ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2022-23ನೇ ಸಾಲಿನ ಶಾಸನಶಾಸ್ತç ಡಿಪ್ಲೊಮಾ ತರಗತಿಗಳನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿಯಾದ ನೇ.ಭ. ರಾಮಲಿಂಗಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸನಗಳ ಲಿಪಿಗಳನ್ನು ಓದುವ ತರಬೇತಿ, ಶಾಸನಗಳ ಸಂಗ್ರಹ ವಿಧಾನ, ಅಧ್ಯಯನ, ಪ್ರಬಂಧ ರಚನೆ ಇತ್ಯಾದಿ ಮೌಲಿಕ ಅಂಶಗಳನ್ನು ತರಗತಿಗಳಲ್ಲಿ ಬೋಧಿಸಲಾಗುವುದು.
ಆಸಕ್ತರು ಶಾಸನಶಾಸ್ತ್ರ ಡಿಪ್ಲೊಮಾ ಕೋರ್ಸುಗಳ ನಿಯಮಾವಳಿ ಮತ್ತು ಅರ್ಜಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ಮಳಿಗೆಯಿಂದ ರೂ. 25/- ಶುಲ್ಕವನ್ನು ಸಲ್ಲಿಸಿ ದಿನಾಂಕ 10-08-2022ರಿಂದ ಪಡೆದುಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-08-2022 ಮತ್ತು ದಂಡಶುಲ್ಕ ರೂ. 50/- ಸಹಿತ ದಿನಾಂಕ 15-09-2022 ಕೊನೆಯ ದಿನಾಂಕವಾಗಿದೆ.
ಕೋರ್ಸ್ ಅವಧಿಯು 9 ತಿಂಗಳುಗಳದ್ದಾಗಿದ್ದು, ಹಾಜರಾತಿ ಕಡ್ಡಾಯವಾಗಿರುತ್ತದೆ. ವಾರಕ್ಕೆ 4 ದಿನ (ಮಂಗಳವಾರದಿಂದ ಶುಕ್ರವಾರದ ವರೆಗೆ) ಸಂಜೆ 6 ರಿಂದ 7 ಗಂಟೆ ವರೆಗೆ ತರಗತಿಗಳನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ನಡೆಸಲಾಗುತ್ತದೆ.
ಶಿವಮೊಗ್ಗ: ಮೆಕ್ಕೆಜೋಳ ಬೆಳೆ ಹಾನಿ: ವೈಯಕ್ತಿಕ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಡಿಸಿ ಸೂಚನೆ
ಈ ಸಂಬಂಧ ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು –560018. ಇವರನ್ನು ಮೊಬೈಲ್ ಸಂಖ್ಯೆ : 8660777643 ಮೂಲಕ ಸಂಪರ್ಕಿಸಬಹುದು.