ಶಿವಮೊಗ್ಗ: ನಗರದಲ್ಲಿ ಗಣಪತಿ ಹಬ್ಬದಂದು ( Ganesh Festival ) ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ಪೊಲೀಸ್, ಪಾಲಿಕೆ ಹಾಗೂ ಮೆಸ್ಕಾಂ ಅನುಮತಿ ಪಡೆಯೋದು ಕಡ್ಡಾಯವಾಗಿದೆ. ಈ ಹಿನ್ನಲೆಯಲ್ಲಿ ಒಂದೇ ಕಡೆಯಲ್ಲಿ ನಾಳೆ ಜಿಲ್ಲಾಡಳಿತದಿಂದ ಈ ಮೂರು ಇಲಾಖೆಯಿಂದ ಅನುಮತಿ ನೀಡೋ ಸಂಬಂಧ ವ್ಯವಸ್ಥೆ ಮಾಡಲಾಗಿದೆ.
BIGG NEWS : `ACB’ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ
ಈ ಕುರಿತಂತೆ ಜಿಲ್ಲಾಡಳಿತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2022ನೇ ಸಾಲಿನ ಗಣೇಶ ಹಬ್ಬದ ಪ್ರಯುಕ್ತ ಶಿವಮೊಗ್ಗ ತಾಲೂಕಿನ ವ್ಯಾಪ್ತಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಣಪತಿಗಳ ಸಮಿತಿಯವರು ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕ ಪರವಾನಗಿ, ಮೆಸ್ಕಾಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಮತ್ತು ಮಹಾನಗರ ಪಾಲಿಕೆಯಿಂದ ಅನುಮತಿಯನ್ನು ಪಡೆಯುವ ಅವಶ್ಯಕತೆ ಇದೆ ಎಂದು ತಿಳಿಸಿದೆ.
ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ, ಅನುಮತಿಯನ್ನು ಪಡೆಯುವ ಕೆಲಸವನ್ನು ಸರಳಗೊಳಿಸೋ ನಿಟ್ಟಿನಲ್ಲಿ, ಮೂರು ಇಲಾಖೆಗಳ ಅಧಿಕಾರಿಗಳು ಒಂದು ಸ್ಥಳದಲ್ಲಿ ಲಭ್ಯವಿರುವಂತೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದಿದೆ.
BIGG NEWS: ಹಾಸನದಲ್ಲಿ ಹಾಡಹಗಲೇ ಪಿಸ್ತೂಲ್ ಹಿಡಿದು ಬಿಜೆಪಿ ನಾಯಕನ ಮನೆಗೆ ನುಗ್ಗಿದ ದುಷ್ಕರ್ಮಿಗಳು
ಈ ವ್ಯವಸ್ಥೆಯು ದಿನಾಂಕ 24-08-2022ರಂದು ಪ್ರಾರಂಭವಾಗುತ್ತಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಗಣಪತಿ ಕೂರಿಸೋದಕ್ಕೆ ನಿರ್ಧರಿಸಿರುವಂತ ಸಮಿತಿಗಳು ಈ ವ್ಯವಸ್ಥೆಯ ಅನುಕೂಲ ಪಡೆದುಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿದೆ.
BIGG NEWS : `ಮಡಿಕೇರಿ ಚಲೋ’ ಮುಂದೂಡಿಕೆ : ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಬಿಎಸ್ ವೈ ಅಭಿನಂದನೆ
ನಾಳೆ ಮೂರು ಇಲಾಖೆಯಿಂದ ಎಲ್ಲೆಲ್ಲಿ ಪರವಾನಿಗೆ ನೀಡಲಾಗುತ್ತದೆ.?
ನಾಳೆ ಶಿವಮೊಗ್ಗ ಪೊಲೀಸ್ ಉಪ ವಿಭಾಗ ಕಚೇರಿ, ಸಾಗರ ರಸ್ತೆ ಶಿವಮೊಗ್ಗ, ಮಹಾನಗರ ಪಾಲಿಕೆ ಕಚೇರಿ ಬಿ.ಹೆಚ್ ರಸ್ತೆ ಹಾಗೂ ವಿನೋಬನಗರ ಪೊಲೀಸ್ ಠಾಣೆಯ ಆವರಣ, ಪೊಲೀಸ್ ಚೌಕಿ ಈ ಮೂರು ಸ್ಥಳಗಳಲ್ಲಿ ಮೂರು ಇಲಾಖೆಯಿಂದ ಗಣಪತಿ ಕೂರಿಸೋದಕ್ಕೆ ಅನುಮತಿಯನ್ನು ನೀಡಲಾಗುತ್ತದೆ.