ಬೆಂಗಳೂರು: ಗ್ರಾಮೀಣ ಭಾಗದ ( Rural Area ) ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ( BESCOM ) ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳ 88 ಹಳ್ಳಿಗಳಲ್ಲಿ ನಾಳೆ ಮೂರನೇ ವಿದ್ಯುತ್ ಅದಾಲತ್ ನಡೆಯಲಿದೆ.
ಪ್ರತಿ ತಿಂಗಳ ಮೂರನೇ ಶನಿವಾರದಂದು ನಡೆಯುವ ಅದಾಲತ್ ನಲ್ಲಿ ಬೆಸ್ಕಾಂ ನಿಗಮ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರು ದಾವಣಗೆರೆಯ ಕುಕ್ಕುವಾಡ ಮತ್ತು ಬೆಸ್ಕಾಂನ ನಿರ್ದೇಶಕ (ತಾಂತ್ರಿಕ) ಡಿ.ನಾಗಾರ್ಜುನ ಅವರು ಮಳಕಾಲ್ಮೂರು ತಾಲೂಕಿನ ಕಣಕುಟ್ಟೆ ಯಲ್ಲಿ ನಡೆಯಲಿರುವ ವಿದ್ಯುತ್ ಅದಾಲತ್ ನಲ್ಲಿ ಭಾಗವಹಿಸಲಿದ್ದಾರೆ.
ಇಂಧನ ಸಚಿವರ ಸೂಚನೆ ಮೇರೆಗೆ ಪ್ರತಿ ತಿಂಗಳ ಮೂರನೇ ಶನಿವಾರದಂದು ವಿದ್ಯುತ್ ಅದಾಲತ್ಗಳನ್ನು ಆಯೋಜಿಸಲಾಗುತ್ತಿದ್ದು, ಇದುವರೆಗೆ ಎರಡು ಅದಾಲತ್ ಗಳನ್ನು ಆಯೋಜಿಸಲಾಗಿದೆ.
BIGG NEWS : ʻ ಗಾಂಧಿಯನ್ನು ಕೊಂದವರು ನನ್ನನ್ನು ಬಿಡ್ತಾರಾ ʼ : ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಆಕ್ರೋಶ
ಜೂನ್ 18 ಮತ್ತು ಜುಲೈ 16 ನಡೆದ ಅದಾಲತ್ ಗಳಲ್ಲಿ 6571 ಗ್ರಾಹಕರು ಭಾಗಿಯಾಗಿ ಒಟ್ಟು 2187 ಮನವಿಗಳನ್ನು ಸಲ್ಲಿಸಿದ್ದಾರೆ. 651 ಮನವಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಇನ್ನುಳಿದ 1536 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದ್ದು, ಇವುಗಳಲ್ಲಿ ಹೆಚ್ಚಿನ ಅಹವಾಲುಗಳನ್ನು ಬಗೆಹರಿಸಲಾಗಿದೆ. ಬೆಸ್ಕಾಂ ವಿದ್ಯುತ್ ಅದಾಲತ್ ಗೆ ಗ್ರಾಮೀಣ ಭಾಗದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.