Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬ್ಯಾಂಕ್ ಲಾಕರ್‌ ನಲ್ಲಿಟ್ಟ ಚಿನ್ನ ಕಳುವಾದರೆ ನಷ್ಟ ಪರಿಹಾರ ಸಿಗುತ್ತಾ? RBI ನಿಯಮಗಳು ಇಲ್ಲಿವೆ!

SHOCKING : ಪತ್ನಿಗೆ ಮನಬಂದಂತೆ ಥಳಿಸಿ, ತಲೆಬೋಳಿಸಿದ ಪಾಪಿಪತಿ : ಆಘಾತಕಾರಿ ವೀಡಿಯೋ ವೈರಲ್ | WATCH VIDEO

BREAKING : 2026ರ `ಕಾಮನ್‌ ವೆಲ್ತ್’ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ `ನೀರಜ್ ಚೋಪ್ರಾ’ ; ನಾಲ್ಕನೇ ಸ್ಥಾನಕ್ಕೆ ತೃಪ್ತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯದ ಗೆಜ್ಜಲಗೆರೆಯಲ್ಲಿ ಹೆದ್ದಾರಿ ರಸ್ತೆ ತಡೆ : 80ಕ್ಕೂ ಹೆಚ್ಚು ರೈತ ಮುಖಂಡರ ಬಂಧನ
KARNATAKA

ಮಂಡ್ಯದ ಗೆಜ್ಜಲಗೆರೆಯಲ್ಲಿ ಹೆದ್ದಾರಿ ರಸ್ತೆ ತಡೆ : 80ಕ್ಕೂ ಹೆಚ್ಚು ರೈತ ಮುಖಂಡರ ಬಂಧನ

By ವಸಂತ ಬಿ ಈಶ್ವರಗೆರೆ

ಮಂಡ್ಯ : ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಸೋಮವಾರ ಬೆಂಗಳೂರು – ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆ ತಡೆ ನಡೆಸುತ್ತಿದ್ದ 80 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಪಂ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆ ಗ್ರಾಮದ ಗ್ರಾ.ಪಂ ಕಚೇರಿಯ ಮುಂದೆ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದರು.

ಧರಣಿ ಪ್ರತಿಭಟನೆಯು 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಮ್ ನೇತೃತ್ವದಲ್ಲಿ ಸುಮಾರು 300 ಕ್ಕೂ ಹೆಚ್ಚು ಗ್ರಾಮಸ್ಥರು ಮೈಸೂರು – ಬೆಂಗಳೂರು ಸರ್ವಿಸ್ ರಸ್ತೆಯಲ್ಲಿ ಸಂಚಾರ ತಡೆ ಮಾಡಿ ಪ್ರತಿಭಟನೆಯನ್ನು ನಡೆಸುತ್ತಿದರು.

ಎತ್ತಿನಗಾಡಿ ಹಾಗೂ ಜಾನುವಾರುಗಳೊಂದಿಗೆ ಗ್ರಾಮಸ್ಥರು ಆಗಮಿಸಿ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಹೆದ್ದಾರಿಯಲ್ಲೇ ಕುಳಿತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೂ ಮೊದಲು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿರವರು ರಸ್ತೆ ತಡೆಯನ್ನು ಕೈಬಿಡಲು ಪ್ರತಿಭಟನಾ ಕಾರರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜವಾಗಲಿಲ್ಲ.ನಂತರ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ರೈತ ಪರ ಹೋರಾಟಗಾತಿ ಸುನಂದಾ ಜಯರಾಮು, ಲಿಂಗಪ್ಪಾಜಿ, ಶಂಕರ್, ಜಿ.ಪಿ.ಯೋಗೇಶ್, ವೀರಪ್ಪ, ಚಂದ್ರಶೇಖರ, ಗೌರಮ್ಮ, ಜಯಮ್ಮ ಸೇರಿದಂತೆ ಸುಮಾರು 80 ಕ್ಕೂ ಹೆಚ್ಚು ಪ್ರತಿಟನಾಕಾರರನ್ನು ವಶಕ್ಕೆ ಪಡೆದು 3 ವಾಹನಗಳಲ್ಲಿ ಮಂಡ್ಯದ ಪೊಲೀಸ್ ಠಾಣೆಗೆ ಕರೆದೋಯ್ದರು. ಪ್ರತಿಭಟನೆಯಲ್ಲಿ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರೈತ ಪರ ಹೋರಾಟಗಾತಿ ಸುನಂದಾ ಜಯರಾಮ್ ಮಾತನಾಡಿ, ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವ ಕ್ರಮ ಖಂಡಿಸಿ ಗ್ರಾಮಸ್ಥರು ನಿರಂತರವಾಗಿ 50 ದಿನಗಳ ಹೋರಾಟವನ್ನು ನಡೆಸುತ್ತಿದ್ದರೂ, ಸರ್ಕಾರದ ಯಾವುದೇ ಪ್ರತಿನಿಧಿಗಳು ಅಧಿಕಾರಿಗಳು ರೈತರ, ಗ್ರಾಮಸ್ಥರು ಆಶೋತ್ತರಗಳಿಗೆ ಸ್ಪಂದಿಸದೆ ನಿರ್ಲಕ್ಷ ಮಾಡಿದ್ದಾರೆ ಎಂದು ಆರೋಪಿಸಿದರು.

ಇದರ ವಿರುದ್ಧವಾಗಿ ಗೆಜ್ಜಲಗೆರೆ ಹೆದ್ದಾರಿಯ ರಸ್ತೆ ತಡೆಯಲು ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ಮಾಡಲು ಹೊರಟಾಗ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅವಕಾಶ ಮಾಡಿಕೊಡದೆ ರೈತರ ಹೋರಾಟವನ್ನು ದಿಕ್ಕು ತಪ್ಪಿಸುವ ಸಲುವಾಗಿ ರೈತರನ್ನು, ಮಹಿಳೆಯರು ಮತ್ತು ಗ್ರಾಮಸ್ಥರನ್ನು ಭಯಭೀತರನ್ನಾಗಿ ಮಾಡುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಮಾರು 80 ಕ್ಕೂ ಹೆಚ್ಚು ಗ್ರಾಮಸ್ಥರನ್ನು ಬಂಧಿಸಿರುವುದು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.

ಗೆಜ್ಜಲಗೆರೆ ಗ್ರಾಪಂ ಅನ್ನು ಮದ್ದೂರು ನಗರಸಭೆಯಿಂದ ಕೈ ಬಿಡುವತನಕ ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆಯನ್ನು ನಿರಂತರವಾಗಿ ಮುಂದುವರೆಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ ಕುಮಾರ್, ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನಲ್ಲಿ ವಹಿಸಿದ್ದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಂದ್ರಶೇಖರ್, ಲಿಂಗಪ್ಪಾಜಿ, ಮುದ್ದೇಗೌಡ್ರು, ಕೆ.ಬೊರೇಗೌಡ, ವಿರೇಶ್, ಗುರುಮೂರ್ತಿ, ಮಂಜಣ್ಣ, ಜಗದೀಶ್, ರಾಮಲಿಂಗಯ್ಯ, ಯೋಗೇಶ್ ಸೇರಿದಂತೆ ಇತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

BIG NEWS: ಇನ್ಮುಂದೆ ‘ಸೋಷಿಯಲ್ ಮೀಡಿಯಾ ಪೋಸ್ಟ್’ಗಳ ವಿರುದ್ಧ ‘FIR ದಾಖಲು’ ವೇಳೆ ಈ ಮಾರ್ಗಸೂಚಿ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

ಇವು ವಿಶ್ವದ ಅತಿ ಹೆಚ್ಚು `ಆದಾಯ’ ಹೊಂದಿರುವ ಟಾಪ್ 10 ಕಂಪನಿಗಳು : `ರಿಲಯನ್ಸ್’ಗೆ ಎಷ್ಟನೇ ಸ್ಥಾನ ಗೊತ್ತಾ?

Share. Facebook Twitter LinkedIn WhatsApp Email

Related Posts

ಕರುನಾಡಿಗೆ ಬರದ ಆತಂಕ: ಕೈಕೊಟ್ಟ ಮುಂಗಾರು, ಅನ್ನದಾತ ಕಂಗಾಲು!

1 Min Read

BREAKING : ನಟಿ ರುಕ್ಮಿಣಿ ವಸಂತ ಫೋಟೋ ಡೀಪ್‌ ಫೇಕ್ ಕೇಸ್ : ಮೂವರು ಆರೋಪಿಗಳು ಅರೆಸ್ಟ್.!

1 Min Read

ರಾಜ್ಯದ ಪೂರ್ವಪ್ರಾಥಮಿಕ ಶಾಲೆಗಳಲ್ಲಿ `LKG-UKG’ ದಾಖಲಾತಿ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

1 Min Read
Recent News

ಬ್ಯಾಂಕ್ ಲಾಕರ್‌ ನಲ್ಲಿಟ್ಟ ಚಿನ್ನ ಕಳುವಾದರೆ ನಷ್ಟ ಪರಿಹಾರ ಸಿಗುತ್ತಾ? RBI ನಿಯಮಗಳು ಇಲ್ಲಿವೆ!

SHOCKING : ಪತ್ನಿಗೆ ಮನಬಂದಂತೆ ಥಳಿಸಿ, ತಲೆಬೋಳಿಸಿದ ಪಾಪಿಪತಿ : ಆಘಾತಕಾರಿ ವೀಡಿಯೋ ವೈರಲ್ | WATCH VIDEO

BREAKING : 2026ರ `ಕಾಮನ್‌ ವೆಲ್ತ್’ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ `ನೀರಜ್ ಚೋಪ್ರಾ’ ; ನಾಲ್ಕನೇ ಸ್ಥಾನಕ್ಕೆ ತೃಪ್ತಿ

ಕರುನಾಡಿಗೆ ಬರದ ಆತಂಕ: ಕೈಕೊಟ್ಟ ಮುಂಗಾರು, ಅನ್ನದಾತ ಕಂಗಾಲು!

State News
KARNATAKA

ಕರುನಾಡಿಗೆ ಬರದ ಆತಂಕ: ಕೈಕೊಟ್ಟ ಮುಂಗಾರು, ಅನ್ನದಾತ ಕಂಗಾಲು!

By kannadanewsnow57 KARNATAKA 1 Min Read

ಬೆಂಗಳೂರು: ಜೂನ್ ತಿಂಗಳು ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ಕರ್ನಾಟಕದ ಹಲವೆಡೆ ತೀವ್ರ…

BREAKING : ನಟಿ ರುಕ್ಮಿಣಿ ವಸಂತ ಫೋಟೋ ಡೀಪ್‌ ಫೇಕ್ ಕೇಸ್ : ಮೂವರು ಆರೋಪಿಗಳು ಅರೆಸ್ಟ್.!

ರಾಜ್ಯದ ಪೂರ್ವಪ್ರಾಥಮಿಕ ಶಾಲೆಗಳಲ್ಲಿ `LKG-UKG’ ದಾಖಲಾತಿ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಗ್ರಾಹಕರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಇ-ಕೆವೈಸಿ ಯಾರಿಗೆ ಕಡ್ಡಾಯ, ಯಾರಿಗೆ ಬೇಡ? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.