ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಈ ಕುರಿತಂತೆ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ ಮಾಹಿತಿ ನೀಡಿದರು. ಕರ್ನಾಟಕ ಏರೋಸ್ಪೇಸ್ ಡಿಫೆನ್ಸ್ ನೀತಿಗೆ ಅನುಮತಿ ನೀಡಲಾಗಿದೆ. ರಕ್ಷಣಾ ನೀತಿಯಲ್ಲಿ ಕರ್ನಾಟಕ ಹಬ್ ಮಾಡುವ ನೀತಿ ಇದಾಗಿದೆ. ನಾಲ್ಕು ವಲಯಗಳನ್ನ ಇದರಲ್ಲಿ ಮಾಡಿದ್ದೇವೆ ಎಂದರು.
BIG BREAKING NEWS: ಕರ್ನಾಟಕದ ‘6 ಪೊಲೀಸ್ ಅಧಿಕಾರಿ’ಗಳಿಗೆ ‘ಕೇಂದ್ರ ಗೃಹ ಸಚಿವರ ಪದಕ’: ಇಲ್ಲಿದೆ ಪಟ್ಟಿ
ಉದ್ಯಮ ಪ್ರಾರಂಭಿಸುವವರಿಗೆ ಸಬ್ಸಿಡಿ ನೀಡುತ್ತೇವೆ. ಸ್ಪೆಷಲ್ ಕೆಟಗರಿಯಲ್ಲಿ 5% ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತದೆ. ರಕ್ಷಣಾ ಬಿಡಿಭಾಗಗಳನ್ನ ತಯಾರು ಮಾಡುವವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕಾಲೇಜು ಮಟ್ಟದಲ್ಲೇ ಯುವಕರಿಗೆ ತರಬೇತಿ ನೀಡಲಾಗುವುದು. ಇದಕ್ಕೆ 10 ಕಾಲೇಜುಗಳನ್ನ ಗುರ್ತಿಸಲಾಗಿದೆ ಎಂದರು.
ಕೊಳಗೇರಿ ಆವರಣದಲ್ಲಿ ಅಭಿವೃದ್ಧಿ ನಿಗಮ ನಿರ್ಮಾಣಕ್ಕಾಗಿ 90 ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಿದ್ದೇವೆ. ಶೇಷಾದ್ರಿಪುರಂನಲ್ಲಿರುವ ಕೊಳಗೇರಿ ನಿಗಮ ನಿರ್ಮಾಣಕ್ಕಾಗಿ ಆಗಿದೆ. ನಂಜುಂಡಪ್ಪ ವರದಿ ಹೊಸ ಪರಿಷ್ಕರಣೆ ಮಾಡಲಾಗಿದೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ ಎಂದರು.
100 ತಾಲೂಕುಗಳಲ್ಲಿ ಆರೋಗ್ಯ ಸೇವೆಗಾಗಿ 96 ತಾಲೂಕುಗಳಲ್ಲಿ ಶಿಕ್ಷಣ ಮಟ್ಟ ಸುಧಾರಣೆ, ನೂತನ 50 ತಾಲೂಕುಗಳಲ್ಲೂ ಗುಣಮಟ್ಟ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ. ಹಿಂದುಳಿದ ತಾಲೂಕು ಗುರ್ತಿಸಲು ಅನುಮತಿ ನೀಡಲಾಗುತ್ತದೆ ಎಂದರು.
BIGG NEWS : ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ : ಕಾಂಗ್ರೆಸ್ ಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಶ್ರೀಶೈಲದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ 85 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಆಂಧ್ರದ ಜೊತೆ ಸೇರಿ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಕನಕಗಿರಿಯಲ್ಲಿ ರಸ್ತೆ ಅಭಿವೃದ್ಧಿಗೆ 30 ಕೋಟಿ ಅನುದಾನ ನೀಡಲಾಗಿದೆ. ಹಲಬಾವಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯ ಜಲಜೀವನ್ ಮಿಷನ್ ನಡಿ 30 ಕೋಟಿ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯ ಜಲನೀತಿ-2022ಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯ ಬಾಲನ್ಯಾಯ ಕರಡು ಯೋಜನೆಗೆ ಸಮ್ಮತಿ ಸೂಚಿಸಲಾಗಿದೆ. ರಾಣೆಬೆನ್ನೂರಿನ ವಿವಿಧ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗಿದೆ. ಹಿರಿಯೂರು ತಾಲೂಕಿನ ಹೊರಭಾಗದಲ್ಲಿ ಚರಂಡಿ ನಿರ್ಮಾಣಕ್ಕಾಗಿ 100 ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
BIGG NEWS: ಆ.28ಕ್ಕೆ ಸೂಪರ್ಟೆಕ್ನ ಅವಳಿ ಟವರ್ ನೆಲಸಮ; ಅವಧಿ ವಿಸ್ತರಿಸಿದ ಸುಪ್ರೀಂಕೋರ್ಟ್
ರಾಯಭಾಗದ ಕೆಂಪಟ್ಟಿಯ ಗ್ರಾಮಗಳಿಗೆ ನೀರು ಒದಗಿಸಲು 47 ಕೋಟಿ ಅನುದಾನ ಬಿಡುಗಡೆ ಒಪ್ಪಿಗೆ ನೀಡಲಾಗಿದೆ. ಹರಪನಹಳ್ಳಿ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 270 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಚಡಚಣ, ಮನಗೂಳಿ, ಕೊಲ್ಹಾರ ಕುಡಿಯುವ ನೀರು ಯೋಜನೆಗಾಗಿ
ಸುಮಾರು 2077 ಕೋಟಿ ರೂ ಹಣ ಬಿಡುಗಡೆ ಮಾಡಲು ಅನುಮೋದಿಸಲಾಗಿದೆ ಎಂದು ತಿಳಿಸಿದರು.
ಒಬ್ಬ ವ್ಯಕ್ತಿಗೆ 1608 ಘನ ಮೀಟರ್ ನೀರು ಬೇಕು. ಪ್ರತಿವರ್ಷ ಇಷ್ಟು ನೀರು ಬೇಕು. ಇದರ ಬಗ್ಗೆ ವಾಟರ್ ಪಾಲಿಸಿ ತಂದಿದ್ದೇವೆ. ಪ್ರವಾಹದ ನೀರನ್ನ ಶೇಖರಿಸುವ ಬಗ್ಗೆ ನಿರ್ಧಾರವಾಗಿದೆ. ಇದಕ್ಕೆ ವಾಟರ್ ಪಾಲಿಸಿ ತಂದಿದ್ದೇವೆ ಎಂದರು.
ಭಕ್ತವತ್ಸಲಂ ಕಮಿಟಿ ರಿಪೋರ್ಟ್ ಸಲ್ಲಿಕೆಯಾಗಿದೆ. ಈ ವರದಿಯನ್ನ ಸಂಪುಟದಲ್ಲಿ ಒಪ್ಪಿಕೊಂಡಿದ್ದೇವೆ. ಸುಪ್ರೀಂಕೋರ್ಟ್ ಗೂ ಇದನ್ನೇ ಸಲ್ಲಿಸಿದ್ದೇವೆ. 2:3ರ ಅನುಪಾತದಲ್ಲಿ ಶೇ.50ರಷ್ಟು ಮೀರದಂತೆ ನೀಡಿಕೆ ಮಾಡಲಾಗುತ್ತಿದೆ. ಬಿಬಿಎಂಪಿಯಲ್ಲಿ ಒಬಿಸಿ ಮೀಸಲು ಇರಲಿಲ್ಲ. ಈಗ ನಾವು ಮೀಸಲಾತಿಯನ್ನ ತರ್ತಿದ್ದೇವೆ. ಮೇಯರ್ ಉಪಮೇಯರ್ ಗು ಇದು ಅನ್ವಯವಾಗಲಿದೆ. ಎಸ್ಸಿ, ಎಸ್ಟಿ ಸೇರಿ 50% ಮೀರುವಂತಿಲ್ಲ ಎಂದು ತಿಳಿಸಿದರು.
BIG BREAKING NEWS: ಕರ್ನಾಟಕದ ‘6 ಪೊಲೀಸ್ ಅಧಿಕಾರಿ’ಗಳಿಗೆ ‘ಕೇಂದ್ರ ಗೃಹ ಸಚಿವರ ಪದಕ’: ಇಲ್ಲಿದೆ ಪಟ್ಟಿ
ಸುಪ್ರೀಂ ತಕ್ಷಣ ಬಿಬಿಎಂಪಿ ಎಲೆಕ್ಷನ್ ಆಗಬೇಕು ಅಂದಿದೆ. ಅದಕ್ಕೆ ನಾವು ತಕ್ಷಣಕ್ಕೆ ಎಲ್ಲ ನಿವಾರಣೆ ಮಾಡೋಕೆ ಆಗಲ್ಲ. ಹಾಗಾಗಿ ವರದಿಯನ್ನ ಒಪ್ಪಿಕೊಂಡಿದ್ದೇವೆ. ಅದನ್ನೆ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದೇವೆ ಎಂದರು.
ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ. ಹೆಣ್ಣುಮಕ್ಕಳ ರಕ್ಷಣೆಗಾಗಿ ಸ್ಥಾಪನೆ ಮಾಡಲಾಗ್ತಿದೆ. ಇದಕ್ಕೆ 19.02 ಕೋಟಿ ಹಣ ಬಿಡುಗಡೆ ಮಾಡಲು ಅನುಮೋದಿಸಲಾಗಿದೆ ಎಂದು ಹೇಳಿದರು.
ಜನಸೇವಾ ಟ್ರಸ್ಟ್ ಗೆ 33 ಎಕರೆ ಜಮೀನು ಮಂಜೂರು ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಬೆಂಗಳೂರು ದಕ್ಷಿಣದ ಕುರುಬರಹಳ್ಳಿಯಲ್ಲಿ ನೀಡಿಕೆ. ಆಯುರ್ವೇದ ಚಿಕಿತ್ಸಾ ಪದ್ಧತಿಗಾಗಿ ಭೂಮಿ ನೀಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಉತ್ತರ ಕರ್ನಾಟಕ ಸಂಘದ ಸೇವಾಕೇಂದ್ರಕ್ಕೆ 3.24 ಎಕರೆ ಭೂಮಿ ನೀಡಲು ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದರು.
ಆಂಜನಾದ್ರಿ ಬೆಟ್ಟದಲ್ಲಿ ಅಭಿವೃದ್ಧಿಗೆ 100 ಕೋಟಿ ಹಣ ನೀಡಲಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ. ಊಟದ ಹಾಲ್, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಕೆಎಸ್ ಆರ್ ಟಿಸಿಗೆ ಹೊಸ ಬಸ್ ಖರೀದಿ ಅನುಮತಿಸಲಾಗಿದೆ. 199 ಕೋಟಿ ವೆಚ್ಚದಲ್ಲಿ 650 ಬಸ್ ಖರೀದಿಗೆ ಅನುಮತಿ ನೀಡಲಾಗಿದೆ. ಬಿಎಂಟಿಸಿಗೆ ಬಿಎಸ್-6 ಹೊಸ ಬಸ್ ಖರೀದಿ ಮಾಡಲಾಗುತ್ತಿದೆ. 840 ಬಸ್ ಖರೀದಿಗೆ 336 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.
ಇದೇ ವೇಳೆ ಶಾಸಕರ ಮೇಲಿನ ಕೇಸ್ ವಾಪಸ್ ಪಡೆಯುವ ವಿಚಾರವಾಗಿ ಮಾತನಾಡಿದ ಅವರು, ನಾನೇ ಉಪಸಮಿತಿಯ ಅಧ್ಯಕ್ಷ, ಕೋರ್ಟ್ ಅನುಮತಿ ಇಲ್ಲದೆ ಯಾವುದೇ ಕೇಸ್ ಹಿಂಪಡೆಯಲ್ಲ. ಅತ್ಯಾಚಾರ, ಕೊಲೆ, ಮರ್ಡರ್ ಯತ್ನದ ಕೇಸ್ ವಾಪಸ್ ಇಲ್ಲ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ವಾಪಸ್ ಇಲ್ಲ. ಪೊಲೀಸ್ ಇಲಾಖೆ ವಾಪಸ್ ಪಡೆಯಬೇಡಿ ಅನ್ನುತ್ತೆ. ವಾಪಸ್ ಪಡೆಯಿರಿ ಅಂತ ಎಲ್ಲೂ ಹೇಳಲ್ಲ. ಸರ್ಕಾರವೇ ಮೀರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಇನ್ನೂ ಸಂಘಟನೆಗಳ ಕೇಸ್ ವಾಪಸ್ ವಿಚಾರವಾಗಿ ಮಾತನಾಡಿದ ಅವರು, ರೈತರು, ಕರವೆ, ಸಂಘ ಸಂಸ್ಥೆಗಳು ಹೋರಾಟ ಮಾಡ್ತಾರೆ. ಪ್ರತಿಭಟನೆ ಹಕ್ಕನ್ನ ಹತ್ತಿಕ್ಕೋ ಕೆಲಸ ಮಾಡೋಕಾಗಲ್ಲ. ನಾವು 30 ಕೇಸ್ ಡಿಸ್ಪೋಸ್ ಮಾಡಿದ್ದೇವೆ. ನಾವು ವಿತ್ ಡ್ರಾ ಮಾಡಿ ಶಿಫಾರಸು ಮಾಡ್ತೇವೆ. ಆದರೆ ಕೋರ್ಟ್ ಅದನ್ನ ಒಪ್ಪಿಕೊಳ್ಳಬೇಕು. ಹಾಗಾದರೆ ಮಾತ್ರ ಅದು ವಾಪಸ್ ಆಗಲಿದೆ ಎಂದು ತಿಳಿಸಿದರು.