Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಕ್ರೋಚ್ ಜನತಾ ಪಾರ್ಟಿ’ಯಿಂದ ದೆಹಲಿಯಲ್ಲಿ ಮೊದಲ ಪ್ರತಿಭಟನೆ:’ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ’ ಪಟ್ಟಿ ಬಿಡುಗಡೆ !

BREAKING: ​ನಾರ್ವೆ ಚೆಸ್ ಟೂರ್ನಿ: ಇತಿಹಾಸ ಸೃಷ್ಟಿಸಿದ ಆರ್. ಪ್ರಜ್ಞಾನಂದ : ಪ್ರಶಸ್ತಿ ಗೆದ್ದ ಮೊದಲ ಭಾರತೀಯ!

​ಆನ್‌ಲೈನ್ ವಂಚನೆಗಳು ಈಗ ಪತ್ತೆ ಹಚ್ಚಲು ಕಷ್ಟ: ಸೈಬರ್ ಕ್ರಿಮಿನಲ್‌ಗಳ ಹೊಸ ತಂತ್ರಗಳಿಗೆ ಜನರೇ ಬಲಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭಿಸಿದ್ದೇ ನಾನು: ಸಂಸದ ಬಸವರಾಜ ಬೊಮ್ಮಾಯಿ
KARNATAKA

ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭಿಸಿದ್ದೇ ನಾನು: ಸಂಸದ ಬಸವರಾಜ ಬೊಮ್ಮಾಯಿ

By ವಸಂತ ಬಿ ಈಶ್ವರಗೆರೆ

ಹಾವೇರಿ : ಕರ್ನಾಟಕದಲ್ಲಿ ಕೆರೆ ತುಂಬಿಸುವ ಯೋಜನೆ ಮೊದಲು ಆರಂಭಿಸಿದವನೇ ನಾನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌.

ಅವರು ಇಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ತಿಮ್ಮಾಪುರ, ಹಿರೇಬೆಂಡಿಗೇರಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ಅವರು, ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಶಿಗ್ಗಾವಿಯಲ್ಲಿ ಬೊಮ್ಮಾಯಿಯವರು ಯಾವುದಾದರು ಒಂದು ಯೋಜನೆ ತಂದಿದ್ದಾರಾ ಎಂದು ಪ್ರಶ್ನಿಸಿದ್ದಾರೆ‌. ಅವರಿಗೆ ತಿಳಿಸಲು ಬಯಸುತ್ತೇನೆ. ಇಡಿ ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭಿಸಿದ್ದು ನಾನೇ ಎಂದು ತಿರುಗೇಟು ನೀಡಿದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂಡಿ ಏತ ನೀರಾವರಿ ಯೋಜನೆ, ಬಿಜಾಪುರ ಸಮಗ್ರ ನೀರಾವರಿ ಯೋಜನೆಗೆ ಹೊರಾಟ ಮಾಡಿದ್ದರು‌. ಆಗ ಅಲ್ಲಿ ಭಾಗವಹಿಸಿ ಅಂತರ ಜಲ ಹೆಚ್ಚಿಸಲು ಕೆರೆ ತುಂಬಿಸುವ ಯೋಜನೆ ಮಾಡುವುದು ಸೂಕ್ತ ಎಂದು ತಿಳಿದು ಅಲ್ಲಿ ಕೆರೆ ತುಂಬಿಸುವ ಯೋಜನೆ ಮಾಡಿದೆ. ನಂತರ ಶಿಗ್ಗಾವಿ ಸವಣೂರು ಏತ ನೀರಾವರಿ ಕೆರೆ ತುಂಬಿಸುವ ಯೋಜನೆ ಮಾಡಿದೆ‌ ಎಂದರು.

ಕನಕಪುರದಲ್ಲಿ ಸುಮಾರು ವರ್ಷಗಳಿಂದ ಒಂದು ನೀರಾವರಿ ಯೋಜನೆ ಮಾಡಿರಲಿಲ್ಲ. ಅಲ್ಲಿನ ಜನರು ಬಂದು ನನಗೆ ಮನವಿ ಮಾಡಿದ್ದರು. ನಾನು ಹೋಗಿ ನೀರಾವರಿ ಯೋಜ‌ನೆ ಜಾರಿ ಮಾಡಿದೆ‌. ವರುಣಾ ಕ್ಷೇತ್ರದಲ್ಲಿ 103 ಕಿ.ಮಿ. ರಸ್ತೆ ಮಾಡಿದ್ದು ಬಸವರಾಜ ಬೊಮ್ಮಾಯಿ, ಈ ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚಲು ಟಾರ ಹಾಕಲು ಹಣ ಇಲ್ಲ, ಮಣ್ಣು ಹಾಕಿ ರಸ್ತೆ ಗುಂಡಿ ಮುಚ್ಚಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಸತಿ ಸಚಿವ ಜಮೀರ್ ಅಹಮದ್ ಅವರು ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಎಂದು ಹೇಳಿದ್ದಾರೆ‌‌ ನಾನು ಹನ್ನೆರಡು ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಿದ್ದೇನೆ‌. ಜಮೀರ್ ಅಹಮದ್ ಅವರೇ ನೀವು ಶಿಗ್ಗಾವಿ ಕ್ಷೇತ್ರಕ್ಕೆ ಒಂದೂವರೆ ವರ್ಷದಲ್ಲಿ ಎಷ್ಟು ಮನೆ ಕಟ್ಟಿಸಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಎಷ್ಟು ಮನೆ ಕಟ್ಟಿಸಿದ್ದೀರಿ ಎಂದು ಸವಾಲು ಹಾಕಿದರು.

ಇಡಿ ಸರ್ಕಾರ ಬೊಮ್ಮಾಯಿಯನ್ನು ಸೊಲಿಸಲು ಬಂದಿದ್ದಾರೆ‌ ಈ ಚುನಾವಣೆ ಬೊಮ್ಮಾಯಿ ವರ್ಸಸ್ ಕರ್ನಾಟಕ ಸರ್ಕಾರ, ಎಲ್ಲರೂ ದುಡ್ಡಿನ ಚೀಲ ತುಂಬಿಕೊಂಡು ಬಂದಿದ್ದಾರೆ. ಅದನ್ನು ಹಂಚುತ್ತಿದ್ದಾರೆ. ನಾನೂ ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.

ಕಳೆದ ಆರೇಳು ತಿಂಗಳಲ್ಲಿ ಪೊಲಿಸ್ ಸ್ಟೇಷನ್ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ ನ ಪುಢಾರಿಗಳು ಕ್ಷೇತ್ರದಲ್ಲಿ ಕ್ಲಬ್ ನಡೆಸುತ್ತಿಸ್ದಾರೆ‌. ಇದು ಬದುಕಿನ ಭವಿಷ್ಯ ನಿರ್ಧರಿಸುವ ಚುನಾವಣೆ. ಅವರು ನಾಲ್ಕು ದಿನ ಜಾತ್ರೆ ಮಾಡಲು ಬಂದಿದ್ದಾರೆ.‌ ಅವರನ್ನು ತಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿ, ಭರತ್ ಬೊಮ್ಮಾಯಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸುವಂತೆ ಮಾಡಿದರು.

GOOD NEWS: ‘ಯುಜಿಸಿ ನೆಟ್ ಅರ್ಹತಾ ಪರೀಕ್ಷೆ’ಯಲ್ಲಿ ‘ಆಯುರ್ವೇದ ಜೀವಶಾಸ್ತ್ರ’ವನ್ನು ಒಂದು ವಿಷಯವಾಗಿ ಪರಿಚಯ | UGC NET Exam 2024

ಉದ್ಯೋಗ ವಾರ್ತೆ : `ಪವರ್ ಮ್ಯಾನ್’ ಸೇರಿ `KPTCL’ನ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ | KPTCL Recruitment

Share. Facebook Twitter LinkedIn WhatsApp Email

Related Posts

JOB ALERT : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಸಿವಿಲ್ `ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Police Recruitment

2 Mins Read

Rain Alert : ಕರ್ನಾಟಕಕ್ಕೆ ಮುಂಗಾರು ಪ್ರವೇಶ : ರಾಜ್ಯಾದ್ಯಂತ ಮುಂದಿನ 7 ದಿನ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ.!

1 Min Read

ರಾಜ್ಯದಲ್ಲಿ ಖಾಸಗಿ ಶಾಲೆಗಳ ನೋಂದಣಿಗೆ ಜೂನ್ 30ರ ವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

2 Mins Read
Recent News

ಕಾಕ್ರೋಚ್ ಜನತಾ ಪಾರ್ಟಿ’ಯಿಂದ ದೆಹಲಿಯಲ್ಲಿ ಮೊದಲ ಪ್ರತಿಭಟನೆ:’ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ’ ಪಟ್ಟಿ ಬಿಡುಗಡೆ !

BREAKING: ​ನಾರ್ವೆ ಚೆಸ್ ಟೂರ್ನಿ: ಇತಿಹಾಸ ಸೃಷ್ಟಿಸಿದ ಆರ್. ಪ್ರಜ್ಞಾನಂದ : ಪ್ರಶಸ್ತಿ ಗೆದ್ದ ಮೊದಲ ಭಾರತೀಯ!

​ಆನ್‌ಲೈನ್ ವಂಚನೆಗಳು ಈಗ ಪತ್ತೆ ಹಚ್ಚಲು ಕಷ್ಟ: ಸೈಬರ್ ಕ್ರಿಮಿನಲ್‌ಗಳ ಹೊಸ ತಂತ್ರಗಳಿಗೆ ಜನರೇ ಬಲಿ!

JOB ALERT : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಸಿವಿಲ್ `ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Police Recruitment

State News
KARNATAKA

JOB ALERT : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಸಿವಿಲ್ `ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Police Recruitment

By kannadanewsnow57 KARNATAKA 2 Mins Read

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ರಾಜ್ಯದ ಯುವಜನತೆಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯ…

Rain Alert : ಕರ್ನಾಟಕಕ್ಕೆ ಮುಂಗಾರು ಪ್ರವೇಶ : ರಾಜ್ಯಾದ್ಯಂತ ಮುಂದಿನ 7 ದಿನ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ.!

ರಾಜ್ಯದಲ್ಲಿ ಖಾಸಗಿ ಶಾಲೆಗಳ ನೋಂದಣಿಗೆ ಜೂನ್ 30ರ ವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

BIG NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : `ರೇಷನ್ ಸಮಸ್ಯೆ’ ನಿವಾರಣೆಗೆ ಬರುತ್ತಿದೆ ‘ಸ್ಮಾರ್ಟ್ ಅನ್ನವಾಣಿ’!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.