ದೆಹಲಿ: ಇತ್ತೀಚೆಗೆ ಬಿಡುಗಡೆಯಾದ CBSE 10 ನೇ ತರಗತಿಯ ಬೋರ್ಡ್ ಫಲಿತಾಂಶದಲ್ಲಿ 99.4% ಗಳಿಸಿದ ಪಾಟ್ನಾದ ಹುಡುಗಿಯ ಕಥೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಬೆಳಕಿಗೆ ತಂದಿದ್ದಾರೆ.
ತಾಯಿಯ ಮರಣದ ನಂತರ ಶ್ರೀಜಾಳನ್ನು ಆಕೆಯ ತಂದೆ ತೊರೆದಿದ್ದರು. ನಂತರ ಬಾಲಕಿಯನ್ನು ತನ್ನ ಅಜ್ಜಿಯ ಮನೆಯಲ್ಲೇ ಇದ್ದಳು
ವರುಣ್ ಗಾಂಧಿ ಈ ಬಾಲಕಿಯ ಮತ್ತು ಆಕೆಯ ಅಜ್ಜಿಯ ಸಂದರ್ಶನದ ವೀಡಿಯೊವೊಂದನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈಗ ವೈರಲ್ ಆಗಿರುವ ಕ್ಲಿಪ್ನಲ್ಲಿ ಅಜ್ಜಿ, “ಫಲಿತಾಂಶಗಳಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ” ಎಂದು ಹೇಳಿದ್ದಾರೆ.
ತನ್ನ ಅಳಿಯನ ಬಗ್ಗೆ ಕೇಳಿದಾಗ, “ಅವನು ನನ್ನ ಮಗಳ ಸಾವಿನ ನಂತರ ಮೊಮ್ಮಗಳನ್ನು ತೊರೆದನು. ಅಂದಿನಿಂದ ನಾವು ಅವನನ್ನು ನೋಡಿಲ್ಲ. ಅವನು ಈಗ ಬೇರೆ ಮದುವೆಯಾಗಿದ್ದಾನೆ. ನನ್ನ ಮೊಮ್ಮಗಳ ಪರೀಕ್ಷೆಯ ಫಲಿತಾಂಶ ನೋಡಿದ ನಂತ್ರ ನನಗೆ ಬಹಳ ಸಂತೋಷವಾಗಿದೆ” ಎಂದಿದ್ದಾರೆ ಅಜ್ಜಿ.
त्याग और समर्पण की अद्भुत दास्ताँ!
माँ का साया हटने पर पिता ने जिस बेटी का साथ छोड़ दिया उसने नाना-नानी के घर परिश्रम की पराकाष्ठा कर इतिहास रच दिया।
बिटिया का 10वी में 99.4% अंक लाना बताता है कि प्रतिभा अवसरों की मोहताज नहीं है।
मैं आपके किसी भी काम आ सकूँ, मेरा सौभाग्य होगा। pic.twitter.com/ufc3Gp4At9
— Varun Gandhi (@varungandhi80) July 24, 2022
ಜನರು ಸೋಷಿಯಲ್ ಮೀಡಿಯಾದಲ್ಲಿ, ಬಾಲಕಿ ಮತ್ತು ಅವಳ ಅಜ್ಜಿಯನ್ನು ಅಭಿನಂದಿಸಿದ್ದಾರೆ.
BREAKING NEWS: ಶಿವಮೊಗ್ಗದ ಪ್ರತಿಷ್ಟಿತ ಕಾಲೇಜುಗಳಲ್ಲಿ ಗಾಂಜಾ ಘಾಟು; ಅಮಲಿನಲ್ಲಿ ಬಿದ್ದು ಹೊರಳಾಡಿದ ವಿದ್ಯಾರ್ಥಿಗಳು