ಬೆಂಗಳೂರು: ಇಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕರೆದಿದ್ದಂತ ಜಂಟಿ ಸಭೆಯಲ್ಲಿ ಭಾಗವಹಿಸಿದ್ದಂತ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದರು. ಈ ಕಾರಣದಿಂದಾಗಿಯೇ ಕೆಲ ಕಾಲ ಸಭೆಯಲ್ಲಿ ಗೊಂದಲ ಏರ್ಪಟ್ಟಿದ್ದಲ್ಲದೇ, ರೈತರ ಎರಡು ಗುಂಪುಗಳ ನಡುವೆ ವಾಗ್ವಾದಕ್ಕೂ ಕಾರಣವಾಯಿತು.
ವಿಧಾನಸೌಧದ 3ನೇ ಮಹಡಿಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ರೈತರೊಂದಿಗೆ ಸಭೆ ನಡೆಸಿದರು. ಈ ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಭಾಗವಹಿಸಿದ್ದರು.
ಕಬ್ಬಿಗೆ ಬೆಲೆ ನಿಗದಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸೋ ಸಂಬಂಧದ ಸಭೆಯಲ್ಲಿ, ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿದ್ದಕ್ಕೆ ಕೆಲ ರೈತರು ಆಕ್ಷೇಪ ವ್ಯಕ್ತ ಪಡಿಸಿದರು. ಒಂದೂ ಅವರಿಬೇಕು. ಇಲ್ಲವೇ ನಾವು ಇರಬೇಕು ಎಂಬುದಾಗಿ ಸಚಿವರ ಮುಂದೆಯೇ ಪಟ್ಟು ಹಿಡಿದರು.
ಈ ವೇಳೆ ಮಧ್ಯಪ್ರವೇಶಿಸಿದಂತ ಕೋಡಿಹಳ್ಳಿ ಚಂದ್ರಶೇಖರ್ ಅವರು, ಇಲ್ಲಿ ವೈಯಕ್ತಿಕ ವಿಷಯ ತರುವುದು ಸರಿಯಲ್ಲ. ಆರೋಪ ಕುರಿತಂತೆ ಸಿಎಂಗೆ ಮನವಿ ಸಲ್ಲಿಸಿದ್ದೇನೆ. ನಾನು ತನಿಖೆ ನಡೆಸಿ, ತಪ್ಪು ಸಾಭೀತಾದರೇ ಯಾವುದೇ ಶಿಕ್ಷೆಗೂ ಸಿದ್ಧ. ಆರೋಪ ಬಂದ ತಕ್ಷಣ ಅಪರಾಧಿಯಲ್ಲ ಎಂದು ಹೇಳಿದರು.
BIGG NEWS : ಮುರುಘಾಮಠದಲ್ಲಿ ನಾಲ್ಕೂವರೆ ವರ್ಷದ ಮಗು ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಕೋಡಿಹಳ್ಳಿ ಚಂದ್ರಶೇಖರ್ ಅವರ ಮಾತಿಗೂ ರೈತರು ಮಣಿಯದೇ ಇದ್ದಾಗ, ಎರಡು ರೈತರ ಬಣಗಳ ನಡುವೆ ವಾಗ್ವಾದ ಏರ್ಪಟ್ಟಿತು. ಕೊನೆಗೆ ರೈತ ಮುಖಂಡರಾದಂತ ಸುನಂದಾ ಜಯರಾಂ ಸೇರಿ ಹಲವು ಮಧ್ಯಪ್ರವೇಶಿಸಿ, ಸಭೆಯ ವಿಷಯದ ಕಡೆಗೆ ಗಮನಕೊಡಬೇಕೆಂದು ಮನವಿ ಮಾಡಿದಾಗ, ಸಭೆ ಮುಂದುವರೆಯಿತು.