Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ: ಇಂದು ಒಂದೇ ದಿನ 2764 ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ

ಫ್ರಿಡ್ಜ್‌ನಲ್ಲಿ ಎಂದಿಗೂ ಇಡಬಾರದ 7 ಹಣ್ಣುಗಳಿವು; ಯಾಕೆ ಅಂತ ಈ ಸುದ್ದಿ ಓದಿ!

BIG UPDATE : ಅಸ್ಸಾಂನಲ್ಲಿ ವಾಯುಪಡೆಯ ವಿಮಾನ ಪತನ ಕೇಸ್ : ಘಟನೆಯಲ್ಲಿ ಐವರು ಯೋಧರು ಹುತಾತ್ಮ | Watch Video

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾನು ‘ನಟೇಶ್ ಬಡ್ತಿ ವಿಚಾರ’ದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ: ಸ್ನೇಹಮಯಿ ಕೃಷ್ಣ
KARNATAKA

ನಾನು ‘ನಟೇಶ್ ಬಡ್ತಿ ವಿಚಾರ’ದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ: ಸ್ನೇಹಮಯಿ ಕೃಷ್ಣ

By ವಸಂತ ಬಿ ಈಶ್ವರಗೆರೆ

ಮೈಸೂರು: ನಟೇಶ್ ರವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ, ಕೇವಲ ಈ ಸಂದರ್ಭದಲ್ಲಿ ಶ್ರೀಮತಿ ಶಾಲಿನಿ ರಜನೀಶ್ ಹೆಸರನ್ನು ಉಲ್ಲೇಖ ಮಾಡಿದ ಬಗ್ಗೆ ಕ್ಷಮೆ ಕೇಳಿದ್ದೇನೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ, ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸ್ಪಷ್ಟ ಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿರುವಂತ ಅವರು, ನಟೇಶ್ ರವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ, ಕೇವಲ ಈ ಸಂದರ್ಭದಲ್ಲಿ ಶ್ರೀಮತಿ ಶಾಲಿನಿ ರಜನೀಶ್ ಹೆಸರನ್ನು ಉಲ್ಲೇಖ ಮಾಡಿದ ಬಗ್ಗೆ ಕ್ಷಮೆ ಕೇಳಿದ್ದೇನೆ, ಏಕೆಂದರೆ ನಾನು ಆರೋಪ ಮಾಡಿರುವ ಎಲ್ಲಾ ವಿಚಾರವನ್ನು ಒಪ್ಪಿಕೊಂಡು, ಅದಕ್ಕೆ ಪೂರಕವಾಗಿ ಎಲ್ಲಾ ಮಾಹಿತಿ, ಸಾಕ್ಷ್ಯಾಧಾರಗಳನ್ನು ನೀಡಿದ ವಿನೋದ್ ಈ ಒಂದು ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾನೆ ಎಂದಿದ್ದಾರೆ.

ನಟೇಶ್ ರವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಪ್ರಭಾವಿಗೆ ಲಂಚ ಕೊಟ್ಟಿರುವುದು ನಿಜ ಎಂದು ಒಪ್ಪಿಕೊಂಡಿದ್ದಾನೆ, ಅದಕ್ಕೆ ಪೂರಕವಾಗಿ ಕೆಲವು ಸಾಕ್ಷ್ಯಾಧಾರಗಳನ್ನು ನೀಡಿದ್ದಾನೆ, ಅದನ್ನು ಆಧರಿಸಿ, ತನಿಖೆ ನಡೆಸಿದಾಗ, “ಪ್ರಭಾವಿ” ಯಾರು ಎಂಬ ಸತ್ಯ ತಿಳಿಯುತ್ತದೆ ಎಂದು ಹೇಳಿದ್ದಾರೆ.

14 ನಿವೇಶನಗಳನ್ನು ಕಾನೂನು ಬದ್ದವಾಗಿ ಪಡೆದಿದ್ದೇವೆ ಎಂದು ವಿಧಾನಸೌಧದಲ್ಲೇ ಆರ್ಭಟಿಸಿದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು, ನಾನು ಪ್ರಕರಣ ದಾಖಲು ಮಾಡುತ್ತಿದ್ದಂತೆ ತಮ್ಮ ತಪ್ಪನ್ನು ಒಪ್ಪಿಕೊಂಡು, 14 ನಿವೇಶನಗಳನ್ನು ವಾಪಾಸ್ಸು ಕೊಟ್ಟಿದ್ದಕ್ಕಿಂತ ದೊಡ್ಡ ತಪ್ಪನ್ನು ನಾನು ಮಾಡಿರುವುದಿಲ್ಲ, ನಡೆಯುವಾಗ ಕೆಲವು ಸಲ ಎಡವುದು ಸಹಜ ಎಂಬುದಾಗಿ ತಿಳಿಸಿದ್ದಾರೆ.

ಬೆಂಗಳೂರಿನ ಸೈಬರ್ ಠಾಣೆಯಲ್ಲಿ ವಿಚಾರಣೆ ಮುಗಿಸಿಕೊಂಡು ಬಂದೆ. ವಿಚಾರಣೆ ಸಂದರ್ಭದಲ್ಲಿ ವಿನೋದ್ ಎಂಬಾತ, ಶ್ರೀಮತಿ ಶಾಲಿನಿ ರಜನೀಶ್ ರವರ ಬಗ್ಗೆ ಸುಳ್ಳು ನನಗೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ, ಆದ್ದರಿಂದ ನನ್ನಿಂದಾಗಿರುವ ತಪ್ಪಿಗಾಗಿ ಶ್ರೀಮತಿ ಶಾಲಿನಿ ರಜನೀಶ್ ರವರಲ್ಲಿ ಕ್ಷಮೆ ಕೋರುತ್ತೇನೆ ಎಂದಿದ್ದರು.

ಸೈಬರ್ ಠಾಣಾ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಬೆಂಬಲಕ್ಕೆ ನಿಂತ ಮಾದ್ಯಮದವರಿಗೆ, ರಾಜ್ಯದ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು, .ನಿಮ್ಮಗಳ ಬೆಂಬಲ, ಅಭಿಮಾನ ಹೀಗೆಯೇ ಇರಲಿ, ಸಾಯುವವರೆಗೆ, ಸಮಾಜದ ಹಿತಕ್ಕಾಗಿ ದುಡಿಯುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

BREAKING: ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ನ್ಯಾಯಾಂಗ ಬಂಧನ, ಜೈಲುಪಾಲು

Share. Facebook Twitter LinkedIn WhatsApp Email

Related Posts

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ: ಇಂದು ಒಂದೇ ದಿನ 2764 ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ

2 Mins Read

ಬಾಗಲಕೋಟೆಯಲ್ಲಿ ‘KSRTC’ ಬಸ್, ಲಾರಿ ಮಧ್ಯ ಭೀಕರ ಅಪಘಾತ : ಇಬ್ಬರು ಪ್ರಯಾಣಿಕರ ಸಾವು, ಹಲವರಿಗೆ ಗಾಯ!

1 Min Read

‘ಹಲೋ’ ಎಂದ ತಕ್ಷಣ ಫೋನ್ ಕಟ್ ಆಯ್ತಾ? ಎಚ್ಚರ ಇದು ಹೊಸ ಸೈಬರ್ ಸ್ಕ್ಯಾಮ್ ಆಗಿರಬಹುದು.!

2 Mins Read
Recent News

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ: ಇಂದು ಒಂದೇ ದಿನ 2764 ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ

ಫ್ರಿಡ್ಜ್‌ನಲ್ಲಿ ಎಂದಿಗೂ ಇಡಬಾರದ 7 ಹಣ್ಣುಗಳಿವು; ಯಾಕೆ ಅಂತ ಈ ಸುದ್ದಿ ಓದಿ!

BIG UPDATE : ಅಸ್ಸಾಂನಲ್ಲಿ ವಾಯುಪಡೆಯ ವಿಮಾನ ಪತನ ಕೇಸ್ : ಘಟನೆಯಲ್ಲಿ ಐವರು ಯೋಧರು ಹುತಾತ್ಮ | Watch Video

BIG UPDATE : ಜೋರ್ಹತ್ ವಾಯುನೆಲೆಯಲ್ಲಿ `AN-32’ ವಿಮಾನ ಪತನಗೊಂಡು ಐವರು `IAF’ ಸಿಬ್ಬಂದಿ ಹುತಾತ್ಮ | Aircraft Crash

State News
KARNATAKA

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ: ಇಂದು ಒಂದೇ ದಿನ 2764 ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಕೊಡುಗೆ ನೀಡಿದ್ದು, ಇಂದಿನಿಂದ (ಜೂನ್ 13, 2026) ರಾಜ್ಯದ ಎಲ್ಲಾ ಅರ್ಹ…

ಬಾಗಲಕೋಟೆಯಲ್ಲಿ ‘KSRTC’ ಬಸ್, ಲಾರಿ ಮಧ್ಯ ಭೀಕರ ಅಪಘಾತ : ಇಬ್ಬರು ಪ್ರಯಾಣಿಕರ ಸಾವು, ಹಲವರಿಗೆ ಗಾಯ!

‘ಹಲೋ’ ಎಂದ ತಕ್ಷಣ ಫೋನ್ ಕಟ್ ಆಯ್ತಾ? ಎಚ್ಚರ ಇದು ಹೊಸ ಸೈಬರ್ ಸ್ಕ್ಯಾಮ್ ಆಗಿರಬಹುದು.!

ಬೆಂಗಳೂರಿನ ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.