ಬೆಂಗಳೂರು: ರಾಜ್ಯಾಧ್ಯಂತ ಭಾರೀ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉಂಟಾಗಿದೆ. ಹಲವು ಜಿಲ್ಲೆಗಳ ಜನರು ನೆರೆಯಿಂದಾಗಿ ಸಂತ್ರಸ್ತರಾಗಿದ್ದಾರೆ. ಬೆಳೆ, ಮನೆ ನಾಶಗೊಂಡಿದೆ. ಈ ನೆರೆ ಪರಿಸ್ಥಿತಿಯನ್ನು ವೀಕ್ಷಿಸೋದಕ್ಕಾಗಿ ನಾಳೆ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ. ಈ ತಂಡದೊಂದಿಗೆ ಚರ್ಚಿಸೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ನೆರೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದದ ಮೂಲಕ ಮಾಹಿತಿ ಪಡೆದರು. ಈ ಬಳಿಕ ಮಾತನಾಡಿದಂತ ಅವರು, ಮೂಲ ಸೌಕರ್ಯಗಳಿಗೆ 600 ಕೋಟಿ ಹಣ ರಿಲೀಸ್ ಮಾಡೋದಕ್ಕೆ ನಿರ್ಧರಿಸಲಾಗಿದೆ. ಬೆಂಗಳೂರಿನ ಮೂಲ ಸೌಕರ್ಯಗಳಿಗೆ 300 ಕೋಟಿ ರೂಪಾಯಿ ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದರು.
ಈ KSRTC ಚಾಲಕ, ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ: ನಿಗಮದಿಂದಲೂ ಅಭಿನಂದನೆ
ರಾಜ್ಯಾಧ್ಯಂತ ನೆರೆಯಿಂದಾಗಿ 32 ಸಾವಿರ ಎಕರೆ ಕೃಷಿ ಭೂಮಿ ಹಾನಿಯಾಗಿದೆ. 1,374 ತೋಟಗಾರಿಕೆ ಪ್ರದೇಶ ಹಾನಿಯಾಗಿದೆ. 5092 ಜನರು ಆಶ್ರಯ ಶಿಬಿರದಲ್ಲಿದ್ದಾರೆ. ರಾಜ್ಯದಲ್ಲಿ 255 ಕಿಲೋಮೀಟರ್ ರಸ್ತೆ ಹಾಳಾಗಿದೆ. ಮಳೆಯಿಂದ 430 ಮನೆಗಳು ಸಂಪೂರ್ಣ ಹಾನಿಗೊಂಡಿವೆ. ಕಡಿಮೆ ಹಾನೀಯಾದ ಮನೆಗಳಿಗೆ 50 ಸಾವಿರ ಪರಿಹಾರ ನೀಡಲಾಗುತ್ತದೆ. ಮನೆ ಹೆಚ್ಚು ಹಾನಿಯಾಗಿದ್ರೇ 90 ಸಾವಿರ ನೀಡಲಾಗುತ್ತದೆ ಎಂದರು.
ಕಾಂಗ್ರೆಸ್ಗೆ ಮತ್ತೊಂದು ಬಿಗ್ ಶಾಕ್: ಆಮ್ ಆದ್ಮಿ ಪಾರ್ಟಿಗೆ ಬ್ರಿಜೇಶ್ ಕಾಳಪ್ಪ ಸೇರ್ಪಡೆ
ನಾಳೆ ರಾತ್ರಿ ಕೇಂದ್ರ ಅಧ್ಯಯನ ತಂಡವು ಬೆಂಗಳೂರಿಗೆ ನೆರೆ ಹಾನಿಯ ಕುರಿತಂತೆ ಮಾಹಿತಿ ಪಡೆಯಲು ಬೆಂಗಳೂರಿಗೆ ಆಗಮಿಸಲಿದೆ. ರಾಜ್ಯದಲ್ಲಿನ ನೆರೆ ವೀಕ್ಷಣೆಯ ಬಗ್ಗೆ ಮಾಹಿತಿಯನ್ನು ಪಡೆಯಲಿದೆ. ತಾವು ರಾಜ್ಯಾಧ್ಯಂತ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದೇವೆ ಎಂಬುದಾಗಿ ತಿಳಿಸಿದು.
ರಾತ್ರಿ ತಡವಾಗಿ ‘ಊಟ’ ಮಾಡೋ ಅಭ್ಯಾಸ ಇದ್ಯಾ? ಅಯ್ಯೋ, ಹಾಗಿದ್ರೆ ನೀವು ‘ಅಪಾಯ’ದಲ್ಲಿದ್ದೀರಿ.!