Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಫ್ರೆಶ್’ ಕಾಣಲು ಸೌತೆಕಾಯಿಗೆ ವಿಷಕಾರಿ ಬಣ್ಣದ ಸ್ನಾನ! ಹಸಿರು ಪೇಂಟ್ ಹಚ್ಚುತ್ತಿದ್ದ ಮಹಿಳೆ ಸೆರೆ: ವಿಡಿಯೋ ವೈರಲ್

BREAKING: ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ ಡೌಟ್ | TVK Chief Vijay

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಒಮ್ಮೆಗೇ ಐದು ಪರೀಕ್ಷೆಗಳ ದಿನಾಂಕ ಘೋಷಣೆ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್
KARNATAKA

ಒಮ್ಮೆಗೇ ಐದು ಪರೀಕ್ಷೆಗಳ ದಿನಾಂಕ ಘೋಷಣೆ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್

By kannadanewsnow05

ಬೆಂಗಳೂರು : 2025ನೇ ಸಾಲಿನ ಎಂಜಿನಿಯರಿಂಗ್‌, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್‌ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ನಡೆಸಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜನವರಿ 23ರಿಂದ ಫೆಬ್ರುವರಿ 21ರವರೆಗೆ ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಗುರುವಾರ ಇಲ್ಲಿ ಪ್ರಕಟಿಸಿದರು.

ಇದೇ ಸಂದರ್ಭದಲ್ಲಿ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ), ಪಿಜಿಸಿಇಟಿ ಮತ್ತು ಎಂ.ಫಾರ್ಮಾ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳ ದಿನಾಂಕಗಳನ್ನೂ ಸಚಿವರು ಘೋಷಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ವರ್ಷದಲ್ಲಿ ನಡೆಯುವ ಎಲ್ಲ ವೃತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳ ಬಗ್ಗೆ ಒಮ್ಮೆಗೇ ಸಚಿವರು ಮಾಹಿತಿ ನೀಡಿದ್ದು, ಆ ಪ್ರಕಾರ ಎಲ್ಲ ಸಂಬಂಧಪಟ್ಟ ಇಲಾಖೆಗಳೂ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ಸೂಚಿಸಿದ್ದಾರೆ.

ಏಪ್ರಿಲ್‌ 16ರಂದು ಬೆಳಿಗ್ಗೆ 10.30ರಿಂದ ಭೌತವಿಜ್ಞಾನ ಮತ್ತು ಮಧ್ಯಾಹ್ನ 2.30ರಿಂದ ರಸಾಯನ ವಿಜ್ಞಾನ ಹಾಗೂ ಏಪ್ರಿಲ್‌ 17ರಂದು ಬೆಳಿಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಏ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸ್‌ ಮತ್ತು ಬಿಎಸ್‌ಸಿ (ನರ್ಸಿಂಗ್) ಕೋರ್ಸ್‌ಗಳ ಪ್ರವೇಶಕ್ಕೂ ಇದೇ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದರು ಅವರು ವಿವರಿಸಿದ್ದಾರೆ.

ಸಿಇಟಿ-2025 ರ ಅರ್ಜಿಯು ಎಲ್ಲಾ ಕೋರ್ಸುಗಳಿಗೆ ಸಾಮಾನ್ಯ ಅರ್ಜಿಯಾಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೊಂದಾಯಿಸಿಕೊಂಡು, ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಅದೇ ರೀತಿ ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಾತಿಗೆ ಇದೇ ಅರ್ಜಿ ಅನ್ವಯವಾಗುತ್ತಿದ್ದು, ಅವರು ಕೂಡ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಸಿಇಟಿ ಅರ್ಜಿಯನ್ನು ಭರ್ತಿ ಮಾಡುವ ಮತ್ತು ದಾಖಲೆಗಳ ಪರಿಶೀಲನೆ ವಿಷಯದಲ್ಲಿ ಈ ಬಾರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಯಾರದ್ದೊ ಅರ್ಜಿಯನ್ನು ಇನ್ಯಾರೊ ಭರ್ತಿ ಮಾಡಲು ಸಾಧ್ಯವೇ ಇರುವುದಿಲ್ಲ. ಪ್ರತಿ ಹಂತದಲ್ಲಿ ಪ್ರಮಾಣಿಕರಿಸಿಯೇ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ. ಇದರಿಂದ ಅಕ್ರಮಗಳಿಗೆ ಬ್ರೇಕ್‌ ಹಾಕಿದಂತಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಈ ಬಾರಿಯ ವಿಶೇಷ ಏನು?

* ಲಾಗಿನ್‌ ಸಂದರ್ಭದಲ್ಲಿ ಅಭ್ಯರ್ಥಿಗಳು ನಮೂದಿಸುವ ಮೊಬೈಲ್‌ ಸಂಖ್ಯೆಗೆ ಒಟಿಪಿ (OTP) ಪ್ರಮಾಣೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ಮೊಬೈಲ್ ಸಂಖ್ಯೆ ಬದಲಾವಣೆ ಯಾವುದೇ ಹಂತದಲ್ಲಿ ಪರಿಗಣಿಸುವುದಿಲ್ಲ.
* ಆನ್‌ಲೈನ್ ಅರ್ಜಿಯಲ್ಲಿ ಅಭ್ಯರ್ಥಿಯು ನಮೂದಿಸುವ ಜಾತಿ / ಜಾತಿ ಆದಾಯ ಪ್ರಮಾಣ ಪತ್ರ ಮತ್ತು̳ 371(ಜೆ) ಆರ್‌ಡಿ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಗಳ ಮೀಸಲಾತಿ ವಿವರಗಳನ್ನು ಪಡೆಯಲಾಗುವುದು.
* ಅದೇ ರೀತಿ SATS (Students Achievement Tracking System) ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಯ ವ್ಯಾಸಂಗದ ವಿವರಗಳನ್ನು ವೆಬ್‌ಸರ್ವೀಸ್ ಮೂಲಕ ಪಡೆಯಲಾಗುವುದು.
* ನಂತರ ಅಭ್ಯರ್ಥಿಗಳಿಗೆ ಕ್ಲೈಮ್ಸ್‌ ಸರ್ಟಿಫಿಕೇಟ್‌ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.
* Claims Certificate ನಲ್ಲಿ Successfully Verified ಎಂದು ನಮೂದಿಸಿದ್ದರೆ ಅಂತಹ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಯಾವುದೇ ಕಚೇರಿಗೆ / ಕಾಲೇಜಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ನಂತರದ ದಿನಗಳಲ್ಲಿ ಸಿಇಟಿ ಫಲಿತಾಂಶದ ನಂತರ ವೆರಿಫಿಕೇಶನ್ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
* Claimed Verified Or claimed not verified or not claimed ಎಂದು claims certificate ನಲ್ಲಿ ನಮೂದಾಗಿದ್ದರೆ ಅಭ್ಯರ್ಥಿಗಳು 2ನೆ ಪಿಯುಸಿ / 12ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿರುವ ಆಯಾ ಕಾಲೇಜಿಗೆ ಭರ್ತಿ ಮಾಡಿದ ಅರ್ಜಿಯನ್ನು ಮತ್ತು ಕ್ಲೇಮ್ಸ್ ಮಾಡಿರುವ ಎಲ್ಲಾ ಮೂಲ ದಾಖಲೆಗಳನ್ನು ಪ್ರಾಂಶುಪಾಲರಿಗೆ ತೋರಿಸಿ ಒಂದು ಸೆಟ್ ಪ್ರತಿಗಳನ್ನು ಕ್ಲೇಮ್ಸ್ ಸರ್ಟಿಫಿಕೇಟ್ ನೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಕಾಲೇಜಿನವರು ಕ್ಲೇಮ್ಸ್ ಸರ್ಟಿಫಿಕೇಟ್ ನೊಂದಿಗೆ ಪರಿಶೀಲನೆ ಮಾಡಿದ ನಂತರ ಅಭ್ಯರ್ಥಿಯ ವಿವರಗಳನ್ನು ಅನುಮೋದಿಸುತ್ತಾರೆ.
* ಪ್ರತಿ ಹಂತದ ಪ್ರಕ್ರಿಯೆ ಕುರಿತು ಅಭ್ಯರ್ಥಿಯ ಮೊಬೈಲ್‌ಗೆ ಸಂದೇಶ ಸ್ವೀಕೃತವಾಗುತ್ತದೆ.
* ಪ್ರಾಧಿಕಾರವು ರಾಜ್ಯದಲ್ಲಿರುವ ಎಲ್ಲಾ ಪಿಯುಸಿ ಕಾಲೇಜುಗಳಿಗೆ ಲಾಗಿನ್ ನೀಡಿ ಅಭ್ಯರ್ಥಿಗಳಿಂದ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಕಾಲೇಜಿನವರು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿವರಗಳನ್ನು ಪಡೆದು, ಪರಿಶೀಲನೆ ಮಾಡಲು ತತ್ರಾಂಶವನ್ನು ಸಿದ್ದಪಡಿಸಿದೆ.
* ಅಭ್ಯರ್ಥಿಗಳು ಬಿಇಒ ಕಚೇರಿಗೆ ಪರಿಶೀಲನೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
* ವಿಶೇಷ ಕ್ಯಾಟಗರಿಗಳಾದ ಎನ್‌ಸಿಸಿ, ಕ್ರೀಡೆ, ಸೈನಿಕ, ಮಾಜಿ ಸೈನಿಕ, ಸಿಎಪಿಎಫ್, ಮಾಜಿ ಸಿಎಪಿಎಫ್, ಸ್ಕೌಟ್ಸ್ ಅಂಡ್ ಗೈಡ್ಸ್, ಆಂಗ್ಲೋ ಇಂಡಿಯನ್ಸ್ ಕೋಟದ ಅಡಿಯಲ್ಲಿ ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಕೆಇಎ ನಲ್ಲಿ ಖುದ್ದಾಗಿ ಸಲ್ಲಿಸಲು ಪ್ರತ್ಯೇಕವಾಗಿ ಪರೀಕ್ಷೆ ನಂತರ ದಿನಾಂಕಗಳನ್ನು ನೀಡಲಾಗುವುದು.
* ಈ ಬಾರಿ ವಿದ್ಯಾರ್ಥಿಗಳು ಯಾವುದೇ ದಾಖಲೆಗಳನ್ನು ಆನ್‌ ಲೈನ್‌ನಲ್ಲಿ ಅಪಲೋಡ್‌ ಮಾಡುವ ಅಗತ್ಯವಿರುವುದಿಲ್ಲ.

ವಿವಿಧ ಪರೀಕ್ಷೆಗಳ ದಿನಾಂಕಗಳು

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಲ್ಯಾಟರಲ್‌ ಎಂಟ್ರಿ ಮೂಲಕ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್‌ಗೆ ಸೇರಲು ಡಿಸಿಇಟಿ ಪರೀಕ್ಷೆ ಬರೆಯಬೇಕಾಗುತ್ತದೆ. ಅದಕ್ಕೆ ಅರ್ಜಿ ಸಲ್ಲಿಸಲು ಏಪ್ರಿಲ್‌ 24ರಿಂದ ಮೇ 10ರವರೆಗೆ ಅವಕಾಶ ನೀಡಲಾಗುತ್ತದೆ. ಈ ಪರೀಕ್ಷೆ ಮೇ 31ರಂದು ನಡೆಯಲಿದೆ ಎಂದು ಸಚಿವ ಸುಧಾಕರ್‌ ತಿಳಿಸಿದ್ದಾರೆ.

ಪಿಜಿಸಿಇಟಿ (ಎಂಇ, ಎಂಟೆಕ್‌, ಎಂ.ಆರ್ಕಿಟೆಕ್ಚರ್)‌ ಕೋರ್ಸ್‌ಗಳ ಪ್ರವೇಶಕ್ಕೆ ಮೇ 31ರಂದು ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಏಪ್ರಿಲ್‌ 24ರಿಂದ ಮೇ 10ರವರೆಗೆ ಅವಕಾಶ ನೀಡಲಾಗಿದೆ.ಅದೇ ರೀತಿ ಎಂಸಿಎ ಮತ್ತು ಎಂಬಿಎ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್‌ 22ರಂದು ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಏಪ್ರಿಲ್‌ 24ರಿಂದ ಜೂನ್‌ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಎಂ.ಫಾರ್ಮ ಮತ್ತು ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್‌ 22ರಂದು ಪರೀಕ್ಷೆ ನಡೆಸಲಾಗುತ್ತದೆ. ಏಪ್ರಿಲ್‌ 24ರಿಂದ ಜೂನ್‌ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ.ಬಹುತೇಕ ಇದೇ ದಿನಾಂಕಗಳಂದೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

1 Min Read

ಮೇ.13ಕ್ಕೆ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ 74ನೇ ಜನ್ಮದಿನೋತ್ಸವ ಆಚರಣೆ; ಟ್ರಸ್ಟಿ ವಿಜಯಕುಮಾರ್ ಹೆರಬೆಟ್ಟು

2 Mins Read

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

2 Mins Read
Recent News

‘ಫ್ರೆಶ್’ ಕಾಣಲು ಸೌತೆಕಾಯಿಗೆ ವಿಷಕಾರಿ ಬಣ್ಣದ ಸ್ನಾನ! ಹಸಿರು ಪೇಂಟ್ ಹಚ್ಚುತ್ತಿದ್ದ ಮಹಿಳೆ ಸೆರೆ: ವಿಡಿಯೋ ವೈರಲ್

BREAKING: ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ ಡೌಟ್ | TVK Chief Vijay

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

ಹರಡುತ್ತಿದೆ ಹಂತಾವೈರಸ್ ಭೀತಿ: ದೇಶಾದ್ಯಂತ ಹದ್ದಿನ ಕಣ್ಣಿಟ್ಟ ಭಾರತೀಯ ಆರೋಗ್ಯ ಸಂಸ್ಥೆಗಳು

State News
KARNATAKA

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

By kannadanewsnow09 KARNATAKA 1 Min Read

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಮಾರಿಕಾಂಬಾ ದೇವಸ್ಥಾನದ ತಿರುವಿನಲ್ಲಿ ಮರಗಳನ್ನು ತುಂಬಿದ್ದ ಲಾರಿ ಹಾಗೂ ಟಾಟಾ ಏಸ್ ನಡುವೆ…

ಮೇ.13ಕ್ಕೆ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ 74ನೇ ಜನ್ಮದಿನೋತ್ಸವ ಆಚರಣೆ; ಟ್ರಸ್ಟಿ ವಿಜಯಕುಮಾರ್ ಹೆರಬೆಟ್ಟು

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

BIG NEWS: ‘ಸಕಾಲ’ ಸೇವೆಗೆ ಸಚಿವ ಕೃಷ್ಣ ಬೈರೇಗೌಡ ‘ಡಿಜಿಟಲ್’ ಬಲ: ಲಂಚದ ಹಾವಳಿ ಮತ್ತು ವಿಳಂಬಕ್ಕೆ ಬ್ರೇಕ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.