ಕೋಲಾರ: ನನಗೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಕ್ಕೂ ಅಂಜಿಕೆಯೇ ಇಲ್ಲ. ಆದ್ರೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ನಿರ್ಧಾರ ಮಾಡಿಲ್ಲ. ಹೈಕಮಾಂಡ್ ನನ್ನ ವಿವೇಚನೆಗೆ ಕ್ಷೇತ್ರದ ಆಯ್ಕೆ ಹಾಗೂ ಸ್ಪರ್ಧೆಯನ್ನು ಬಿಟ್ಟಿದ್ದಾರೆ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಹೇಳಿದ್ದಾರೆ.
ಕೋಲಾರ ಜಿಲ್ಲೆಯ ಗರುಡಾಪಾಳ್ಯದಲ್ಲಿ ಚುನಾವಣೆ ಸ್ಪರ್ಧೆಯ ಕುರಿತಂತೆ ಮಾತನಾಡಿದಂತ ಅವರು, ಎಲ್ಲಾದರೂ ಸ್ಪರ್ಧಿಸಿ, ಕ್ಷೇತ್ರ ನೀವೆ ನಿರ್ಧರಿಸಿ ಅಂತ ಹೈಕಮಾಂಡ್ ಹೇಳಿದೆ. ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ನನಗೆ ಒತ್ತಾಯ ಮಾಡುತ್ತಿದ್ದಾರೆ. 2 ದಿನ ಬಂದ್ರೇ ಸಾಕು ಎಲ್ಲಾ ಸೇರಿ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ನನಗೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಕ್ಕೆ ಅಂಜಿಕೆ ಇಲ್ಲ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆಗೆ ಒತ್ತಾಯ ಮಾಡಿದ್ದಾರೆ. ಬಾದಾಮಿ ಕ್ಷೇತ್ರ ಬೆಂಗಳೂರಿನಿಂದ ದೂರವಿದೆ. ಓಡಾಡಲು ಕಷ್ಟ. ಬಾದಾಮಿ ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸಲು ಆಗುತ್ತಿಲ್ಲ. ಹತ್ತಿರದ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಅಂದಾಗ ಹಲವೆಡೆ ಆಹ್ವಾನ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.