ಬೆಂಗಳೂರು : ರಂಜಾನ್ ತಿಂಗಳಿನಲ್ಲಿ ಉರ್ದು ಶಾಲಾ ಸಮಯ ಬದಲಾವಣೆ ಮಾಡಿದ ವಿಚಾರವಾಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಏನು ಶಾಲೆ ಕಲಿಯುವುದು ಬೇಡ ಭಯೋತ್ಪಾದಕರು, ದೇಶ ವಿರೋಧಿ ಚಟುವಟಿಕೆಗೆ ಬಳಸಿದರೆ ಒಳ್ಳೆಯದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ಮುಸ್ಲಿಂ ತುಷ್ಟಿಕರಣ ಮಾಡುತ್ತಿದ್ದಾರೆ. ಸಮಾನತೆ ಶುದ್ಧಕ್ಕೆ ಅರ್ಥವಿಲ್ಲದ ರೀತಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ಕಿಡಿ ಕಾರಿದರು.
ಇದು ಅತ್ಯಂತ ಹೇಯವಾದ ಕೆಲಸ ಹಿಂದೂ ಹಬ್ಬಗಳಲ್ಲೂ ಮಕ್ಕಳಿಗೆ ರಜೆ ಕೊಡಬೇಕು ಎಂದು ಅಗ್ರಹಿಸಿದರು. ದ್ವೇಷ ಭಾಷಣ ಪ್ರತಿಬಂಧಕ ವಿದೇಯಕ ರಾಷ್ಟ್ರಪತಿಗೆ ರವಾನಿಸಿದ ವಿಚಾರವಾಗಿ ಕಾಂಗ್ರೆಸ್ ದ್ವೇಷ ಭಾಷಣ ಬಿಲ್ ತರುವುದು ಸಂವಿಧಾನ ವಿರೋಧವಾಗಿದೆ ಎಂದರು.








