ಬೆಂಗಳೂರು: ಮಂಗಳೂರಿನ ಕಂಕನಾಡಿಯ ಬಳಿಯಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ( Mangalore Kukkar Bomb Blast Case ) ರಾಜ್ಯ ಸರ್ಕಾರ ( Karnataka Government ) ಇದೀಗ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಆದೇಶಿಸಿದೆ.
ಪ್ಯಾರಾ ಮೆಡಿಕಲ್, ನಾನ್ ಪ್ಯಾರಾ ಮೆಡಿಕಲ್ ಸರ್ಟಿಫಿಕೇಟ್ ಕೋರ್ಸ್ ಗಾಗಿ ಅರ್ಜಿ ಆಹ್ವಾನ
ಈ ಸಂಬಂಧ ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರವು, ಮಂಗಳೂರು ಆಟೋದಲ್ಲಿನ ಕುಕ್ಕರ್ ಬಾಂಬ್ ಸ್ಪೋಟ ಕೇಸ್ ಅನ್ನು ಯುಎಪಿಎ ಕಾಯ್ದೆಯ ಅನ್ವಯ ಎನ್ಐಎ ತನಿಖೆಗೆ ವರ್ಗಾಹಿಸಲು ಆದೇಶಿಸಿದೆ.
ಶಿವಮೊಗ್ಗ: ನ.26, 27ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ಕುಕ್ಕರ್ ಬಾಂಬ್ ಸ್ಪೋಟಕ ಪ್ರಕರಣ ಸಂಬಂಧದ ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು, ಮಾಹಿತಿಗಳ ಆಧಾರದ ಮೇಲೆ ತನಿಖೆಯನ್ನು ಎನ್ಐಎಗೆ ವರ್ಗಾವಣೆಗೊಳಿಸಿ ಆದೇಶಿಸಿದೆ. ಈ ಮೂಲಕ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ ಕೇಸ್ ಎನ್ಐಎಗೆ ವರ್ಗಾವಣೆ ಆದಂತೆ ಆಗಿದೆ.