ಅಹಮದಾಬಾದ್ : ನಾಳೆ ಗುಜರಾತ್ ವಿಧಾನಸಬಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆ ಪ್ರಧಾನಿ ಮೋದಿಯವರು ಇಂದು ಅಹಮದಾಬಾದ್ ನಲ್ಲಿರುವ ತಾಯಿಯನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.
ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿಯವರು, ಇಲ್ಲಿಂದ ನೇರವಾಗಿ ಗಾಂಧಿನಗರದಲ್ಲಿರುವ ತಮ್ಮ ನಿವಾಸದಲ್ಲಿ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿ ಮಾಡಿದರು.
ಗುಜರಾತ್ ನಲ್ಲಿ ನಾಳೆ ಅಂದರೆ ಸೋಮವಾರ (ಡಿಸೆಂಬರ್ 5) ಎರಡನೇ ಹಂತದ ಮತದಾನ ನಡೆಯಲಿದೆ. ನಾಳೆ ಅಹಮದಾಬಾದ್ನಲ್ಲಿ ಪ್ರಧಾನಿ ಮತದಾನ ಮಾಡಲಿದ್ದಾರೆ.
ಗುಜರಾತ್ನಲ್ಲಿ ಹಲವು ರ್ಯಾಲಿ ನಡೆಸಿದ ಮೋದಿ
ರಾಜ್ಯದಲ್ಲಿ 27 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಪುನರಾಗಮನಕ್ಕೆ ಪ್ರಧಾನಿ ಮೋದಿ ಸಂಪೂರ್ಣ ಒತ್ತು ನೀಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಪ್ರಧಾನಿ ಮೋದಿ ಹಲವು ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ಮಾಡಿದ್ದಾರೆ. ಈ ವೇಳೆ ಪ್ರತಿಪಕ್ಷಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದರು.
ಡಿ. 8 ಕ್ಕೆ ಚುನಾವಣಾ ಫಲಿತಾಂಶ
ಡಿಸೆಂಬರ್ 1 ರಂದು ಗುಜರಾತ್ನಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಈ ಅವಧಿಯಲ್ಲಿ ಶೇ.60ರಷ್ಟು ಮತದಾನವಾಗಿದೆ. ಈ ಬಾರಿ ಬಿಜೆಪಿಗೆ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ಸವಾಲು ಎದುರಾಗಿದೆ. ಡಿಸೆಂಬರ್ 8 ರಂದು ಹಿಮಾಚಲ ಚುನಾವಣೆ ಜೊತೆಗೆ ಗುಜರಾತ್ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
BIGG NEWS : ನಾಳೆ ಕನ್ನಡದ ಹಿರಿಯ ನಟ ದ್ವಾರಕೀಶ್ ಗೆ ‘ಗೌರವ ಡಾಕ್ಟರೇಟ್’ ಪ್ರದಾನ