Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಮುಂದಿನ ‘CM’ ಟ್ರೆಂಡ್ : ಬೆಂಗಳೂರು ಬೆನ್ನಲ್ಲೇ, ಬೆಳಗಾವಿಯಲ್ಲೂ ಡಿ.ಕೆ. ಶಿವಕುಮಾರ್ ಬ್ಯಾನರ್ ರಾಜಕಾರಣ!

SHOCKING : ‘ನಾನು ಒಳ್ಳೆಯ ಮಗನಾಗಲು ಸಾಧ್ಯವಾಗಲಿಲ್ಲ’ : ಡೆತ್ ನೋಟ್ ಬರೆದಿಟ್ಟು ಬಿ.ಟೆಕ್ ವಿದ್ಯಾರ್ಥಿ ಆತ್ಮಹತ್ಯೆ.!

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold, Silver Prices

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಪ್ರಧಾನಿ ಮೋದಿ’ಯಿಂದ ಗುಜರಾತ್ ವಂತಾರದಲ್ಲಿ ‘ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ’ ಉದ್ಘಾಟನೆ
INDIA

‘ಪ್ರಧಾನಿ ಮೋದಿ’ಯಿಂದ ಗುಜರಾತ್ ವಂತಾರದಲ್ಲಿ ‘ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ’ ಉದ್ಘಾಟನೆ

By ವಸಂತ ಬಿ ಈಶ್ವರಗೆರೆ

ಗುಜರಾತ್ : ಗುಜರಾತ್‌ನ ಜಾಮ್ ನಗರದಲ್ಲಿರುವ ವಂತಾರ ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಂದು (ಮಾರ್ಚ್ 4) ಉದ್ಘಾಟಿಸಿದರು.

ವಂತಾರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಭೇದಗಳಿಗೆ ನೆಲೆ ಒದಗಿಸಲಾಗಿದೆ. ಮತ್ತು ಒಂದೂವರೆ ಲಕ್ಷಕ್ಕೂ ಹೆಚ್ಚು ರಕ್ಷಣೆ ಮಾಡಲಾದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ವಂತಾರದಲ್ಲಿ ಇರುವಂಥ ವಿವಿಧ ಸೌಲಭ್ಯಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದರು. ಇನ್ನು ಪುನರ್ವಸತಿ ಒದಗಿಸಲಾದ ವಿವಿಧ ಪ್ರಭೇದದ ಪ್ರಾಣಿಗಳೊಂದಿಗೆ ಅವರು ಸಮಯವನ್ನು ಕಳೆದರು.

ವಂತಾರದಲ್ಲಿ ಇರುವ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಎಂಆರ್‌ಐ, ಸಿಟಿ ಸ್ಕ್ಯಾನ್‌ಗಳು, ಐಸಿಯುಗಳು ಸೇರಿದಂತೆ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ವನ್ಯಜೀವಿ ಅರಿವಳಿಕೆ, ಹೃದಯಶಾಸ್ತ್ರ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತವೈದ್ಯಶಾಸ್ತ್ರ, ಆಂತರಿಕ ಔಷಧ ಇತ್ಯಾದಿಗಳನ್ನು ಹೊಂದಿರುವ ವಿವಿಧ ವಿಭಾಗಗಳಿಗೆ ಸಹ ಭೇಟಿ ನೀಡಿದರು. ಇಲ್ಲಿ ಅವರು ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದದ ಹಿಮಾಲಯದ ಚಿರತೆ ಮರಿ, ಕ್ಯಾರಕಲ್ಸ್ (ವಿಶಿಷ್ಟ ಬಗೆಯ ಕಾಡು ಬೆಕ್ಕು) ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳಿಗೆ ಆಹಾರ ನೀಡಿದರು, ಸಂತಸದ ಕ್ಷಣಗಳನ್ನು ಕಳೆದರು.

ಇನ್ನು ಪ್ರಧಾನಿ ಮೋದಿ ಅವರು ಆಹಾರ ನೀಡಿದಂಥ ಬಿಳಿ ಸಿಂಹದ ಮರಿಯು ವಂತಾರದಲ್ಲಿಯೇ ಜನಿಸಿದಂಥದ್ದು. ಅದರ ತಾಯಿಯನ್ನು ರಕ್ಷಿಸಿ, ಆರೈಕೆಗಾಗಿ ವಂತಾರಕ್ಕೆ ಕರೆತಂದ ನಂತರದಲ್ಲಿ ಬಿಳಿ ಸಿಂಹದ ಮರಿಯು ಜನಿಸಿತು. ಭಾರತದಲ್ಲಿ ಹಿಂದೊಮ್ಮೆ ಹೇರಳವಾಗಿದ್ದ ಕ್ಯಾರಕಲ್‌ಗಳು ಈಗ ಕಂಡುಬರುವುದು ಅಪರೂಪವಾಗುತ್ತಿವೆ. ವಂತಾರದಲ್ಲಿ ಕ್ಯಾರಕಲ್‌ಗಳ ಸಂರಕ್ಷಣೆಗಾಗಿ ಸೆರೆಯಲ್ಲಿ ಸಂತಾನೋತ್ಪತ್ತಿ ಕಾರ್ಯಕ್ರಮದಡಿ ಸಾಕಲಾಗುತ್ತದೆ ಮತ್ತು ನಂತರ ಕಾಡಿಗೆ ಬಿಡಲಾಗುತ್ತದೆ.

ನರೇಂದ್ರ ಮೋದಿ ಅವರು ಆಸ್ಪತ್ರೆಯ ಎಂಆರ್‌ಐ ಕೋಣೆಗೆ ಭೇಟಿ ನೀಡಿದರು ಮತ್ತು ಏಷಿಯಾಟಿಕ್ ಸಿಂಹಕ್ಕೆ ಎಂಆರ್‌ಐ ಮಾಡುವುದನ್ನು ವೀಕ್ಷಿಸಿದರು. ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ನಂತರ, ಅದನ್ನು ರಕ್ಷಣೆ ಮಾಡಿ ಜೀವ ಉಳಿಸುವುದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಲಾದ ಚಿರತೆಯ ಆಪರೇಷನ್ ಥಿಯೇಟರ್‌ಗೆ ಭೇಟಿ ನೀಡಿದರು.

ವಂತಾರದಲ್ಲಿ ರಕ್ಷಿಸಲಾದ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನೇ ಬಹುತೇಕ ಪ್ರತಿಬಿಂಬಿಸುವ ಸ್ಥಳಗಳಲ್ಲಿ ಇರಿಸಲಾಗಿದೆ. ಇಲ್ಲಿ ಕೈಗೊಂಡ ಕೆಲವು ಪ್ರಮುಖ ಸಂರಕ್ಷಣಾ ಉಪಕ್ರಮಗಳಲ್ಲಿ ಏಷಿಯಾಟಿಕ್ ಸಿಂಹ, ಹಿಮ ಚಿರತೆ, ಒಂದು ಕೊಂಬಿನ ಘೇಂಡಾಮೃಗ ಇತರವು ಸೇರಿಕೊಂಡಿವೆ.

ನರೇಂದ್ರ ಮೋದಿ ಅವರು ವಿವಿಧ ಉಗ್ರ ಸ್ವರೂಪದ- ಸ್ವಭಾವದ ಪ್ರಾಣಿಗಳೊಂದಿಗೆ ಸಮಯ ಕಳೆದರು. ಅದರಲ್ಲೂ ಗೋಲ್ಡನ್ ಟೈಗರ್‌ನೊಂದಿಗೆ ಮುಖಾಮುಖಿಯಾಗಿ ಕುಳಿತರು. ಒಂದೇ ತಾಯಿಯ ಮರಿಗಳಾದ 4 ಹಿಮ ಹುಲಿಗಳು ಇಲ್ಲಿ ಇದ್ದು, ಅವುಗಳನ್ನು ಸರ್ಕಸ್‌ನಿಂದ ರಕ್ಷಿಸಲಾಗಿದೆ. ಅಲ್ಲಿ ಅವುಗಳು ವಿವಿದ ಪ್ರದರ್ಶನಗಳನ್ನು ನೀಡುತ್ತಿದ್ದವು, ಜತೆಗೆ ಬಿಳಿ ಸಿಂಹ ಮತ್ತು ಹಿಮ ಚಿರತೆಗಳಿದ್ದವು.

ಅಪರೂಪದ ಒಕಾಪಿಯ ಮೈ ದಡವಿದ ನರೇಂದ್ರ ಮೋದಿ ಅವರು, ಚಿಂಪಾಂಜಿಗಳಿಗೆ ಎದುರಾದರು. ಸಾಕುಪ್ರಾಣಿಗಳಾಗಿ ಇರಿಸಲಾಗಿದ್ದ ಒಂದ ಕಡೆಯಿಂದ ವಂತಾರಕ್ಕೆ ಅವುಗಳನ್ನು ತರಲಾಗಿದೆ. ಇನ್ನು ಒರಾಂಗುಟನ್‌ಗಳೊಂದಿಗೆ ಅಪ್ಪಿಕೊಂಡರು ಮತ್ತು ಪ್ರೀತಿಯಿಂದ ಆಟವಾಡಿದರು. ನೀರಿನ ಅಡಿಯಲ್ಲಿರುವ ನೀರಾನೆಯನ್ನು, ಮೊಸಳೆಗಳನ್ನು ನೋಡಿದರು. ಜೀಬ್ರಾಗಳ ನಡುವೆ ನಡೆದಾಡಿದರು. ಜಿರಾಫೆ ಮತ್ತು ಘೇಂಡಾಮೃಗದ ಮರಿಗಳಿಗೆ ಆಹಾರ ನೀಡಿದರು. ಇನ್ನು ಒಂದು ಕೊಂಬಿನ ಘೇಂಡಾಮೃಗದ ಮರಿಯೊಂದು ಅನಾಥವಾಗಿದ್ದು, ಅದರ ತಾಯಿಯು ವಂತಾರದಲ್ಲಿಯೇ ಸಾವನ್ನಪ್ಪಿತು.

ದೊಡ್ಡ ಹೆಬ್ಬಾವು, ವಿಶಿಷ್ಟವಾದ ಎರಡು ತಲೆಯ ಹಾವು, ಎರಡು ತಲೆಯ ಆಮೆ, ಟ್ಯಾಪಿರ್ ನೋಡಿದರು. ಇನ್ನು ಚಿರತೆ ಮರಿಗಳನ್ನು ಕೃಷಿ ಜಮೀನಿನಲ್ಲಿ ಬಿಡಲಾಗಿತ್ತು. ಆ ನಂತರ ಗ್ರಾಮಸ್ಥರು ಅವುಗಳನ್ನು ಗುರುತಿಸಿ ರಕ್ಷಿಸಿದರು. ದೈತ್ಯ ನೀರುನಾಯಿ, ಬೊಂಗೊ (ಹುಲ್ಲೆ), ಸೀಲುಗಳು ಸಹ ನೋಡಿದ ನಂತರದಲ್ಲಿ ಸ್ನಾನ ಮಾಡುತ್ತಾ ಆಟವಾಡುತ್ತಿದ್ದ ಆನೆಗಳನ್ನು ಸಹ ನರೇಂದ್ರ ಮೋದಿ ವೀಕ್ಷಿಸಿದರು.

ಅಂದ ಹಾಗೆ ಈ ಹೈಡ್ರೋಥೆರಪಿ ಕೊಳಗಳು ವಿಶಿಷ್ಟವಾದವು. ಇವುಗಳಿಂದ ಸಂಧಿವಾತ ಮತ್ತು ಕಾಲು ಸಮಸ್ಯೆಗಳಿಂದ ಬಳಲುತ್ತಿರುವ ಆನೆಗಳ ಚೇತರಿಕೆಗೆ ಸಹಾಯ ಮಾಡುತ್ತವೆ ಮತ್ತು ಅವುಗಳ ಚಲನಶೀಲತೆಯನ್ನು ಸುಧಾರಿಸುತ್ತವೆ.

ಆನೆ ಆಸ್ಪತ್ರೆಯ ಕಾರ್ಯನಿರ್ವಹಣೆಯನ್ನು ಅವರು ನೋಡಿದರು. ಅಂದ ಹಾಗೆ ಇದು ಇಂಥದ್ದರ ಪೈಕಿ ವಿಶ್ವದ ಅತಿದೊಡ್ಡ ಆಸ್ಪತ್ರೆಯಾಗಿದೆ. ವಂತಾರದಲ್ಲಿ ರಕ್ಷಿಸಲಾದ ಗಿಳಿಗಳನ್ನು ಅವರು ಬಿಡುಗಡೆ ಮಾಡಿದರು. ವಂತಾರದಲ್ಲಿ ವಿವಿಧ ವಿವಿಧ ಕೇಂದ್ರಗಳ- ವಿಭಾಗಗಳನ್ನು ನಿರ್ವಹಿಸುತ್ತಿರುವ ವೈದ್ಯರು, ಸಹಾಯಕ ಸಿಬ್ಬಂದಿ ಮತ್ತು ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

BIG NEWS: ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ, ಅವರು ಬೆಳೆಯಲು ಸರ್ಕಾರ, ಜನ ಬೇಕು: ಡಿಸಿಎಂ ಡಿಕೆಶಿ

ರೈತಪರ ಬಜೆಟ್ ಮಂಡಿಸಲು ಸಿಎಂ ಸಿದ್ಧರಾಮಯ್ಯಗೆ ಬಿ.ವೈ.ವಿಜಯೇಂದ್ರ ಆಗ್ರಹ

SHOCKING : ಅಶ್ಲೀಲ ಮೆಸೇಜ್ ಕಳಿಸಿದ ಅಧಿಕಾರಿಗೆ ಕಾಲರ್ ಹಿಡಿದು ಥಳಿಸಿದ ಮಹಿಳಾ ಸಿಬ್ಬಂದಿಗಳು : ವಿಡಿಯೋ ವೈರಲ್ | Watch Video

Share. Facebook Twitter LinkedIn WhatsApp Email

Related Posts

SHOCKING : ‘ನಾನು ಒಳ್ಳೆಯ ಮಗನಾಗಲು ಸಾಧ್ಯವಾಗಲಿಲ್ಲ’ : ಡೆತ್ ನೋಟ್ ಬರೆದಿಟ್ಟು ಬಿ.ಟೆಕ್ ವಿದ್ಯಾರ್ಥಿ ಆತ್ಮಹತ್ಯೆ.!

1 Min Read

SHOCKING :ಮದ್ಯದ ಅಮಲಿನಲ್ಲಿ ರಸ್ತೆ ಬಿದ್ದು ಹೊರಳಾಡಿದ ತಾಯಿ, ಪಕ್ಕದಲ್ಲೇ ಅಳುತ್ತಿದ್ದ ಮಗು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

1 Min Read

BIG BREAKING : ಉನ್ನಾವೋ ಅತ್ಯಾಚಾರ ಕೇಸ್ : `ಕುಲದೀಪ್ ಸಿಂಗ್ ಸೆಂಗಾರ್’ ಜೀವಾವಧಿ ಶಿಕ್ಷೆ ಅಮಾನತು ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ | Unnao rape case

1 Min Read
Recent News

BIG NEWS : ಮುಂದಿನ ‘CM’ ಟ್ರೆಂಡ್ : ಬೆಂಗಳೂರು ಬೆನ್ನಲ್ಲೇ, ಬೆಳಗಾವಿಯಲ್ಲೂ ಡಿ.ಕೆ. ಶಿವಕುಮಾರ್ ಬ್ಯಾನರ್ ರಾಜಕಾರಣ!

SHOCKING : ‘ನಾನು ಒಳ್ಳೆಯ ಮಗನಾಗಲು ಸಾಧ್ಯವಾಗಲಿಲ್ಲ’ : ಡೆತ್ ನೋಟ್ ಬರೆದಿಟ್ಟು ಬಿ.ಟೆಕ್ ವಿದ್ಯಾರ್ಥಿ ಆತ್ಮಹತ್ಯೆ.!

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold, Silver Prices

SHOCKING :ಮದ್ಯದ ಅಮಲಿನಲ್ಲಿ ರಸ್ತೆ ಬಿದ್ದು ಹೊರಳಾಡಿದ ತಾಯಿ, ಪಕ್ಕದಲ್ಲೇ ಅಳುತ್ತಿದ್ದ ಮಗು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

State News
KARNATAKA

BIG NEWS : ಮುಂದಿನ ‘CM’ ಟ್ರೆಂಡ್ : ಬೆಂಗಳೂರು ಬೆನ್ನಲ್ಲೇ, ಬೆಳಗಾವಿಯಲ್ಲೂ ಡಿ.ಕೆ. ಶಿವಕುಮಾರ್ ಬ್ಯಾನರ್ ರಾಜಕಾರಣ!

By ಸುರೇಶ್‌ KARNATAKA 2 Mins Read

ಬೆಳಗಾವಿ :ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಒಳಗೊಳಗೇ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ‘ಮುಂದಿನ…

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold, Silver Prices

ಹಾಸನದಲ್ಲಿ ವರದಕ್ಷಿಣೆ ಹಣಕ್ಕಾಗಿ, ಪ್ರೀತಿಸಿ ಮದುವೆಯಾದ ಪತ್ನಿಗೆ ಚಾಕು ಇರಿದು ಕೊಲೆಗೆ ಯತ್ನ : ಆರೋಪಿ ಪತಿ ಅರೆಸ್ಟ್!

BREAKING : ನಟ ದರ್ಶನ್ ಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ : ಇನ್ನೂ ಒಂದು ವರ್ಷ ಜೈಲುವಾಸ ಖಾಯಂ | Actor Darshan

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.