ಬೆಂಗಳೂರು: ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ ನನ್ನ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜ. ಸಾಲ ಪಡೆಯುವುದು ಅಪರಾಧನಾ? ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಪ್ರಶ್ನಿಸಿದ್ದಾರೆ.
ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ ನನ್ನ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜ. ಸಾಲ ಪಡೆಯುವುದು ಅಪರಾಧನಾ? 13/19#KillerBJP
— Siddaramaiah (@siddaramaiah) October 30, 2022
ಈ ಕುರಿತಂತೆ ಸುದೀರ್ಘ ಟ್ವಿಟ್ ಮಾಡಿರುವಂತ ಅವರು, ರಾಜ್ಯ ಬಿಜೆಪಿ ಸರ್ಕಾರದ ( BJP Government ) ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬೀಳಲು ಸಾಧ್ಯ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅವುಗಳನ್ನೂ ಸೇರಿಸಿ ತನಿಖೆ ಮಾಡಿಸಿ, ನಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ.
ರಾಜ್ಯ @BJP4Karnataka ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬೀಳಲು ಸಾಧ್ಯ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅವುಗಳನ್ನೂ ಸೇರಿಸಿ ತನಿಖೆ ಮಾಡಿಸಿ, ನಮ್ಮ ಅಭ್ಯಂತರ ಇಲ್ಲ. 1/19#KillerBJP pic.twitter.com/1WqLSPfEEy
— Siddaramaiah (@siddaramaiah) October 30, 2022
ಲಂಚಕೊಟ್ಟ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ, ಇನ್ನೊಬ್ಬರು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ವರ್ಗಾವಣೆಗಾಗಿ ಲಂಚ ಕೊಟ್ಟಿರುವ ಮತ್ತೊಬ್ಬ ಅಧಿಕಾರಿಗೆ ಹೃದಯಾಘಾತವಾಗಿದೆ. ಇನ್ನೇನು ಸಾಕ್ಷಿಗಳು ಬೇಕು ಬಿಜೆಪಿ, ಮುಖ್ಯಮಂತ್ರಿಗಳೇ ? ಎಂದು ಕೇಳಿದ್ದಾರೆ.
ಲಂಚಕೊಟ್ಟ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ, ಇನ್ನೊಬ್ಬರು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ವರ್ಗಾವಣೆಗಾಗಿ ಲಂಚ ಕೊಟ್ಟಿರುವ ಮತ್ತೊಬ್ಬ ಅಧಿಕಾರಿಗೆ ಹೃದಯಾಘಾತವಾಗಿದೆ.
ಇನ್ನೇನು ಸಾಕ್ಷಿಗಳು ಬೇಕು @BJP4Karnataka, @CMofKarnataka? 2/19#KillerBJP pic.twitter.com/qAmj5sw2j8— Siddaramaiah (@siddaramaiah) October 30, 2022
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದಾಗೆಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾಖಲಾತಿ ಕೊಡಿ ಎಂದು ಕೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಒಂದು ಕುಟಿಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯ @BJP4Karnataka ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದಾಗೆಲ್ಲ ಮುಖ್ಯಮಂತ್ರಿ @BSBommai ಅವರು ದಾಖಲಾತಿ ಕೊಡಿ ಎಂದು ಕೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಒಂದು ಕುಟಿಲ ಪ್ರಯತ್ನ ಮಾಡುತ್ತಿದ್ದಾರೆ. 3/19#KillerBJP
— Siddaramaiah (@siddaramaiah) October 30, 2022
ಸಾಮಾನ್ಯವಾಗಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ದಾಖಲಾತಿ ಒದಗಿಸುವುದು ಕಷ್ಟ. ಆದರೂ ಗುತ್ತಿಗೆದಾರರ ಸಂಘದವರು 6-7-2021ರಲ್ಲಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೂರಿದ್ದಾರೆ. ನ್ಯಾಯಾಂಗ ತನಿಖೆ ನಡೆಸುವುದಾದರೆ ಅಗತ್ಯ ದಾಖಲೆ ಒದಗಿಸುವುದಾಗಿಯೂ ಹೇಳಿದ್ದಾರೆ. ಆದರೂ ಪ್ರಧಾನಿ ಯಾವ ಕ್ರಮ ಕೈಗೊಂಡಿಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.
ಸಾಮಾನ್ಯವಾಗಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ದಾಖಲಾತಿ ಒದಗಿಸುವುದು ಕಷ್ಟ. ಆದರೂ ಗುತ್ತಿಗೆದಾರರ ಸಂಘದವರು 6-7-2021ರಲ್ಲಿ @narendramodi ಅವರಿಗೆ ಪತ್ರ ಬರೆದು ದೂರಿದ್ದಾರೆ. ನ್ಯಾಯಾಂಗ ತನಿಖೆ ನಡೆಸುವುದಾದರೆ ಅಗತ್ಯ ದಾಖಲೆ ಒದಗಿಸುವುದಾಗಿಯೂ ಹೇಳಿದ್ದಾರೆ. ಆದರೂ @PMOIndia ಯಾವ ಕ್ರಮ ಕೈಗೊಂಡಿಲ್ಲ. 4/19#KillerBJP
— Siddaramaiah (@siddaramaiah) October 30, 2022
40% ಭ್ರಷ್ಟಾಚಾರದ ಬಗ್ಗೆ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೇಳಿದರೆ ಬಿಜೆಪಿ ಸರ್ಕಾರ ನಿರಾಕರಿಸಿದೆ. ಚರ್ಚೆಯನ್ನು ಎದುರಿಸಲಾಗದೆ ನಮ್ಮ ವಿರುದ್ಧ ಪ್ರತಿ ಆರೋಪ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿ ಏನು ಮಾಡುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.
40% ಭ್ರಷ್ಟಾಚಾರದ ಬಗ್ಗೆ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೇಳಿದರೆ @BJP4Karnataka ಸರ್ಕಾರ ನಿರಾಕರಿಸಿದೆ. ಚರ್ಚೆಯನ್ನು ಎದುರಿಸಲಾಗದೆ ನಮ್ಮ ವಿರುದ್ಧ ಪ್ರತಿ ಆರೋಪ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿ ಏನು ಮಾಡುತ್ತಿತ್ತು? 5/19#KillerBJP
— Siddaramaiah (@siddaramaiah) October 30, 2022
ಪಿಎಸ್ಐ ನೇಮಕಾತಿಯಲ್ಲಿ ಯಾವ ಅಕ್ರಮಗಳು ನಡೆದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. ಹಾಗಾದರೆ ಎಡಿಜಿಪಿ ಅಮೃತ್ ಪೌಲ್ ಅವರು ಜೈಲು ಸೇರಿದ್ದು ಯಾಕೆ? ಎಂದು ಕೇಳಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ಯಾವ ಅಕ್ರಮಗಳು ನಡೆದಿಲ್ಲ ಎಂದು ಗೃಹ ಸಚಿವ @JnanendraAraga ಹಾಗೂ ಮುಖ್ಯಮಂತ್ರಿ @BSBommai ಅವರು ಹೇಳಿದ್ದರು. ಹಾಗಾದರೆ ಎಡಿಜಿಪಿ ಅಮೃತ್ ಪೌಲ್ ಅವರು ಜೈಲು ಸೇರಿದ್ದು ಯಾಕೆ? 6/19#KillerBJP
— Siddaramaiah (@siddaramaiah) October 30, 2022
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದಲೇ ದೀಪಾವಳಿ ಉಡುಗೊರೆ ನೆಪದಲ್ಲಿ ಆಯ್ದ ಪತ್ರಕರ್ತರಿಗೆ ಲಕ್ಷ, ಲಕ್ಷ ರೂಪಾಯಿ ಲಂಚ ನೀಡಿರುವುದನ್ನು ಪತ್ರಕರ್ತರೇ ಬಹಿರಂಗ ಪಡಿಸಿದ್ದಾರೆ. ನಮ್ಮ ಆರೋಪಕ್ಕೆ ಸಾಕ್ಷಿ ಕೇಳುತ್ತಿರಲ್ಲಾ ಮುಖ್ಯಮಂತ್ರಿಗಳೇ, ಪತ್ರಕರ್ತರೇ ಸಾಕ್ಷಿ ಕೊಟಿದ್ದಾರಲ್ಲಾ? ಎಂದಿದ್ದಾರೆ.
ಮುಖ್ಯಮಂತ್ರಿ @BSBommai ಅವರ ಕಚೇರಿಯಿಂದಲೇ ದೀಪಾವಳಿ ಉಡುಗೊರೆ ನೆಪದಲ್ಲಿ ಆಯ್ದ ಪತ್ರಕರ್ತರಿಗೆ ಲಕ್ಷ, ಲಕ್ಷ ರೂಪಾಯಿ ಲಂಚ ನೀಡಿರುವುದನ್ನು ಪತ್ರಕರ್ತರೇ ಬಹಿರಂಗ ಪಡಿಸಿದ್ದಾರೆ. ನಮ್ಮ ಆರೋಪಕ್ಕೆ ಸಾಕ್ಷಿ ಕೇಳುತ್ತಿರಲ್ಲಾ ಮುಖ್ಯಮಂತ್ರಿಗಳೇ, ಪತ್ರಕರ್ತರೇ ಸಾಕ್ಷಿ ಕೊಟಿದ್ದಾರಲ್ಲಾ? 7/19#KillerBJP
— Siddaramaiah (@siddaramaiah) October 30, 2022
ವಿವೇಕ್ ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಅವರಿಂದ ಸಾಲ ಪಡೆದದ್ದಕ್ಕೂ ಅವರ ನೇಮಕಕ್ಕೂ ಸಂಬಂಧ ಇಲ್ಲ. ಇದನ್ನೂ ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು ಬಸವರಾಜ ಬೊಮ್ಮಾಯಿ ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ ಎಂದು ತಿಳಿಸಿದ್ದಾರೆ.
ವಿವೇಕ್ ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಅವರಿಂದ ಸಾಲ ಪಡೆದದ್ದಕ್ಕೂ ಅವರ ನೇಮಕಕ್ಕೂ ಸಂಬಂಧ ಇಲ್ಲ. ಇದನ್ನೂ ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು @BSBommai ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ. 14/19#KillerBJP
— Siddaramaiah (@siddaramaiah) October 30, 2022