ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ನಡುವೆ ಮತ್ತು ತಿಂಗಳ ವ್ಯಾಪಕ ಪ್ರತಿಭಟನೆಗಳಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆಗೂ ಮುನ್ನವೇ ಇಂದು ಮುಂಜಾನೆ ತನ್ನ ದೇಶದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಭಟನಾಕಾರರು ಗೊಟಬಯ ಅವರ ರಾಜೀನಾಮೆಗೆ ಒತ್ತಾಯಿಸಿ ಶನಿವಾರ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು, ಬುಧವಾರ(ಇಂದು) ರಾಜೀನಾಮೆ ನೀಡಿ ಶಾಂತಿಯುತ ಅಧಿಕಾರದ ಪರಿವರ್ತನೆಗೆ ದಾರಿ ಮಾಡಿಕೊಡುವುದಾಗಿ ಗೊಟಬಯ ರಾಜಪಕ್ಸ ವಾರಾಂತ್ಯದಲ್ಲಿ ಭರವಸೆ ನೀಡಿದ್ದರು. ಆದ್ರೆ, ಅದಕ್ಕೂ ಮುನ್ನವೇ ಗೊಟಬಯ ದೇಶದಿಂದ ಪರಾರಿಯಾಗಿದ್ದಾರೆ.
ಮೂಲಗಳ ಪ್ರಕಾರ, ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೆರೆಯ ಮಾಲ್ಡೀವ್ಸ್ಗೆ ಹೊರಟಿದ್ದ ಆಂಟೊನೊವ್-32 ಮಿಲಿಟರಿ ವಿಮಾನದಲ್ಲಿ ಗೊಟಬಯ ರಾಜಪಕ್ಸ, ಅವರ ಪತ್ನಿ ಮತ್ತು ಅಂಗರಕ್ಷಕ ಸೇರಿ ನಾಲ್ವರು ಪ್ರಯಾಣಿಕರಿದ್ದರು ಎನ್ನಲಾಗಿದೆ.
Sri Lankan President Gotabaya Rajapaksa flies out of the country, reports AFP News Agency quoting officials
(File Pic) pic.twitter.com/vb7LLlTJTk
— ANI (@ANI) July 12, 2022
“ಅವರ ಪಾಸ್ಪೋರ್ಟ್ಗಳನ್ನು ಸ್ಟ್ಯಾಂಪ್ ಮಾಡಲಾಗಿದ್ದು, ಅವರು ವಿಶೇಷ ವಾಯುಪಡೆಯ ವಿಮಾನವನ್ನು ಏರಿದರು” ಎಂದು ಪ್ರಕ್ರಿಯೆಯಲ್ಲಿ ತೊಡಗಿರುವ ವಲಸೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗೊಟಬಯ ರಾಜಪಕ್ಸ ದೇಶದಿಂದ ಪಲಾಯನ ಮಾಡಿರುವುದನ್ನು ಮೂಲಗಳು ಖಚಿತಪಡಿಸಿವೆ. ಆದ್ರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
Video: ನಾಗ್ಪುರದಲ್ಲಿ ಸೇತುವೆ ದಾಟುತ್ತಿದ್ದಾಗ ಹೊಳೆಯಲ್ಲಿ ಕೊಚ್ಚಿ ಹೋದ ಕಾರು: 3 ಮಂದಿ ಸಾವು