ಬೆಂಗಳೂರು : ಹೊಸ ವರ್ಷ 2023 ರನ್ನು ರಾಜ್ಯದ ಜನರು ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿ ಹಲವು ರಸ್ತೆಗಳಲ್ಲಿ ಜನ ಜಂಗುಳಿ ನೆರೆದಿತ್ತು. ಇನ್ನೂ, ಇಯರ್ ಎಂಡ್ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿತ್ತು, ಅಬಕಾರಿ ಇಲಾಖೆಗೆ ಭಾರೀ ಆದಾಯ ತಂದುಕೊಟ್ಟಿದೆ.
ಡಿಸೆಂಬರ್ 27 ರಂದು 3.57 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 28 ರಂದು 2.31 ಲಕ್ಷ ಲೀಟರ್ ಮದ್ಯ , 1.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಮದ್ಯ, 1.93 ಲಕ್ಷ ಲೀಟರ್ ಬಿಯರ್ , ಡಿಸೆಂಬರ್ 30 ರಂದು .93 ಲಕ್ಷ ಲೀಟರ್ ಮದ್ಯ, 2.59 ಲಕ್ಷ ಲೀಟರ್ ಬಿಯರ್ , ಇನ್ನೂ 2022 ರ ಕೊನೆಯ ದಿನವಾದ ಡಿಸೆಂಬರ್ 31 ರಂದು 3 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ 2022-23 ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ ಗುರಿ ನೀಡಿತ್ತು, ಈ ವರ್ಷದ ಡಿ.29 ರವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಇಲಾಖೆಗೆ ಬರೋಬ್ಬರಿ 21,981 ಕೋಟಿ ರೂ ಆದಾಯ ಬಂದಿದೆ ಎಂದು ತಿಳಿದು ಬಂದಿದೆ.
ಇನ್ನೂ, ರಾಜ್ಯದ ಹಲವು ಕಡೆ ಜನರು ಹೊಸ ವರ್ಷವನ್ನು ದೇವಾಲಯಗಳಿಗೆ ತೆರಳುವ ಮೂಲಕ ಬರಮಾಡಿಕೊಂಡಿದ್ದಾರೆ. ಜ.1 ಭಾನುವಾರವಾದ್ದರಿಂದ ನಿನ್ನೆ ಜನರು ಪ್ರವಾಸಿ, ತಾಣ, ದೇವಾಲಯಗಳಿಗೆ ಹೋಗುವ ಮೂಲಕ ಹೊಸ ವರ್ಷವನ್ನು ( 2023) ಬರ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ. ಪೊಲೀಸ್ ಕಣ್ಗಾವಲಿನಲ್ಲಿಯೇ ಹೊಸ ವರ್ಷ ಆಚರಣೆ ಮಾಡಲಾಗಿದೆ.
BIG NEWS: ಸಂಕ್ರಾಂತಿ ಬಳಿಕ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ – ಹೆಚ್ ಡಿ ಕುಮಾರಸ್ವಾಮಿ ಘೋಷಣೆ
BIGG NEWS: ಕುಂದಾನಗರಿಯಲ್ಲಿ ಮತ್ತೆ ರಕ್ತಪಾತ; ಗುಟ್ಕಾ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
BIGG NEWS: ಕುಂದಾನಗರಿಯಲ್ಲಿ ಮತ್ತೆ ರಕ್ತಪಾತ; ಗುಟ್ಕಾ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ