ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಜನತೆ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು ಈಗ ಎಲ್ಲೆಲ್ಲೂ ಮಳೆಯ ನೀರು ನಿಂತು ಜಲದಿಗ್ಭಂದನಕ್ಕೆ ಒಳಗಾಗಿದೆ. ಈ ನಡುವೆಯೂ ರಾಜ್ಯಾಧ್ಯಂತ ಮತ್ತೆ ನಾಲ್ಕು ದಿನ ಭಾರೀ ಮಳೆಯಾಗಲಿದೆ ( Karnataka Rain ) ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮೂಲಕ ಮಳೆಯಿಂದಾಗಿ ತತ್ತರಿಸಿದಂತ ಜನತೆಗೆ ಮತ್ತೆ ಶಾಕ್ ನೀಡಿದಂತೆ ಆಗಿದೆ.
BREAKING : ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್: 5ನೇ ಆರೋಪಿ ಗಂಗಾಧರಯ್ಯ ಪೊಲೀಸರಿಗೆ ಶರಣು
ಬಂಗಾಳ ಕೊಲ್ಲಿಯ ಮೇಲ್ಮೆ ಸುಳಿಗಾಳಿಯ ಪರಿಣಾಮದಿಂದಾಗಿ ರಾಜ್ಯಾಧ್ಯಂತ ಭಾರೀ ಮಳೆಯಾಗುತ್ತಿದೆ. ಈ ಮಳೆಯು ಇನ್ನೂ ಐದು ದಿನಗಳ ಕಾಲ ಮುಂದುವರೆಯಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೂ ದಕ್ಷಿಣ ಒಳನಾಡಿನಲ್ಲಿ ಇಂದು ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಆರೇಂಜ್ ಅಲರ್ಟ್ ( Orange Alert ) ಘೋಷಣೆ ಮಾಡಲಾಗಿದೆ. ಇದಲ್ಲದೇ ದಕ್ಷಿಣ ಒಳನಾಡಿನಲ್ಲಿ 3 ಮತ್ತು ನಾಲ್ಕನೇ ದಿನವೂ ಭಾರೀ ಮಳೆಯಾಗೋ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
BIG NEWS: ಬೆಂಗಳೂರಿನಲ್ಲಿ ‘ಬೆಸ್ಕಾಂ ನಿರ್ಲಕ್ಷ್ಯ’ದಿಂದ ಯುವತಿ ಮೃತಪಟ್ಟಿಲ್ಲ – BESCOM ಸ್ಪಷ್ಟನೆ
ಅಂದಹಾಗೇ ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಐಟಿ-ಬಿಟಿ ಉದ್ಯೋಗಿಗಳು ಕಚೇರಿಗೆ ತೆರಳೋದಕ್ಕೆ ಬೋಟ್ ಹಾಗೂ ಟ್ರ್ಯಾಕ್ಟರ್ ಗಳನ್ನು ಅವಲಂಬಿತರಾಗಿದ್ದಾರೆ. ಅನೇಕ ಅಪಾರ್ಮೆಂಟ್ ಗಳು ನೀರಿನಿಂದ ಆವೃತಗೊಂಡ ಪರಿಣಾಮ, ವಾಹನಗಳು ಮುಳುಗಡೆಗೊಂಡಿವೆ.