ಬೆಂಗಳೂರು: ನಗರದ ಸಿವಿಲ್ ಕೋರ್ಟ್ ವಿಚಾರಣೆ ವೇಳೆಯಲ್ಲಿ ನ್ಯಾಯಾಲಯದಲ್ಲಿ ಅನುಚಿತವಾಗಿ ವರ್ತನೆ ತೋರಿದ ಆರೋಪ ಎದುರಿಸುತ್ತಿದ್ದಂತ ವಕೀಲ ಕೆ ಎನ್ ಜಗದೀಶ್ ಕುಮಾರ್ ( Lawyer K N Jagadeesh Kumar ), ಇಂದು ಬೇಷರತ್ ಕ್ಷಮೆಯನ್ನು ಕೋರಿದ್ದಾರೆ. ಅಲ್ಲದೇ ಇನ್ಮುಂದೆ ಹೀಗೆ ನಡೆದುಕೊಳ್ಳುವುದಿಲ್ಲ ಎಂಬುದಾಗಿಯೂ ಹೈಕೋರ್ಟ್ ಗೆ ( Karnataka High Court ) ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
‘ಕೋವಿಡ್ ಲಸಿಕೆ’ಗೆ ಸಂಬಂಧಿಸಿದ ಸಾವಿಗೆ ನಾವು ಜವಾಬ್ದಾರರಲ್ಲ: ‘ಸುಪ್ರೀಂ ಕೋರ್ಟ್’ಗೆ ಕೇಂದ್ರ ಸ್ಪಷ್ಟನೆ
ಕೆಲ ದಿನಗಳ ಹಿಂದೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ( City Civil Court ) ಆವರಣದಲ್ಲಿ ಅನುಚಿತವಾಗಿ ವಕೀಲ್ ಕೆ ಎನ್ ಜಗದೀಶ್ ತೋರಿದ್ದರು. ಈ ಸಂಬಂಧ ಹೈಕೋರ್ಟ್ ನಲ್ಲಿ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗಿತ್ತು.
ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ ಹೊಸ ರೈಲು ಮಾರ್ಗಕ್ಕೆ ಹಣ ಮಂಜೂರು
ಇಂದು ವಿಚಾರಣೆ ವೇಳೆಯಲ್ಲಿ ನ್ಯಾಯಾಲಯದ ವಿಚಾರಣೆಯ ವೇಳೆಯಲ್ಲಿ ಅನುಚಿತವಾಗಿ ವರ್ತನೆ ತೋರಿದ ಪ್ರಕರಣ ಸಂಬಂಧ ವಕೀಲ ಕೆ ಎನ್ ಜಗದೀಶ್ ಅವರು ಬೇಷರತ್ ಕ್ಷಮೆಯನ್ನು ಯಾಚಿಸಿದರು. ಅಲ್ಲದೇ ಇನ್ನುಂದೆ ಯಾವತ್ತೂ ಹೀಗೆ ನ್ಯಾಯಾಲಯದ ಒಳಗೆ, ಹೊರಗೆ ನಡೆದುಕೊಳ್ಳುವುದಿಲ್ಲ ಎಂಬುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಪ್ರಕರಣ ಕೈಬಿಟ್ಟು 2 ಲಕ್ಷ ದಂಡವನ್ನು ಹೈಕೋರ್ಟ್ ನ್ಯಾಯಪೀಠವು ವಿಧಿಸಿದೆ.
BREAKING: ಬೆಂಗಳೂರಿನ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ: ಪರಿಶೀಲನೆಗೆ ವಿಶೇಷ ಅಧಿಕಾರಿಗಳ ನೇಮಕ