ಬೆಂಗಳೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವಿಧಾನಸೌಧದ ಮುಂದೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು ಈ ಒಂದು ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಒಂದು ವಿಚಾರವಾಗಿ ತಮ್ಮ ಟ್ವಿಟ್ಟರ್ ಖಾತೆಯ X ನಲ್ಲಿ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ @narendramodi ಅವರ @BJP4India ಸರ್ಕಾರದ ವಾಷಿಂಗ್ ಮೆಷಿನ್ ಒಳಹೋಗಿ ಹೊರಬಂದು ಪರಮಪವಿತ್ರರಾದ ಭ್ರಷ್ಟರ ಪಟ್ಟಿ ಬೇಕಾ? ಜಾಮೀನಿನ ಮೇಲಿರುವ ಕುಮಾರಸ್ವಾಮಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಮುದ್ದಾಡುತ್ತಿರುವ ನಿಮ್ಮ ದ್ವಂದ್ವ ನೀತಿಗೆ ಮಿತಿಯಿಲ್ಲವೇ ಮೋದಿ ಅವರೇ?
ಮುಖ್ಯಮಂತ್ರಿ ಹುದ್ದೆಯನ್ನೇ ಎರಡೂವರೆ ಸಾವಿರ ಕೋಟಿಗೆ ಮಾರಾಟ ಮಾಡಿದ್ದೀರೆಂಬ ಆರೋಪ ಹೊತ್ತಿರುವ ನಿಮ್ಮ ಬಾಯಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತು ಬರುವುದೇ ನಾಚಿಕೆಗೇಡು ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ @narendramodi ಅವರ @BJP4India ಸರ್ಕಾರದ ವಾಷಿಂಗ್ ಮೆಷಿನ್ ಒಳಹೋಗಿ ಹೊರಬಂದು ಪರಮಪವಿತ್ರರಾದ ಭ್ರಷ್ಟರ ಪಟ್ಟಿ ಬೇಕಾ? ಜಾಮೀನಿನ ಮೇಲಿರುವ ಕುಮಾರಸ್ವಾಮಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಮುದ್ದಾಡುತ್ತಿರುವ ನಿಮ್ಮ ದ್ವಂದ್ವ ನೀತಿಗೆ ಮಿತಿಯಿಲ್ಲವೇ ಮೋದಿ ಅವರೇ?
ಮುಖ್ಯಮಂತ್ರಿ… pic.twitter.com/2itXLtWVdR
— Siddaramaiah (@siddaramaiah) September 26, 2024