ಬೆಂಗಳೂರು ಗ್ರಾಮಾಂತರ: ಬಿಜೆಪಿ ಪಕ್ಷಕ್ಕೆ ರೌಡಿ ಶೀಟರ್ ಸೇರ್ಪಡೆಯ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರವನ್ನು ಇಟ್ಟುಕೊಂಡು ವಿಪಕ್ಷಗಳು ಆಡಳಿತಾರೂಡ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸುತ್ತಿವೆ. ಈ ಬೆನ್ನಲ್ಲೇ ಆನೇಕಲ್ ಪುರಸಭೆಗೆ ರೌಡಿಶೀಟರ್ ನನ್ನೇ ಸದಸ್ಯನನ್ನಾಗಿ ನಾಮನಿರ್ದೇಶನ ಮಾಡಿ, ಮತ್ತೊಂದು ವಿವಾದಕ್ಕೆ ಬಿಜೆಪಿ ಕಾರಣವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಪುರಸಭೆಯ ಸದಸ್ಯನನ್ನಾಗಿ ರೌಡಿ ಶೀಟರ್ ಮಂಜುನಾಥ್ ನನ್ನು ರಾಜ್ಯ ಸರ್ಕಾರ ನೇಮಿಸಿ ಆದೇಶಿಸಿದೆ. ಮೂರು ದಿನಗಳ ಹಿಂದೆ ರೌಡಿ ಶೀಟರ್ ಅನ್ನು ಸರ್ಕಾರ ಪುರಸಭೆಗೆ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಅಂದಹಾಗೇ ರಾಜ್ಯ ಸರ್ಕಾರದಿಂದ ಆನೇಕಲ್ ಪುರಸಭೆಗ ಸದಸ್ಯನನ್ನಾಗಿ ನಾಮನಿರ್ದೇಶನ ಮಾಡಿರುವಂತ ಮಂಜುನಾಥ್ ಆಲಿಯಾಸ್ ಉಪ್ಪಿ, ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದಾನೆ. ಈತ ನಖ್ರಾಬಾಬು ಹತ್ಯೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿರೋದ್ದಾನೆ ಎನ್ನಲಾಗುತ್ತಿದೆ.
Vastu Tips for Wealth: ನೀವು ಸಹ ಈ ಮಾರ್ಗಗಳನ್ನು ಅನುಸರಿಸಿ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಿ!
ಇದೀಗ ಇಂತಹ ರೌಡಿಶೀಟರ್ ಮಂಜುನಾಥ್ ನನ್ನೇ ಆನೇಕಲ್ ಪುಸರಭೆಯ ( Anekal Pusarbhe ) ಸದಸ್ಯನನ್ನಾಗಿ ನಾಮನಿರ್ದೇಶ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಆದೇಶಕ್ಕೆ ಅನೇಕರು ಆಕ್ಷೇಪವನ್ನು ವ್ಯಕ್ತ ಪಡಿಸಿದ್ದಾರೆ.