ಕೆಎನ್ಎನ್ ಡಿಜಿಟಲ್ ಡೆಸ್ಕ್ : ಏನೆಲ್ಲ ಪದವಿಗಳನ್ನು ಗಳಿಸಿದ್ದರೂ ಇಂದಿನ ದಿನಮಾನಗಳಲ್ಲಿ ನಮ್ಮ ವ್ಯಕ್ತಿತ್ವ ಎನ್ನುವುದು ಬಹುಮುಖ್ಯ ಅಂಶವಾಗಿದೆ. ಮುಖ, ರಕ್ತ, ಬಣ್ಣ, ಹೀಗೆ ವಿವಿಧ ರೀತಿಗಳನ್ನು ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ. ಇಂತಹವುಗಳಿಗೆ ಜನರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ.
BREAKING NEWS: ಮುರುಘಾ ಶ್ರೀ ಸೇರಿದಂತೆ ಮೂವರ ನ್ಯಾಯಾಂಗ ಬಂಧನ ವಿಸ್ತರಣೆ, ಡಿಸೆಂಬರ್ 3ರ ತನಕ ಜೈಲೆ ಗತಿ
ಇತ್ತೀಚೆಗೆ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಕುಳಿತುಕೊಳ್ಳುವ ಭಂಗಿಯಿಂದ ವ್ಯಕ್ತಿಯ ಆಂತರ್ಯವನ್ನು ಅರಿಯಬಹುದಾಗಿದೆ ಎಂಬ ಶೋಧನೆ ಬೆಳಕಿಗೆ ಬಂದಿದೆ.
ನೇರವಾಗಿ ಮೊಣಕಾಲನ್ನಿರಿಸುವುದು (Knees Straight)
ಮೊಣಕಾಲುಗಳನ್ನು ಲಂಬಕೋನಾಕೃತಿಯಲ್ಲಿ ನೇರ ಇರಿಸಿ ಕೂರುವ ವ್ಯಕ್ತಿಗೆ ತನ್ನಲ್ಲಿರುವ ಕೌಶಲ ಮತ್ತು ಕೆಲಸ ಮಾಡುವ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸವಿದೆ ಎಂದರ್ಥ. ಇಂಥವರು ಬುದ್ಧಿವಂತರು, ತರ್ಕಬದ್ಧವಾಗಿ ಯೋಚಿಸುವವರು, ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ದೈನಂದಿನ ಜೀವನದಲ್ಲಿ ಸಮಯಪ್ರಜ್ಞೆ ಉಳ್ಳವರಾಗಿರುತ್ತಾರೆ. ಯಾವುದೇ ಸ್ಥಳಕ್ಕೆ, ಸಭೆಗೆ ಅಥವಾ ಸಂದರ್ಶನಕ್ಕೆ ತಡವಾಗಿ ಸೂಕ್ತ ಸಮಯದಲ್ಲಿ ಹಾಜರಿರುತ್ತಾರೆ. ಮನೆ, ಕಚೇರಿ ಸ್ಥಳವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳುತ್ತಾರೆ. ಸಾಕಷ್ಟು ಪ್ರಾಮಾಣಿಕರಾದ ಇವರು ನೇರವಾಗಿ ಮಾತನಾಡುವ ಸ್ವಭಾವದವರು.
ಮೊಣಕಾಲುಗಳನ್ನು ಅಗಲಿಸಿ ಕೂರುವುದು (Knees Apart)
ಮೊಣಕಾಲುಗಳನ್ನು ಅಗಲಿಸಿ ಕುಳಿತುಕೊಳ್ಳುವವರು ಸ್ವಯಂ-ಕೇಂದ್ರಿತ ಮನೋಭಾವವನ್ನು ಹೊಂದಿರುತ್ತಾರೆ. ಅಹಂಕಾರಿಯೂ, ಪೂರ್ವಗ್ರಹಿಯೂ, ಇನ್ನೊಬ್ಬರ ಬಗ್ಗೆ ತಕ್ಷಣವೇ ಅಭಿಪ್ರಾಯಕ್ಕೆ ಬರುವವರೂ ಆಗಿರುತ್ತಾರೆ. ಹೆಚ್ಚು ಆತಂಕ, ಭಯ ಮತ್ತು ಚಿಂತೆ ಇವರನ್ನು ಕಾಡುತ್ತಿರುತ್ತದೆ. ಅಸ್ತವ್ಯಸ್ತ ಮನಸ್ಸು, ದಿನಚರಿ ಇವರದ್ದಾಗಿರುತ್ತದೆ. ಏಕಾಗ್ರತೆಯ ಕೊರತೆ ಇರುವುದರಿಂದ ಸರಿಯಾದ ಸಮಯದಲ್ಲಿ ಕೆಲಸವನ್ನು ಮುಗಿಸಲು ಇವರಿಗೆ ಆಗದು. ಆದರೆ ಹೊಸ ವಿಷಯ, ಅನ್ವೇಷಣೆಗಳಲ್ಲಿ ಇವರು ತೀವ್ರ ಆಸಕ್ತಿಯನ್ನು ಹೊಂದಿರುತ್ತಾರೆ. ಸುಲಭಕ್ಕೆ ಬೇಸರ, ನಿರಾಸೆಗೊಳ್ಳುವ ಇವರಿಗೆ ಸಂಬಂಧ ನಿಭಾವಣೆಯಲ್ಲಿಯೂ ಸಮಸ್ಯೆಯಾಗುತ್ತದೆ.
ಕಾಲಿನ ಮೇಲೆ ಕಾಲು ಹಾಕಿ ಕೂಡುವುದು (Crossed Legs)
ತೆರೆದ ಕಣ್ಣುಗಳಿಂದಲೇ ಕನಸು ಕಾಣುವ ಇವರು ಯಾವಾಗಲೂ ಔಟ್ ಆಫ್ ಬಾಕ್ಸ್ ಎಂದರೆ ಸೃಜನಾತ್ಮಕ ಆಲೋಚನೆಗಳಿಂದ ಪುಟಿಯುತ್ತಿರುತ್ತಾರೆ. ಕಾಲ್ಪನಿಕ ಚಿಂತನೆಗಳನ್ನು ಹೊಂದಿರುವ ಇವರು ಕನಸುಗಾರರು. ನೆರೆದ ಗುಂಪಿನಲ್ಲಿಯೂ ತಮ್ಮ ಆಲೋಚನೆಯಲ್ಲಿಯೇ ವಿಹರಿಸುವ ಶಕ್ತಿಯುಳ್ಳವರು. ಇತರರಿಗಿಂತ ವ್ಯಕ್ತಿತ್ವದಲ್ಲಿ ಘನತೆಯುಳ್ಳವರು. ಯಾರ ಮೇಲೂ ಅವಲಂಬಿಸದೆ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳುವ ಬಗೆ ಚೆನ್ನಾಗಿ ಗೊತ್ತು. ಹೀಗೆ ಕುಳಿತುಕೊಳ್ಳುವ ಭಂಗಿಯಿಂದ ಅವರಲ್ಲಿರುವ ಭಯ ಮತ್ತು ಅಭದ್ರತೆಯನ್ನು ಮರೆಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆಯಾದರೂ ಅವರ ಪಾದ ಜೊತೆಗಿರುವ ವ್ಯಕ್ತಿಯತ್ತ ತೋರುವಂತಿದ್ದರೆ, ಅವರೊಂದಿಗೆ ನಡೆಯುತ್ತಿರುವ ಸಂಭಾಷಣೆ ಆತ್ಮವಿಶ್ವಾಸ ಮತ್ತು ಆನಂದದಿಂದ ಕೂಡಿದೆ ಎಂದರ್ಥ. ಆದರೆ ಮೈಮುದುಡಿಕೊಂಡು ಕಾಲುಬಿಗಿ ಮಾಡಿಕೊಂಡು ಕುಳಿತಿದ್ದರೆ ಮನಸ್ಸು ಚಡಪಡಿಸುತ್ತಿದೆ ಅಥವಾ ಮನಸ್ಸು ಬೇರೆಡೆ ಇದೆ ಎಂಬುದನ್ನು ಸೂಚಿಸುತ್ತದೆ.
ಹಿಮ್ಮಡಿಗಳನ್ನು ಅಡ್ಡವಾಗಿಡುವುದು (Ankle Crossed)
ಹೀಗೆ ಕುಳಿತುಕೊಳ್ಳುವುದು ಬ್ರಿಟಿಷ್ ರಾಜಮನೆತನದಲ್ಲಿ ಸಾಮಾನ್ಯವಾಗಿದ್ದ ಸಂಗತಿ. ಇಂಥವರು ರಾಜರಾಣಿಯಂಥ ಜೀವನಶೈಲಿಯನ್ನು ಹೊಂದಿದ್ದಾರೆ ಎಂದರ್ಥ. ಸ್ವಚ್ಛ ಮನಸಿನವರಾದ ಇವರು ಅತ್ಯಂತ ವಿಧೇಯ, ನಮ್ರ ಸ್ವಭಾವದವರು. ಯಾವುದೇ ಪರಿಸ್ಥಿತಿಯಲ್ಲಿಯೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳರು. ಭಯ ಇವರಲ್ಲಿ ಅಪರೂಪ. ಇತರರಲ್ಲಿ ಆತ್ಮವಿಶ್ವಾಸ ತುಂಬುವ ಗುಣ ಇವರದು. ಮಾಡುವ ಕೆಲಸದಲ್ಲಿ ಸ್ವಂತ ಆಲೋಚನೆ ಇದ್ದು ತಮ್ಮದೇ ಕ್ರಮದಲ್ಲಿ ಮಾಡಿ ಮುಗಿಸುತ್ತಾರೆ. ಗುರಿಗಳನ್ನು ಸಾಧಿಸಲು ಕಠಿಣಶ್ರಮದಿಂದ ಕೆಲಸ ನಿರ್ವಹಿಸುತ್ತಾರೆ. ಶ್ರಮಜೀವಿಗಳಾದ ಇವರು ದೃಢನಂಬಿಕೆಯುಳ್ಳವರು. ಉತ್ತಮ ಕೇಳುಗರು ಮತ್ತು ಪ್ರತಿಯೊಬ್ಬರ ರಹಸ್ಯವನ್ನೂ ಕಾಪಾಡುವವರು. ತಮ್ಮ ಮುಂದಿನ ಯೋಜನೆಗಳ ವಿಷಯವಾಗಿ ಯಾರ ಬಳಿಯೂ ಹಂಚಿಕೊಳ್ಳರು. ಖಾಸಗೀತನವನ್ನು ಕಾಪಾಡಿಕೊಳ್ಳುವವರು. ಅಶಾಂತಿ ಅಥವಾ ಅಭದ್ರತೆಯನ್ನು ಮರೆಮಾಚುವ ಕೌಶಲವೂ ಇವರಿಗೆ ಗೊತ್ತು.
ಮೊಣಕಾಲಿನ ಮೇಲೆ ಪಾದವನ್ನಿಡುವುದು (Leg Lock)
ಹೀಗೆ ಕುಳಿತುಕೊಳ್ಳುವವರು ಆತ್ಮವಿಶ್ವಾಸ ಮತ್ತು ಅಧಿಕಾರಯುತವಾದ ನಡೆ ಹೊಂದಿರುವವರು. ಇತ್ತೀಚಿನ ದಿನಗಳಲ್ಲಿ ಇದು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಹಾಗೆಂದು ಇದಕ್ಕೆ ಲಿಂಗಬೇಧವಿಲ್ಲ. ಹೆಚ್ಚು ಪ್ರಬಲ, ಶಾಂತ, ಆತ್ಮವಿಶ್ವಾಸ ಮತ್ತು ತಾರುಣ್ಯವನ್ನು ಹೊಂದಿರುವವರು ಎಂದರ್ಥ. ಏನಾದರೂ ಕೊರತೆ ಅನುಭವಿಸುತ್ತಿದ್ದರೂ ಶಕ್ತಿಮೀರಿ ಅದನ್ನು ನೀಗಿಸಿಕೊಳ್ಳಲು ಪ್ರಯತ್ನಿಸುವ ಮನೋಭಾವ ಅವರಲ್ಲಿರುತ್ತದೆ. ಎಲ್ಲರೂ ಅನುಭವಿಸುವ ಜೀವನದ ಆನಂದದ ವಿಷಯಗಳು ಇವರಲ್ಲಿ ಕಡಿಮೆಯೇ. ಏಕೆಂದರೆ ಯಾವಾಗಲೂ ವೃತ್ತಿಜೀವನದಕ್ಕಾಗಿ ಹೆಚ್ಚು ಶ್ರಮಿಸುವುದೇ ಇವರ ಆದ್ಯತೆ. ಎಲ್ಲವನ್ನೂ ದೈವಿಕದೃಷ್ಟಿಕೋನದಿಂದ ನೋಡುತ್ತಾರೆ. ಇವರ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿರುತ್ತದೆ. ಸ್ಪರ್ಧಾ ಮತ್ತು ವಾದಪ್ರಿಯರು ಇವರು ಆದುದರಿಂದ ತಮ್ಮದೇ ಆದ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವ ಮತ್ತು ಇಷ್ಟವಾಗದ ಅಭಿಪ್ರಾಯಗಳನ್ನು ತಿರಸ್ಕರಿಸುವ ನೇರವಂತಿಕೆ ಇವರದಾಗಿರುತ್ತದೆ.