ಮಂಡ್ಯ: ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಅನುಗುಣವಾಗಿ ಅವರಿಗೆ ಮೀಸಲಾತಿ ನೀಡಬೇಕು ಎಂದು ಬಹಳ ವರ್ಷಗಳಿಂದ ಒತ್ತಾಯ ಇದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ಗಳಿಗೆ ಮೀಸಲಾತಿ ( ST Reservation ) ಎಸ್ ಸಿಗಳಿಗೆ ಶೇ.15 ಹಾಗೂ ಎಸ್.ಟಿ ಗಳಿಗೆ ಶೇ.7.5 ರಷ್ಟು ಮೀಸಲಾತಿ ನೀಡಲಾಗಿದೆ. ಎರಡೂ ಸೇರಿಸಿದರೆ ಶೇ.22.5ರಷ್ಟು ಇದೆ. ಕರ್ನಾಟಕದಲ್ಲಿ ಎಸ್.ಸಿ ಗಳಿಗೆ ಶೇ.15 ಹಾಗೂ ಎಸ್.ಟಿಗಳಿಗೆ ಶೇ.3ರಷ್ಟು ಮೀಸಲಾತಿ ಇದ್ದು, ಒಟ್ಟು ಶೇ.18ರಷ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೀಸಲಾತಿ ನಡುವೆ ಶೇ.4.5ರಷ್ಟು ವ್ಯತ್ಯಾಸವಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಹೇಳಿದ್ದಾರೆ.
ನಗರದಲ್ಲಿ ಇಂದು ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇದು ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಈ ವರ್ಗಕ್ಕೆ ಸೇರಿದ ಜನ ಮೀಸಲಾತಿ ಹೆಚ್ಚಿಸಿ ಹೋರಾಟ ಮಾಡುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ಎಸ್.ಸಿಗಳು ಶೇ.17.15ರಷ್ಟಿದ್ದು, ಎಸ್.ಟಿಗಳು ಶೇ.6.95 ರಷ್ಟಿಸಿದ್ದಾರೆ. ಎರಡೂ ವರ್ಗ ಸೇರಿಸಿ, ಶೇ.24.10 ರಷ್ಟು ಜನರಿದ್ದಾರೆ. ಆದರೆ ಮೀಸಲಾತಿ ಕೇವಲ ಶೇ.18ರಷ್ಟಿದೆ. ಹೀಗಾಗಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಬಂದಿದೆ ಎಂದರು.
ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಅವರು 02-07-2020ರಲ್ಲಿ ವರದಿ ನೀಡಿದ್ದು, ಆಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ವರದಿ ಕೊಟ್ಟು ಎರಡು ವರ್ಷ ಮೂರು ತಿಂಗಳಾಗಿದ್ದು, ಇಂದಿನವರೆಗೂ ಈ ವರದಿ ಒಪ್ಪಿ ಅದನ್ನು ಜಾರಿ ಮಾಡಿಲ್ಲ. ಅದಕ್ಕಾಗಿ ಎಸ್ ಟಿ ಜನಾಂಗದ ವಾಲ್ಮೀಕಿ ಮಠದ ಸ್ವಾಮಿಜಿ ಧರಣಿ ಆರಂಭಿಸಿದ್ದಾರೆ. ನಾನು ಹಾಗೂ ಪರಿಶಿಷ್ಟ ಸಮುದಾಯದ ಶಾಸಕರು, ಅಧ್ಯಕ್ಷರು ಚರ್ಚೆ ಮಾಡಿದ್ದು, ಈ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಮಿತಿಯು ಎಸ್.ಟಿ ಜನಾಂಗದವರಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿಯನ್ನು ಶೇ.3ರಿಂದ ಶೇ.7ರಷ್ಟು ಹೆಚ್ಚಿಸಬೇಕು. ಎಸ್.ಸಿ ಜನಾಂಗದವರಿಗೆ ಶೇ.15ರಿಂದ ಶೇ.17ರಷ್ಟು ಹೆಚ್ಚಾಗಬೇಕು. ಒಟ್ಟಾರೆ ಮೀಸಲಾತಿಯು ಶೇ.6ರಷ್ಟು ಹೆಚ್ಚಾಗಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ. ನಾಗಮೋಹನ್ ದಾಸ್ ಅವರು ಮೀಸಲಾತಿ ಬಗ್ಗೆ ಅಧ್ಯಯನ ಮಾಡಿದ್ದು, ಸಂವಿಧಾನದ ಮೇಲೆ ನಂಬಿಕೆ ಹೊಂದಿರುವವರಾಗಿದ್ದಾರೆ. ಈ ವರದಿ ಬಂದು 2 ವರ್ಷವಾಗಿದ್ದರೂ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಬಿಜೆಪಿ ದಲಿತ ವಿರೋಧಿಗಳಾಗಿದ್ದು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲದವರಾಗಿದ್ದಾರೆ ಎಂದು ಗುಡುಗಿದರು.
ಸೀಮಿತ ಬಳಕೆದಾರರಿಗೆ ಜಿಯೋ 5G Welcome ಆಫರ್ ಘೋಷಣೆ ; ಸೇವೆ ಪಡೆಯುವುದು ಹೇಗೆ ಗೊತ್ತಾ??
ಸಾಮಾನ್ಯ ವರ್ಗದ ಬಡವರಿಗೆ ಒಂದೇ ದಿನದಲ್ಲಿ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಅನುಮತಿ ನೀಡಿ ಶೇ.10ರಷ್ಟು ಮೀಸಲಾತಿ ನೀಡಿದ್ದಾರೆ. ಆದರೆ ಇವರು 2 ವರ್ಷದಿಂದ ವರದಿ ನೀಡಿದ್ದರೂ ಅವರಿಗೆ ಯಾಕೆ ನೀಡಿಲ್ಲ? ಅವರಿಗೆ ಯಾವ ವರದಿ ಮೇಲೆ ನೀಡಿದರು, ಇವರಿಗೆ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಎಸ್ ಸಿಪಿ ಟಿಎಸ್ ಪಿ ಕಾನೂನು ಮಾಡಿ ಜನಸಂಖ್ಯೆ ಅನುಗುಣವಾಗಿ ಬಜೆಟ್ ಅನುದಾನ ನೀಡಿದ್ದೇವೆ. ಕೇಂದ್ರ ಸರ್ಕಾರ ಈ ಕಾನೂನು ಮಾಡಿದೆಯೇ? ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಇದನ್ನು ಮಾಡಿದ್ದಾರಾ? ಬಿಜೆಪಿಯವರಿಗೆ ದಲಿತರ ಬಗ್ಗೆ ಮೊಸಳೆ ಕಣ್ಣೀರು ಇದ್ದು, ಯಾವುದೇ ಕಾಳಜಿ ಇಲ್ಲ. ಹೀಗಾಗಿ ನಾವು ಕಾನೂನು ತಂದಿದ್ದೇವೆ. ಹೀಗಾಗಿ ಬಹಳ ಬಾರಿ ನಾವು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದರೂ ಸ್ಪಂದಿಸಿಲ್ಲ ಎಂದು ಹೇಳಿದರು.
ಅ.8ರಂದು ಜನತಾ ಮಿತ್ರ ಸಮಾರೋಪ ಸಮಾವೇಶ: ಪೂರ್ವ ಸಿದ್ಧತಾ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ
ನಾಗಮೋಹನ್ ದಾಸ್ ಸಮಿತಿ ವರದಿ ಜತೆಗೆ ಹಿಂದುಳಿದ ವರ್ಗಗಳ ಆಯೋಗವೂ ಇದೆ. ಇದರ ಜತೆಗೆ ಸುಭಾಶ್ ಆಡಿ ಅವರ ಸಮಿತಿಯನ್ನು ಕಾನೂನು ಬಾಹೀರವಾಗಿ ಸಂವಿಧಾನ ಬಾಹೀರವಾಗಿ ರಚಿಸಿದರು. ಈಗ ಒತ್ತಡ ಹೆಚ್ಚಾದ ಬಳಿಕ ಮುಖ್ಯಮಂತ್ರಿಗಳು ನಾಳೆ ಸರ್ವಪಕ್ಷಗಳ ಸಭೆ ಕರೆದಿದ್ದು, ನಮ್ಮ ಪಕ್ಷದ ನಿಲುವಿನ ಬಗ್ಗೆ ಸುರ್ಜೆವಾಲ ಅವರು ಸ್ಪಷ್ಟಪಡಿಸಿದ್ದಾರೆ. ನಾಗಮೋಹನ್ ದಾಸ್ ವರದಿ ಜಾರಿ ಆಗಬೇಕು ಎಂಬುದು ನಮ್ಮ ನಿಲುವು. ನಾವು ಸಾಮಾಜಿಕ ನ್ಯಾಯದ ಪರವಾಗಿದ್ದು, ಮೀಸಲಾತಿ ಹೆಚ್ಚಳ ಆಗಬೇಕು ಇದನ್ನು ನಾವು ನಾಳೆ ಸರ್ವಪಕ್ಷ ಸಭೆಯಲ್ಲಿ ಮಾಡುತ್ತೇವೆ ಎಂದರು.