ರಾಮನಗರ : ರಾಮನಗರ ನನಗೆ ಜೀವ ಕೊಟ್ಟ ಜಿಲ್ಲೆ ರಾಮನಗರ ಎಂದಿಗೂ ನಾನು ಬಿಡುವುದಿಲ್ಲ ಎಂದು ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದು ಇದೀಗ ಮಂಡ್ಯದಲ್ಲಿ ಹೋಗಿ ಸ್ಪರ್ಧಿಸುತ್ತಿದ್ದಾರೆ.ನನಗೆ ನೂರಕ್ಕೆ ನೂರರಷ್ಟು ಗ್ಯಾರಂಟಿ ಇದೆ ಈ ಬಾರಿ ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.
ಭಾರತದ ಹೊಸ ಫೈಟರ್ ಜೆಟ್ ‘ತೇಜಸ್ MK-1A’ ಮೊದಲ ಹಾರಾಟ ಯಶಸ್ವಿ : ಹಿಂದಿನ ವಿಮಾನಕ್ಕಿಂತ ಹೆಚ್ಚು ಸುಧಾರಿತ, ಮಾರಕ
ರಾಮನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ, ರಾಮನಗರ ನಮಗೆ ಜೀವ ಕೊಟ್ಟ ಜಿಲ್ಲೆ ಎಂದು ಹೇಳುತ್ತಿದ್ದರು ಆದರೆ ಈಗ ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಸ್ಪರ್ಧಿಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬೆಂಗಳೂರು : ‘ಏರ್ ಪ್ಲೇಜರ್’ ಪೈಪ್ ನಿಂದ ಹುಚ್ಚಾಟ : ‘ಗುದದ್ವಾರಕ್ಕೆ’ ಗಾಳಿ ತುಂಬಿ, ಸ್ನೇಹಿತನ ಕೊಂದ ಗೆಳೆಯರು
ಕಳೆದ ಬಾರಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಯಾಗಿರುವಾಗಲೇನೇ ಅವರ ಮಗ ಮಂಡ್ಯದಲ್ಲಿ ಸೋತರು.ಕಳೆದ ಬಾರಿ ರಾಮನಗರದಲ್ಲಿ ಸೋತರು ಈಗ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದಾರೆ.ನನಗಂತೂ ಗ್ಯಾರಂಟಿ ಇದೆ ನೂರಕ್ಕೆ ನೂರರಷ್ಟು ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲುತ್ತಾರೆ. ಮಂಡ್ಯ ಜನರು ಕುಮಾರಸ್ವಾಮಿ ಅವರಿಗೆ ಯಾಕೆ ಮತ ಹಾಕುತ್ತಾರೆ? ಮಂಡ್ಯ ಜಿಲ್ಲೆಗೆ ಏನಾದರೂ ಮಾಡಿದರೆ ತಾನೇ ಮತ ಹಾಕೋಕೆ ಎಂದು ವಾಗ್ದಾಳಿ ನಡೆಸಿದರು.