ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ( Prime Minister Narendra Modi ) ನಿಂತು ಭಾಷಣ ಮಾಡೋ ಕೆಂಪು ಕೋಟೆಯನ್ನು ( Red Fort ) ಕಟ್ಟಿದ್ದೇ ಮುಸ್ಲೀಮರಾಗಿದ್ದಾರೆ. ಇಂತಹ ಕೆಂಪು ಕೋಟೆಯನ್ನು ಸಂಸದ ಪ್ರತಾಪ್ ಸಿಂಹ ( MP Pratap Simha ) ಒಡೆಸಿ ಹಾಕಿ ಬಿಡುತ್ತಾರಾ ಎಂಬುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ( Karnataka JDS State President CM Ibrahim ) ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು ಅವರು ಮೈಸೂರಿನಲ್ಲಿ ನಿರ್ಮಿಸಿರುವಂತ ಮಸೀದಿ ಗೋಪುರದ ರೀತಿಯ ಬಸ್ ನಿಲ್ದಾಣ ( Bus Stop ) ವಿವಾದ ಸಂಬಂಧ ಮಾತನಾಡಿ, ಮೈಸೂರು ಸಾಂಸ್ಕೃತಿಕ ನಗರಿಯಾಗಿದೆ. ಅಲ್ಲದೇ ವಿದ್ಯಾ ನಗರಿ ಕೂಡ ಹೌದು. ಆದ್ರೇ ಸಂಸದ ಪ್ರತಾಪ್ ಸಿಂಹ ಮಾತ್ರ ಅಜ್ಞಾನದ ಕಡೆಗೆ ಕರೆದೊಯ್ಯುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಬಿಗ್ ಶಾಕ್: ‘ಪುಣ್ಯಕೋಟಿ ದತ್ತು ಯೋಜನೆ’ ಅನುಷ್ಠಾನಕ್ಕೆ ‘ವೇತನ ಕಟ್’
ಟಿಪ್ಪು ನಂಜುಂಡೇಶ್ವರನಿಗೆ ಕೊಟ್ಟ ಪಂಚ ವಜ್ರವನ್ನು ಪ್ರತಾಪ್ ಸಿಂಹ ವಾಪಾಸ್ ಇಸ್ಕೊಕೊಳ್ಳುತ್ತಾರಾ? ಪ್ರಧಾನಿ ಮೋದಿಯವರು ನಿಂತು ಮಾತನಾಡುವಂತ ಕೆಂಪು ಕೋಟೆಯನ್ನು ಮುಸ್ಲೀಮರು ಕಟ್ಟಿದ್ದು. ಹಾಗಂತ ಅದನ್ನು ಪ್ರತಾಪ್ ಸಿಂಹ ಒಡೆಸಿ ಬಿಡುತ್ತಾರಾ? ಎಂಬುದಾಗಿ ಪ್ರಶ್ನಿಸಿದರು.
Good News : ಭಾರತದಲ್ಲಿ ಶೀಘ್ರ ‘ಗರ್ಭಕಂಠದ ಕ್ಯಾನ್ಸರ್’ ಲಸಿಕೆ ಲಭ್ಯ ; WHO ಮಾಹಿತಿ |Cervical Cancer vaccine
ಮುಸ್ಲೀಮರಲ್ಲಿ ಜಯಂತಿ, ಮೆರವಣಿಗೆಗೆ ಅವಕಾಶವಿಲ್ಲ. ಹೀಗಿದ್ದೂ ಟಿಪ್ಪು ಜಯಂತಿ ಮಾಡಿದ್ದು ದೊಡ್ಡ ತಪ್ಪು. ಮತರಾಜಕಾರಣಕ್ಕಾಗಿ ಟಿಪ್ಪು ಜಯಂತಿ ಮಾಡಿದ್ದಾರೆ. ನಾನು ಇದು ಬೇಡ ಅಂತ ಹೇಳಿದ್ದೆ ಎಂದು ತಿಳಿಸಿದರು.