ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ( Costal Karnataka ) ಅಧಿಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.
ಇಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವೆಡೆ ಹಾಗೂ ಕರಾವಳಿ ಭಾಗದಲ್ಲಿ ಪುನ: ಹೆಚ್ಚು ಮಳೆಯಾಗುತ್ತಿದೆ. ಮಳೆ ಅನಾಹುತದಿಂದ ಸಾವು ನೋವುಗಳಾಗಿದ್ದು, ಈ ಬಗ್ಗೆ ಇಂದು ಸಭೆ ನಡೆಸಲಾಗುವುದು. ಹೆಚ್ಚು ಮಳೆಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಕಿಪಾಕ್ಸ್ ಸೋಂಕು ನಿಯಂತ್ರಣದ ಬಗ್ಗೆಯೂ ಸಭೆ ನಡೆಸಲಾಗುವುದು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಿಐಐಎ ನ ಕಲ್ಚರಲ್ ವಿಂಗ್ ನ ಸಭೆಗಾಗಿ ಆಗಸ್ಟ್ 4 ರಂದು ಬೆಂಗಳೂರಿಗೆ ಆಗಮಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಬಳ್ಳಾರಿಯಲ್ಲಿ ವೇದಾವತಿ ನದಿಯಲ್ಲಿ ಸಿಲುಕಿ 25 ಕಾರ್ಮಿಕರ ಪರದಾಟ: 2 ಗಂಟೆಯೇ ಕಳೆದರೂ ಬಾರದ ರಕ್ಷಣಾ ಸಿಬ್ಬಂದಿ