ಹಾಸನ: ಈಗಾಗಲೇ ಅನೇಕ ಬಾರಿ ಕೋಡಿಮಠದ ಶ್ರೀಗಳು ( Kodimatt Sri ) ನುಡಿದಂತ ಭವಿಷ್ಯ ನಿಜವಾಗಿದೆ. ಇದೀಗ ರಾಜ್ಯ ರಾಜಕೀಯ, ಪ್ರಕೃತಿ ವಿಕೋಪ ಕುರಿತಂತೆ ಮತ್ತೊಂದು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ.
ರಾಜ್ಯದ ಎಸ್ಸಿ, ಎಸ್ಟಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಶೀಘ್ರವೇ 75 ಯುನಿಟ್ ಉಚಿತ ವಿದ್ಯುತ್ ಅನುಷ್ಠಾನ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ( kodimatha swamiji ), ಶುಭಕೃತ ನಾಮ ಸಂವತ್ಸರದ ಫಲವಾಗಿ ಮಳೆ, ಗುಡುಗು, ಮಿಂಚಿನ ಮೂಲಕ ಪ್ರಕೃತಿಯಲ್ಲಿ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡಲಿದೆ. ಬಯಲು ಸೀಮೆ ಮಲೆನಾಡು, ಮಲೆನಾಡು ಬಯಲು ಸೀಮೆಯಾಗಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.
ಇನ್ನೂ ಮೇಘ ಘರ್ಜಿಸೀತು, ಭೂಮಿ ತಲ್ಲಣಗೊಂಡು, ಭೂಮಿ ಕಂಪಿಸಲಿದೆ. ಕೆರೆ ಕಟ್ಟೆ ಒಡೆದು, ಗುಡ್ಡಗಳು ಕುಸಿಯಲಿವೆ. ಹಿಂಗಾರು ಮಳೆ ಕಡಿಮೆಯಾಗಲಿದೆ. ಅಕಾಲಿಕ ಮಳೆಯಿಂದಾಗಿ ಹಲವು ಅನಾಹುತ ಉಂಟಾಗಲಿವೆ. ಇದು ಈ ಸಂವತ್ಸರದ ಕಡೆಯವರೆಗೆ ಇರಲಿದೆ ಎಂದಿದ್ದಾರೆ.
ಬಳ್ಳಾರಿಯಲ್ಲಿ ವೇದಾವತಿ ನದಿಯಲ್ಲಿ ಸಿಲುಕಿ 25 ಕಾರ್ಮಿಕರ ಪರದಾಟ: 2 ಗಂಟೆಯೇ ಕಳೆದರೂ ಬಾರದ ರಕ್ಷಣಾ ಸಿಬ್ಬಂದಿ
ದೇಶಕ್ಕೆ ಕಷ್ಟ, ಭಂಗ ಉಂಟಾಗಲಿದೆ. ರೋಗ-ರುಜಿನಗಳು ಹೆಚ್ಚಾಗಲಿದೆ. ಕಳ್ಳರ ಕಾಟಗಳು, ಅಪಮೃತ್ಯಗಳು, ಕೊಲೆ, ಮತೀಯ ಗಲಭೆಗಳು ಹೆಚ್ಚಾಗಲಿವೆ. ರಾಜಕೀಯ ಕಲಹಳು ಆಗಲಿವೆ. ರಾಜ್ಯ ಮಟ್ಟದ ಗೊಂದಲಗಳು, ಸಾವು ನೋವು ಆಗುವು ಲಕ್ಷಣ ಬಹಳ ಇದೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.