ನವದೆಹಲಿ: ಇಂದು ಭಾರತ ಸೇರಿದಂತೆ ಜಾಗತಿಕವಾಗಿ ಇನ್ಟಾಗ್ರಾಂ ಡೌನ್ ಆಗಿರೋದಾಗಿ ತಿಳಿದು ಬಂದಿದೆ. ಹಲವು ಬಳಕೆದಾರರು ಈ ಬಗ್ಗೆ ಸಾಮಾಜಿಕ ಮಾದ್ಯಮಗಳಲ್ಲಿ ವರದಿ ಮಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ವಾಟ್ಸಾಪ್ ಸರ್ವರ್ ಡೌನ್ ಆಗಿತ್ತು, ಈ ಬೆನ್ನಲ್ಲೇ ಇಂದು ಪ್ರಸಿದ್ಧ ಸಾಮಾಜಿಕ ಮಾಧ್ಯಮ ಇನ್ಟಾಗ್ರಾಂ ಡೌನ್ ಆಗಿರೋದಾಗಿ ತಿಳಿದು ಬಂದಿದೆ.
ಇಂದು ಫೋಟೋ-ಶೇರಿಂಗ್ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ನ ( photo-sharing app Instagram ) ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಅನ್ನು ಬಳಸುವಾಗ ಸಮಸ್ಯೆಗಳನ್ನು ಎದುರಿಸಿದ ನಂತರ ಅಪ್ಲಿಕೇಶನ್ ಡೌನ್ ಆಗಿದೆ ಎಂದು ದೂರಿದ್ದಾರೆ.
ಕೆಲವು ಬಳಕೆದಾರರು ಟ್ವಿಟ್ಟರ್ ನಲ್ಲಿ ಚಿತ್ರಗಳನ್ನು ಮತ್ತು ರೀಲ್ ಗಳನ್ನು ಪೋಸ್ಟ್ ಮಾಡಲು ಅಥವಾ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
Y’all needs to fix Instagram it’s buggin again @instagram
— Ig: 1marktoofunny (@markrealquotes) October 27, 2022