ಬೆಂಗಳೂರು: ಅಪ್ಪು ಕುರಿತಂತೆ ನಟ ದರ್ಶನ್ ( Actor Darshan ) ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ( Social Media ) ಹಾಕಿದಂತ ಪೋಸ್ಟ್ ಒಂದು ವೈರಲ್ ಆಗಿತ್ತು. ಅಲ್ಲದೇ ಡಿ ಬಾಸ್ ( D Boss ) ಹಾಗೂ ಪುನೀತ್ ಅಭಿಮಾನಿಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಜೊತೆಗೆ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳಬೇಕು ಎಂಬುದಾಗಿ ವರನಟ ಪುನೀತ್ ರಾಜ್ ಕುಮಾರ್ ( Actor Puneeth Rajkumar ) ಅಭಿಮಾನಿಗಳು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ತಪ್ಪಿನ ಅರಿವಾಗಿ, ಕ್ಷಮಿಸಿ ಎಂಬುದಾಗಿ ನಟ ದರ್ಶನ್ ಅಭಿಮಾನಿಗಳು ( Actor Darshan Followers ) ಕ್ಷಮೆಯಾಚಿಸಿದ್ದಾರೆ.
ನಟ ದರ್ಶನ್ ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದಂತ ಸಂದರ್ಶದಲ್ಲಿ ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್ ಗಳು ಅಂದ್ರೇ ಹೇಗೆ ಎಂದು ಪುನೀತ್ ರಾಜ್ ಕುಮಾರ್ ಒಬ್ಬರದ್ದೇ ಸಾಕು. ಆದ್ರೇ.. ನಾನು ಬದುಕ್ಕಿದ್ದಾಗಲೇ ಫ್ಯಾನ್ಸ್ ಗಳು ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು ಎಂದು ಹೇಳಿದ್ದರು.
ದರ್ಶನ್ ಹೇಳಿದಂತ ಈ ಮಾತಿನ ವಿರುದ್ಧ ಅಪ್ಪು ಅಭಿಮಾನಿಗಳು ಗರಂ ಆಗಿದ್ದರು. ಅಲ್ಲದೇ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ತಾರಕಕ್ಕೇರಿತ್ತು. ದರ್ಶನ್ ಹುಡುಗರಿಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಲೇ ಬೇಕು ಎಂಬುದಾಗಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಖಡಕ್ ಎಚ್ಚರಿಕೆ ನೀಡಿದ್ದರು.
ಇದಷ್ಟೇ ಅಲ್ಲದೇ ಡಿ ಬಾಸ್ ಅಭಿಮಾನಿಗಳ ಫೇಸ್ ಬುಕ್ ಪೇಜ್ ನಲ್ಲಿಯೇ ವಾರ್ ಶುರುವಾಗಿತ್ತು. 75 ಸಾವಿರ ಫಾಲೋವರ್ಸ್ ಹೊಂದಿದ್ದಂತ ಪೇಜ್ ಅನ್ನು ರಿಪೋರ್ಟ್ ಮಾಡಿದ ಪರಿಣಾಮ, ಪೇಜ್ ಕೈಬಿಟ್ಟು ಹೋಗಿದ್ದಾಗಿಯೂ ಡಿ ಬಾಸ್ ಅಭಿಮಾನಿಗಳು ಹೇಳಿಕೊಂಡಿದ್ದರು.
ಈ ಬೆನ್ನಲ್ಲೇ ಕೊನೆಗೆ ಡಿ ಬಾಸ್ ಸೋಲ್ಜರ್ಸ್ ಫೇಸ್ ಬುಕ್ ಪೇಜ್ ನಲ್ಲಿ, ಮೊನ್ನೆ ನಾವು ಹಾಕಿದ್ದ ಪೋಸ್ಟ್ ನಿಂದ ಅಪ್ಪು ಸಾರ್ ಹಾಗೂ ಡಿ ಬಾಸ್ ಅವರಿಗೆ ಅವಮಾನ ಆಗಿದೆ. ಆದರಿಂದ ನಾವು ಅಪ್ಪು ಅವರಿಗೆ ಹಾಗೂ ಡಿ ಬಾಸ್ ಅವರಿಗೂ, ಕರ್ನಾಟಕದ ಜನತೆಗೆ ಕ್ಷಮೆಯಾಚಿಸುತ್ತಿದ್ದೇವೆ. ಇನ್ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಜವಾಬ್ದಾರಿಯಿಂದ ಇರುತ್ತೇವೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ, ಡಿ ಬಾಸ್ ಅಭಿಮಾನಿಗಳು ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಇಲ್ಲಿಗೆ ಈ ಫ್ಯಾನ್ಸ್ ವಾರ್ ನಿಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ.