ನವದೆಹಲಿ: ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಸೇರಿದಂತೆ ನಾಲ್ವರು ಆರೋಪಿಗಳಿಗೆ ದೆಹಲಿಯ ಇಡಿ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ನೀಡಿದೆ.
ಬಳ್ಳಾರಿಯಲ್ಲಿ ವೇದಾವತಿ ನದಿಯಲ್ಲಿ ಸಿಲುಕಿ 25 ಕಾರ್ಮಿಕರ ಪರದಾಟ: 2 ಗಂಟೆಯೇ ಕಳೆದರೂ ಬಾರದ ರಕ್ಷಣಾ ಸಿಬ್ಬಂದಿ
ಈ ಸಂಬಂಧ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಇಂದು ಜಾರಿ ನಿರ್ದೇಶನಾಲಯದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶ ವಿಕಾಸ ಧುಲ್ ಅವರು, ಡಿಕೆ ಶಿವಕುಮಾರ್ ಸೇರಿದಂತೆ ನಾಲ್ವರಿಗೆ ತಲಾ 1 ಲಕ್ಷ ಭದ್ರತಾ ಠೇವಣಿ, ಸಾಕ್ಷಿ ನಾಶ ಮಾಡದಂತೆ ಹಾಗು ದೇಶ ಬಿಟ್ಟು ಹೋಗದಂತೆ ಷರತ್ತು ವಿಧಿಸಿ ಜಾಮೀನು ಮಂಜೂರಿ ಮಾಡಿದ್ದಾರೆ.
ಅಂದಹಾಗೆ ಕಳೆದ ಶನಿವಾರದಂದು ಈ ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ್ದಂತ ಇಡಿ ವಿಶೇಷ ಕೋರ್ಟ್, ಇಂದಿಗೆ ಆದೇಶ ಕಾಯ್ದಿರಿಸಿತ್ತು. ಇದೀಗ ತನ್ನ ಡಿಕೆ ಶಿವಕುಮಾರ್, ಉದ್ಯಮಿ ಸಚಿನ್ ನಾರಾಯಣ್, ಶರ್ಮಾ ಟ್ರಾನ್ಸ್ ಪೋರ್ಟ್ ಮಾಲೀಕ ಸುನೀಲ್ ಕುಮಾರ್ ಶರ್ಮಾ, ದೆಹಲಿಯ ಆಂಜನೇಯ ಹನುಮಂತಯ್ಯ, ರಾಜೇಂದ್ರ ಎನ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
BIGG NEWS: ಮಹಾರಾಷ್ಟ್ರದಲ್ಲಿ ಮೂರು ದಿನಗಳಲ್ಲಿ 21 ಹಂದಿಜ್ವರ ಪ್ರಕರಣಗಳು ಪತ್ತೆ