ಬೆಂಗಳೂರು: ಇಂದು ಸಂಜೆಯಿಂದ ಬೆಂಗಳೂರಿನ ( Bengaluru Rain ) ಹಲವೆಡೆ ಭಾರೀ ಮಳೆಯಾಗುತ್ತಿದೆ ( Heavy rain ). ಎಡಬಿಡದೇ ಸುರಿಯುತ್ತಿರುವಂತ ವರುಣನ ಆರ್ಭಟಕ್ಕೆ ಕೆಲ ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಈ ಪರಿಣಾಮ ಎರಡು ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಇನ್ನೂ ಮಳೆಯ ಎಫೆಕ್ಟ್ ಪರಿಣಾಮ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (Bangalore Water Supply and Sewerage Board’s -BWSSB) ಇಂದು ಮತ್ತು ನಾಳೆ ನಗರದ ಹಲವಾರು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ( water supply ) ವ್ಯತ್ಯಯವಾಗಲಿದೆ ಎಂಬುದಾಗಿ ಸೂಚನೆ ನೀಡಿದೆ.
ಮಳೆಯಿಂದಾಗಿ ಪದೇ ಪದೇ ಉಂಟಾಗುತ್ತಿರುವಂತ ಅಡ್ಡಿಗೆ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸರಿಯಾಗಿ ಆಗಿಲ್ಲ. ಪ್ಲಾನಿಂಗ್ ಅಂತ ಎಲ್ಲಿಯೂ ಲೇಔಟ್ ನಿರ್ಮಾಣ ಮಾಡುತ್ತಿಲ್ಲ. ಅವೈಜ್ಞಾನಿಕತೆಯ ಕಾರಣ ಹೀಗೆ ಸಮಸ್ಯೆ ಉಂಟಾಗುತ್ತಿದೆ ಎಂಬುದಾಗಿ ನಗರದ ಕಂಪನಿಗಳು ದೂರುತ್ತಿವೆ.
ಈ KSRTC ಚಾಲಕ, ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ: ನಿಗಮದಿಂದಲೂ ಅಭಿನಂದನೆ
ಮತ್ತೊಂದೆಡೆ ವಿಮಾನ ನಿಲ್ದಾಣಕ್ಕೆ ತೆರಳೋರು ಟ್ರ್ಯಾಕ್ಟರ್ ನಲ್ಲಿ ಹೋಗ್ತಾ ಇರೋದು, ವಾಹನ ಸವಾರರು ನಡು ನೀರಿನಲ್ಲಿ ಮುಳುಗಿ ಹೈರಾಣಾಗಿರುವಂತ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವೀಡಿಯೋ ಕಂಡಂತ ಜನರು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
#NammaBengaluru #RainEffect ನೋಡಿ ಸಿಲಿಕಾನ್ ಸಿಟಿ ಬೆಂಗಳೂರಿನ ಮಳೆಯಿಂದ ಉಂಟಾದ ಜಲಪ್ರಳಯ.. ನೀರಲ್ಲಿ ಮುಳುಗಿದ ವಾಹನ ಸವಾರರ ಪರಿಸ್ಥಿತಿ.. pic.twitter.com/pGe3D8i43R
— Vasantha B Eshwaragere (@vasanthabeshwar) September 5, 2022