ಬೆಂಗಳೂರು: ಈಗಾಗಲೇ ಸುಪ್ರೀಂ ಕೋರ್ಟ್ ನಿಂದ ( Supreme Court ) ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಈ ಬೆನ್ನಲ್ಲೇ ಬಿಬಿಎಂಪಿ ಚುನಾವಣೆ ( BBMP Election ) ಕೂಡ ಘೋಷಣೆ ಆಗಲಿದೆ ಎನ್ನಲಾಗಿತ್ತು. ಆದ್ರೇ ಮತ್ತೆ ಚುನಾವಣೆ ಮೂರು ತಿಂಗಳ ಕಾಲವಕಾಶವನ್ನು ರಾಜ್ಯ ಸರ್ಕಾರ ಕೇಳಿದೆ.
BIG NEWS: ಬೇನಾಮಿ ಹೆಸರಲ್ಲಿ ಸೈಲೆಂಟ್ ಸುನೀಲನಿಗೆ ಕಸದ ಟೆಂಡರ್ ಕೊಡಿಸಿದ ಸಚಿವ ಯಾರು? – ಕಾಂಗ್ರೆಸ್ ಪ್ರಶ್ನೆ
ಇಂದು ಬಿಬಿಎಂಪಿ ಚುನಾವಣೆಗೆ ಮತ್ತೆ ಕಾಲಾವಕಾಶ ಕೋರಿದ ಅರ್ಜಿಯನ್ನು ಹೈಕೋರ್ಟ್ ನಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಾಯಿತು. ಈ ವೇಳ ನ್ಯಾಯಪೀಠಕ್ಕೆ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿಯ ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧದ ಮಾಹಿತಿಯನ್ನು ಕೋರಲಾಗಿದೆ. ರಾಜಕೀಯ ಹಿಂದುಳಿದಿರುವುಕೆ ಬಗ್ಗೆ ಮಾಹಿತಿ ಕೇಳಿದ್ದಕ್ಕೆ, ಸಮಿತಿಯು ಕಾಲಾವಕಾಶ ಕೇಳಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ಮಾಹಿತಿ ನೀಡಿದರು.
BIG BREAKING NEWS: 1.55 ಲಕ್ಷ ಹೊಸ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ | New Ration Card
ರಾಜ್ಯ ಸರ್ಕಾರದ ಅರ್ಜಿಗೆ ಚುನಾವಣಾ ಆಯೋಗವು ಆಕ್ಷೇಪ ವ್ಯಕ್ತ ಪಡಿಸಿತು. ಅಲ್ಲದೇ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲೂ ಚುನಾವಣೆಗೆ ನಿರ್ದೇಶ ಕೋರಲಾಗಿದೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆಯೂ ನಡೆಯುವಂತ ಸಾಧ್ಯತೆ ಇದೆ ಎಂಬುದಾಗಿ ವಕೀಲ ಕೆ ಎನ್ ಫಣೀಂದ್ರ ಮಾಹಿತಿ ನೀಡಿದರು. ಹೀಗಾಗಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 6ಕ್ಕೆ ಮುಂದೂಡಿಕೆ ಮಾಡಿತು.
BIG BREAKING NEWS: 1.55 ಲಕ್ಷ ಹೊಸ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ | New Ration Card