ಬೆಂಗಳೂರು : ಸಿಡಿ ಶಿವು ಅವರ ಆಡಿಯೋ ಕ್ಲಿಪಿಂಗ್ ಬಂತಲ್ಲ. ಹಾಸನದ ಅಶೀಲ ವಿಡಿಯೋ ಪ್ರಸ್ತಾಪಿಸಿದ್ದೆ ಡಿಕೆ ಶಿವಕುಮಾರ್ ಅವರು ಎಂದು ಎಚ್ ಡಿ ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದು, ಯಾರಿಗೂ ನಾನು ಏನು ಕೊಟ್ಟಿಲ್ಲ.ದೇವರಾಜೇಗೌಡ ಜೊತೆ ನಾನು ಅರ್ಧ ನಿಮಿಷ ಕೂಡ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯವರು ಅಧಿಕಾರಿಗಳು ನನ್ನ ಪಕ್ಷದವರು ಸಾರ್ವಜನಿಕರು ಕಾರ್ಯಕರ್ತರು ಎಲ್ಲರೂ ಬರುತ್ತಾರೆ ಬಂದು ಏನೇನೋ ಮಾಹಿತಿಯನ್ನು ಕೊಡುತ್ತಾರೆ. ಭೇಟಿ ಮಾಡಬೇಕು ಅಂತಾರೆ ಟೈಮ್ ಕೊಟ್ಟಿಲ್ಲ. ದೇವರಾಜೇಗೌಡ ಜೊತೆ ಅರ್ಧ ನಿಮಿಷವು ನಾನು ಮಾತನಾಡಿಲ್ಲ ನನಗೂ ರಾಜಕೀಯ ಹಾಗೂ ವ್ಯವಹಾರದ ಪ್ರಜ್ಞೆ ಇದೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು
ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ.ಎಚ್ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು ನನ್ನ ಹೆಸರು ಹೇಳಿಲ್ಲ ಅಂದ್ರೆ ನನ್ನ ಹೆಸರು ಪ್ರಸ್ತಾಪ ಮಾಡಿಲ್ಲ ಅಂದ್ರೆ ಅವರಿಗೆ ನಿದ್ರೆನೇ ಬರುವುದಿಲ್ಲ. ನನಗೆ ಅವಶ್ಯಕತೆ ಇಲ್ಲ ನನಗೆ ಯಾವುದೇ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅವರು ಹೇಳಿದಂಗೆ ಉಪ್ಪು ತಿಂದವರು ನೀರು ಕುಡಿಯಬೇಕು ಕಾನೂನು ಇದೆ ಏನೂ ಬೇಕೋ ಕ್ರಮ ತೆಗೆದುಕೊಳ್ಳುತ್ತಾರೆ.
ಅವರು ಏನು ಬೇಕಾದರೂ ಹೇಳಿಕೊಳ್ಳಲಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಯಾರು ಹತ್ರಾನು ಮಾತಾಡಿಲ್ಲ. ನಾನೊಬ್ಬ ರಾಜಕಾರಣಿ ನನ್ನ ನಿವಾಸಕ್ಕೆ ಭೇಟಿ ಮಾಡಲು ನೂರಾರು ಜನ ಬರುತ್ತಾರೆ. ಬಿಜೆಪಿಯವರು ಬರ್ತಾರೆ, ದಳದವರು ಬರ್ತಾರೆ, ಸಾರ್ವಜನಿಕರು ಬರುತ್ತಾರೆ,ಕಾರ್ಯಕರ್ತರು ಬರ್ತಾರೆ ಅಧಿಕಾರಿಗಳು ಬರುತ್ತಾರೆ ಎಂದು ತಿಳಿಸಿದರು.