Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಥುರಾದಲ್ಲಿ ಭೀಕರ ಅಪಘಾತ: ನಿಂತಿದ್ದ ಬಸ್‌ಗೆ ಕಂಟೈನರ್ ಡಿಕ್ಕಿ: ಸ್ಥಳದಲ್ಲೇ ಆರು ಜನರ ದುರ್ಮರಣ | Accident

07/02/2026 10:07 AM

ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಮಾಡಿದವರ ಶಿಕ್ಷೆ ಕಡಿಮೆಗೊಳಿಸಿದರೆ ಕೃತ್ಯ ಪ್ರೋತ್ಸಾಹಿಸಿದಂತೆ : ಹೈಕೋರ್ಟ್

07/02/2026 10:06 AM

BIG NEWS : ಮೈಸೂರಿನಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ : ಸುಮಾರು 140 ಕೋಟಿ ಮೌಲ್ಯದ ಆಸ್ತಿ ವಶಕ್ಕೆ!

07/02/2026 9:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಮಾಡಿದವರ ಶಿಕ್ಷೆ ಕಡಿಮೆಗೊಳಿಸಿದರೆ ಕೃತ್ಯ ಪ್ರೋತ್ಸಾಹಿಸಿದಂತೆ : ಹೈಕೋರ್ಟ್
KARNATAKA

ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಮಾಡಿದವರ ಶಿಕ್ಷೆ ಕಡಿಮೆಗೊಳಿಸಿದರೆ ಕೃತ್ಯ ಪ್ರೋತ್ಸಾಹಿಸಿದಂತೆ : ಹೈಕೋರ್ಟ್

By kannadanewsnow0507/02/2026 10:06 AM

ಬೆಂಗಳೂರು : ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಮಾಡಿದವರ ಶಿಕ್ಷೆ ಕಡಿಮೆಗೊಳಿಸಿದರೆ ಕೃತ್ಯ ಪ್ರೋತ್ಸಾಹಿಸಿದಂತೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿ, ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ದೃಢೀಕರಿಸಿ ಹೈಕೋರ್ಟ್ ಆದೇಶಿಸಿದೆ.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಮತ್ತು ನ್ಯಾಯಮೂರ್ತಿ ವೆಂಟಕೇಶ್ ಟಿ.ನಾಯ್ಕ್ ಅವರಿದ್ದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ, ಶಿಕ್ಷೆ ರದ್ದು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೃಢೀಕರಣಕ್ಕಾಗಿ ರಾಜ್ಯ ಸರ್ಕಾರ ಮತ್ತು ವಿಚಾರಣಾ ನ್ಯಾಯಾಲಯದ ಶಿಕ್ಷೆ ರದ್ದು ಕೋರಿ ಅಪರಾಧಿಗಳಾದ ಮಧ್ಯಪ್ರದೇಶದ ಜೈಬನ್ ಆದಿವಾಸಿ, ಮುಖೇಶ್ ಸಿಂಗ್ ಮತ್ತು ಜಾರ್ಖಂಡ್​ನ ಮನೀಶ್ ತಿರ್ಕಿ ಎಂಬವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣ ಹಿನ್ನೆಲೆ

ಮಂಗಳೂರಿನ ವಾಮಂಜೂರು ಬಳಿ ಟೈಲ್ಸ್ ಕಾರ್ಖಾನೆಯಲ್ಲಿ ಮೂವರು ಆರೋಪಿಗಳು ಕಾರ್ಮಿಕರಾಗಿದ್ದರು. ಅದೇ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯ 8 ವರ್ಷದ ಅಪ್ರಾಪ್ತ ಪುತ್ರಿಯಾಗಿದ್ದ ಸಂತ್ರಸ್ತೆಯನ್ನು 2021ರ ನವೆಂಬರ್ 21ರ ಭಾನುವಾರದಂದು ಚಿಕ್ಕಿ ಕೊಡಿಸುವುದಾಗಿ ನಂಬಿಸಿ ಆರೋಪಿ ಮನೀಶ್ ತಿರ್ಕಿ ಕೊಠಡಿಗೆ ಕರೆದೊಯ್ದಿದ್ದ. ಸಂತ್ರಸ್ತೆಯ ಮೇಲೆ ಒಬ್ಬ ಅರೋಪಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರೆ, ಇತರೆ ಆರೋಪಿಗಳು ಅತ್ಯಾಚಾರ ಎಸಗಿದ್ದರು.

ಇದರಿಂದ ಸಂತ್ರಸ್ತೆಯ ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗುತ್ತಿತ್ತು. ನೋವಿನಿಂದ ಅಳುತ್ತಿದ್ದರು. ಈ ಸಂದರ್ಭದಲ್ಲಿ ಮೊದಲ ಆರೋಪಿ ಕುತ್ತಿಗೆ ಹಿಡಿದು ಸಂತ್ರಸ್ತೆಯನ್ನು ಸಾಯಿಸಿದ್ದ. ಬಳಿಕ ಸಾಕ್ಷಿಗಳನ್ನು ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಚರಂಡಿಗೆ ಎಸೆದಿದ್ದರು. ಮೃತದೇಹ ಪತ್ತೆಯಾದ ಬಳಿಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ್ದ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಗಳು, ಎಫ್ಎಸ್ಎಲ್ ವರದಿ ಸೇರಿದಂತೆ ಸಾಕ್ಯಾಧಾರಗಳನ್ನು ಸಂಗ್ರಹಿಸಿ, ಅಪರಾಧಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಜೊತೆಗೆ, ತಲಾ 40 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

Share. Facebook Twitter LinkedIn WhatsApp Email

Related Posts

BIG NEWS : ಮೈಸೂರಿನಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ : ಸುಮಾರು 140 ಕೋಟಿ ಮೌಲ್ಯದ ಆಸ್ತಿ ವಶಕ್ಕೆ!

07/02/2026 9:58 AM1 Min Read

ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗಲು ಬಿಡಲ್ಲ : ಮೆಟ್ರೋ ದರ ಏರಿಕೆ ಕುರಿತು ಡಿಸಿಎಂ ಡಿಕೆಶಿ ಹೇಳಿಕೆ

07/02/2026 9:51 AM1 Min Read

BREAKING: ಸಾಗರ ತಾಲ್ಲೂಕಿನ ’35 ಗ್ರಾಮ ಪಂಚಾಯ್ತಿ’ಗಳಿಗೆ ‘ಆಡಳಿತಾಧಿಕಾರಿ’ಗಳನ್ನು ನೇಮಿಸಿ DC ಆದೇಶ

07/02/2026 9:38 AM3 Mins Read
Recent News

ಮಥುರಾದಲ್ಲಿ ಭೀಕರ ಅಪಘಾತ: ನಿಂತಿದ್ದ ಬಸ್‌ಗೆ ಕಂಟೈನರ್ ಡಿಕ್ಕಿ: ಸ್ಥಳದಲ್ಲೇ ಆರು ಜನರ ದುರ್ಮರಣ | Accident

07/02/2026 10:07 AM

ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಮಾಡಿದವರ ಶಿಕ್ಷೆ ಕಡಿಮೆಗೊಳಿಸಿದರೆ ಕೃತ್ಯ ಪ್ರೋತ್ಸಾಹಿಸಿದಂತೆ : ಹೈಕೋರ್ಟ್

07/02/2026 10:06 AM

BIG NEWS : ಮೈಸೂರಿನಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ : ಸುಮಾರು 140 ಕೋಟಿ ಮೌಲ್ಯದ ಆಸ್ತಿ ವಶಕ್ಕೆ!

07/02/2026 9:58 AM

ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗಲು ಬಿಡಲ್ಲ : ಮೆಟ್ರೋ ದರ ಏರಿಕೆ ಕುರಿತು ಡಿಸಿಎಂ ಡಿಕೆಶಿ ಹೇಳಿಕೆ

07/02/2026 9:51 AM
State News
KARNATAKA

ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಮಾಡಿದವರ ಶಿಕ್ಷೆ ಕಡಿಮೆಗೊಳಿಸಿದರೆ ಕೃತ್ಯ ಪ್ರೋತ್ಸಾಹಿಸಿದಂತೆ : ಹೈಕೋರ್ಟ್

By kannadanewsnow0507/02/2026 10:06 AM KARNATAKA 1 Min Read

ಬೆಂಗಳೂರು : ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಮಾಡಿದವರ ಶಿಕ್ಷೆ ಕಡಿಮೆಗೊಳಿಸಿದರೆ ಕೃತ್ಯ ಪ್ರೋತ್ಸಾಹಿಸಿದಂತೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದು,…

BIG NEWS : ಮೈಸೂರಿನಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ : ಸುಮಾರು 140 ಕೋಟಿ ಮೌಲ್ಯದ ಆಸ್ತಿ ವಶಕ್ಕೆ!

07/02/2026 9:58 AM

ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗಲು ಬಿಡಲ್ಲ : ಮೆಟ್ರೋ ದರ ಏರಿಕೆ ಕುರಿತು ಡಿಸಿಎಂ ಡಿಕೆಶಿ ಹೇಳಿಕೆ

07/02/2026 9:51 AM

BREAKING: ಸಾಗರ ತಾಲ್ಲೂಕಿನ ’35 ಗ್ರಾಮ ಪಂಚಾಯ್ತಿ’ಗಳಿಗೆ ‘ಆಡಳಿತಾಧಿಕಾರಿ’ಗಳನ್ನು ನೇಮಿಸಿ DC ಆದೇಶ

07/02/2026 9:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.