಕು ಎಂದು ಹಲವು ವ್ಯವಹಾರಸ್ಥರು ನನ್ನ ಬಳಿ ಕೇಳಿಕೊಂಡಿದ್ದರು. ಅದರಂತೆ ಇದೀಗ ಭದ್ರತಾ ಠೇವಣಿ ಹಣವನ್ನು ರೂ.20 ಕೋಟಿ ರೂಪಾಯಿಗೆ ಉಳಿಸಲಾಗಿದೆ. ಇಲ್ಲದಿದ್ದರೆ, ತೆರಿಗೆದಾರರು ಸುಪ್ರೀಂ ಕೋರ್ಟ್‌ಗೆ ಹೋಗ್ತಾರೆ . ಇದರಿಂದ ಸರ್ಕಾರಕ್ಕೂ ಕಷ್ಟ, ತೆರಿಗೆದಾರರಿಗೂ ಕಷ್ಟ” ಎಂದು ವಿವರಿಸಿದರು.

“ಈ ಕಾನೂನುಗಳನ್ನು ಸರಳೀಕರಿಸುವ ಸಂಬಂಧ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಎಲ್ಲಾ ರಾಜ್ಯಗಳೂ ಒಪ್ಪಿಗೆ ಸೂಚಿಸಿವೆ. ಅಕ್ಟೋಬರ್‌.01 ರಿಂದಲೇ ಜಾರಿ ಮಾಡಲೂ ಸಹ ಎಲ್ಲಾ ರಾಜ್ಯಗಳೂ ಸಮ್ಮತಿಸಿವೆ. ಕರ್ನಾಟಕದಲ್ಲಿ ಅದಕ್ಕೂ ಮೊದಲೇ ಜಾರಿಗೆ ತರಲಾಗಿದೆ. ಕ್ಯಾಬಿನೆಟ್‌ ಅನುಮತಿ ಪಡೆದು ರಾಜ್ಯಪಾಲರ ಒಪ್ಪಿಗೆಯೊಂದಿಗೆ ಸುಗ್ರೀವಾಜ್ಷೆ ಮೂಲಕ ಈ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಪ್ರಸ್ತುತ ಸದನದಲ್ಲಿ ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ” ಎಂದು ಅವರು ತಿಳಿಸಿದರು.

ಸ್ಪಿರಿಟ್‌ ಮೇಲಿಲ್ಲ ಜಿಎಸ್‌ಟಿ..!

ಮಧ್ಯ ಮಾಡಲು ಉಪಯೋಗವಾಗುವ ಸ್ಪಿರಿಟ್‌ಗೆ ತೆರಿಗೆ ವಿಧಿಸುವ ಅಧಿಕಾರದ ನಡುವೆ ರಾಜ್ಯ-ಕೇಂದ್ರ ಸರ್ಕಾರಗಳ ನಡುವೆ ತಕರಾರು ಈ ಹಿಂದಿನಿಂದಲೂ ಇತ್ತು. ಆದರೆ, ಇದೀಗ ಸ್ಪಿರಿಟ್‌ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಇದರ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಬಾರದು ಎಂದು ಜಿಎಸ್‌ಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಸ್ಪಿರಿಟ್‌ ಅನ್ನು ಜಿಎಸ್‌ಟಿಯಿಂದ ತೆಗೆದು ಹಾಕುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡರು ಸದನಕ್ಕೆ ಖಚಿತಪಡಿಸಿದರು.

BREAKING : ವೃಕ್ಷಮಾತೆ ‘ತುಳಸಿಗೌಡ’ ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ ಪ್ರಧಾನಿ ಮೋದಿ | PM Modi

ಇನ್ಮುಂದೆ ಆನ್‌ಲೈನ್‌ ಮೂಲಕ NEET ಪರೀಕ್ಷೆ.?: ಶೀಘ್ರ ನಿರ್ಧಾರವೆಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ | NEET exam

Share. Facebook Twitter LinkedIn WhatsApp Email

Related Posts

ಕೆಡಿ ಚಿತ್ರದ ‘ಸರ್ಸೆ ಸೆರಗ’ ಹಾಡಿನ ವಿವಾದ ವಿಚಾರ : ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ನೋರಾ ಫತೆಹಿ ಕ್ಷಮೆಯಾಚನೆ

2 Mins Read

BREAKING : ಬೆಂಗಳೂರು ಸೇರಿದಂತೆ ದೇಶಾದ್ಯಂತ 16 ಕಡೆ ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ‘ED’ ದಾಳಿ

1 Min Read

SHOCKING : ಬೆಂಗಳೂರಲ್ಲಿ 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : ನೊಂದು 15ರ ಬಾಲಕ ಆತ್ಮಹತ್ಯೆ

1 Min Read
Recent News

ಕೆಡಿ ಚಿತ್ರದ ‘ಸರ್ಸೆ ಸೆರಗ’ ಹಾಡಿನ ವಿವಾದ ವಿಚಾರ : ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ನೋರಾ ಫತೆಹಿ ಕ್ಷಮೆಯಾಚನೆ

BREAKING : ಬೆಂಗಳೂರು ಸೇರಿದಂತೆ ದೇಶಾದ್ಯಂತ 16 ಕಡೆ ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ‘ED’ ದಾಳಿ

SHOCKING : ಬೆಂಗಳೂರಲ್ಲಿ 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : ನೊಂದು 15ರ ಬಾಲಕ ಆತ್ಮಹತ್ಯೆ

ನಿಮ್ಮ ದೇಹ ನೀಡುವ ಈ ಎಚ್ಚರಿಕೆಗಳನ್ನು ಕಡೆಗಣಿಸಬೇಡಿ; ಇದು ‘ಕ್ಯಾನ್ಸರ್’ ಇರಬಹುದು!

State News
KARNATAKA

ಕೆಡಿ ಚಿತ್ರದ ‘ಸರ್ಸೆ ಸೆರಗ’ ಹಾಡಿನ ವಿವಾದ ವಿಚಾರ : ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ನೋರಾ ಫತೆಹಿ ಕ್ಷಮೆಯಾಚನೆ

By kannadanewsnow05 KARNATAKA 2 Mins Read

ಬೆಂಗಳೂರು : ನಿರ್ದೇಶಕ ಹಾಗು ನಟ ಪ್ರೇಮ್ ಅವರ ಕೆಡಿ ಚಿತ್ರದ ‘ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ…

BREAKING : ಬೆಂಗಳೂರು ಸೇರಿದಂತೆ ದೇಶಾದ್ಯಂತ 16 ಕಡೆ ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ‘ED’ ದಾಳಿ

SHOCKING : ಬೆಂಗಳೂರಲ್ಲಿ 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : ನೊಂದು 15ರ ಬಾಲಕ ಆತ್ಮಹತ್ಯೆ

ALERT: ಬಸ್ಸಿನಲ್ಲಿ ಮಗುವಿಗೆ ವಾಂತಿ ಬಂತು ಅಂದ್ರೆ ಒಡವೆ ಬಗ್ಗೆ ಹುಷಾರ್; ಖದೀಮರ ಸ್ಕೆಚ್ ಬಯಲು ಮಾಡಿದ ಪೊಲೀಸರು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.