ಕಲಬುರಗಿ : ಹಲ್ಲಿ ಬಿದ್ದ ಆಹಾರ ಸೇವಿಸಿ ಓರ್ವ ಅಸ್ವಸ್ಥನಾಗಿದ್ದು, ಹಲವರಿಗೆ ವಾಂತಿ ಭೇದಿ ಆಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ವಾಸವಾದತ್ತ ಸಿಮೆಂಟ್ ಫ್ಯಾಕ್ಟರಿಯಲ್ಲಿ ಈ ಘಟನೆ ಸಂಭವಿಸಿದೆ.ಅಸ್ವಸ್ಥಗೊಂಡ ಕಾರ್ಮಿಕನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ವಾಸವಾದತ್ತ ಸಿಮೆಂಟ್ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಫ್ಯಾಕ್ಟ್ರಿಯಲ್ಲಿನ ಕಾರ್ಮಿಕರ ಕ್ಯಾಂಟೀನ್ ಆಹಾರದಲ್ಲಿ ಹಲ್ಲಿ ಪತ್ತೆಯಾಗಿದೆ. ವಾಂತಿ, ಭೇದಿ ಆಗಿರುವ ಹಲವರಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ನೀಡಲಾಗುತ್ತಿದೆ.