ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿವಿಧ ಸೇವೆಗಳನ್ನು ಈಗ ಆನ್ ಲೈನ್ ಗೊಳಿಸಲಾಗಿದೆ. ಈಗ ಮುಂದುವರೆದು ಶಿಕ್ಷಕರ ಕಲ್ಯಾಣ ನಿಧಿ ಕಚೇರಿಯಲ್ಲಿ ಆಜೀವ ಸದಸ್ಯತ್ವ ನೋಂದಣಿ ಪಡೆಯುವ ಸೌಲಭ್ಯವನ್ನು ಆನ್ ಲೈನ್ ಮಾಡಿದೆ. ಹೀಗಾಗಿ ಇನ್ಮುಂದೆ ಶಿಕ್ಷಕರು, ಉಪನ್ಯಾಸಕರು ಸಹ ಕಡ್ಡಾಯವಾಗಿ ತಮ್ಮ ಆಜೀವ ಸದಸ್ಯತ್ವ ನೋಂದಣಿಯನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ ಸಲ್ಲಿಸುವಂತೆ ತಿಳಿಸಲಾಗಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಮಾಹಿತಿ ನೀಡಲಾಗಿದೆ. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಕಚೇರಿಯಿಂದ ಒದಗಿಸಲಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಆನ್ ಲೈನ್ ಸೇವೆಗೆ ಒಳಪಡಿಸಲಾಗುತ್ತಿದ್ದು, ಪ್ರಥಮ ಹಂತವಾಗಿ ಅಜೀವ ಸದಸ್ಯತ್ವ ಆನ್ ಲೈನ್ ನೋಂದಣಿ ಕಾರ್ಯವನ್ನು ದಿನಾಂಕ 13-10-2022ರಿಂದ ಲೋಕಾರ್ಪಣೆಗೊಳಿಸಲಾಗಿದೆ ಎಂದು ತಿಳಿಸಿದೆ.
BIGG NEWS ; ‘BCCI ಅಧ್ಯಕ್ಷ’ ಸ್ಥಾನ ತೊರೆದ ನಂತ್ರ ‘ಗಂಗೂಲಿ’ ಮೊದಲ ಪ್ರತಿಕ್ರಿಯೆ ; ‘ದಾದಾ’ ಹೇಳಿದ್ದೇನು ಗೊತ್ತಾ?
ಇನ್ನೂ ಸರ್ಕಾರಿ ಅನುದಾನಿತ ಶಿಕ್ಷಕರು, ಉಪನ್ಯಾಸಕರು ಆನ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ನಿಧಿ ಕಚೇರಿಯಿಂದ ಅಜೀವ ಸದಸ್ಯತ್ವ ನೋಂದಣಿ ಸಂಖ್ಯೆ ಪಡೆದು ಭೌತಿಕ ಕಾರ್ಡ್ ಹೊಂದಿರುವ ಶಿಕ್ಷಕರು, ಉಪನ್ಯಾಸಕರೂ ಸಹ ಕಡ್ಡಾಯವಾಗಿ ತಮ್ಮ ವಿವರಗಳನ್ನು www.kstbfonline.karnataka.gov.in ಅಥವಾ www.schooleducation.kar.nic.in ತಾಣಕ್ಕೆ ಭೇಟಿ ನೀಡಿ ಸಲ್ಲಿಸುವಂತೆ ಸೂಚಿಸಿದೆ.