Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಮೇ.31ರವರೆಗೆ ಆಸ್ತಿ ತೆರಿಗೆ ಶೇ.5 ರಿಯಾಯಿತಿ ಅವಧಿ ವಿಸ್ತರಣೆ

01/05/2026 5:51 AM

ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಇನ್ನು ‘ಶೈಕ್ಷಣಿಕ ಸಂಯೋಜಕರು’: ಸಚಿವ ಎಂ.ಸಿ. ಸುಧಾಕರ್ ಘೋಷಣೆ

01/05/2026 5:48 AM

ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: 8,600 ಮೌಲ್ಯದ ಪುಸ್ತಕ, ಲೇಖನದ ಕಿಟ್ ವಿತರಣೆ

01/05/2026 5:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಇನ್ನು ‘ಶೈಕ್ಷಣಿಕ ಸಂಯೋಜಕರು’: ಸಚಿವ ಎಂ.ಸಿ. ಸುಧಾಕರ್ ಘೋಷಣೆ
KARNATAKA

ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಇನ್ನು ‘ಶೈಕ್ಷಣಿಕ ಸಂಯೋಜಕರು’: ಸಚಿವ ಎಂ.ಸಿ. ಸುಧಾಕರ್ ಘೋಷಣೆ

By kannadanewsnow5701/05/2026 5:48 AM

ಬೆಂಗಳೂರು: ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಯುಜಿಸಿ (UGC) ಅರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂತಹ 3,853 ಉಪನ್ಯಾಸಕರನ್ನು ಮಾನವೀಯ ನೆಲೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ‘ಶೈಕ್ಷಣಿಕ ಸಂಯೋಜಕರು’ ಆಗಿ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಯುಜಿಸಿ ಅರ್ಹತೆ ಇಲ್ಲದಿದ್ದರೂ, ಕನಿಷ್ಠ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ 3,853 ಅತಿಥಿ ಉಪನ್ಯಾಸಕರಿಗೆ ಈ ಆದೇಶ ಅನ್ವಯವಾಗಲಿದೆ.ಇವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಶೈಕ್ಷಣಿಕ ಸಂಯೋಜಕರನ್ನಾಗಿ ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಕಾನೂನು ಪ್ರಕಾರ ಯುಜಿಸಿ ಅರ್ಹತೆ ಇಲ್ಲದವರನ್ನು ಅತಿಥಿ ಉಪನ್ಯಾಸಕ ಸೇವೆಯಿಂದ ತೆಗೆಯಬೇಕಾಗುತ್ತದೆ. ಆದರೆ, ಅವರ ಸುದೀರ್ಘ ಸೇವೆಯನ್ನು ಪರಿಗಣಿಸಿ ಮಾನವೀಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಇವರನ್ನು ಶೈಕ್ಷಣಿಕ ಸಂಯೋಜಕರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ.

ರಾಜ್ಯದಲ್ಲಿ ಒಟ್ಟು 10,335 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ 5,267 ಮಂದಿ ಮಾತ್ರ ಯುಜಿಸಿ ನಿಗದಿತ ಅರ್ಹತೆ ಹೊಂದಿದ್ದಾರೆ. ಉಳಿದ 5,068 ಮಂದಿಯಲ್ಲಿ 1,215 ಜನರನ್ನು ಕೌನ್ಸೆಲಿಂಗ್ ಮೂಲಕ ಅತಿಥಿ ಉಪನ್ಯಾಸಕರಾಗಿ ಮುಂದುವರಿಸಲಾಗಿದ್ದು, ಉಳಿದ 3,853 ಜನರನ್ನು ಶೈಕ್ಷಣಿಕ ಸಂಯೋಜಕರನ್ನಾಗಿ ಬದಲಾಯಿಸಲಾಗಿದೆ. ಶೈಕ್ಷಣಿಕ ಸಂಯೋಜಕರ ನೇಮಕಾತಿಗಾಗಿ ವಾರ್ಷಿಕವಾಗಿ ₹98.08 ಕೋಟಿ ಅನುದಾನದ ಅಗತ್ಯವಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Guest lecturers in state degree colleges to be 'academic coordinators' from now on: Minister M.C. Sudhakar announces
Share. Facebook Twitter LinkedIn WhatsApp Email

Related Posts

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಮೇ.31ರವರೆಗೆ ಆಸ್ತಿ ತೆರಿಗೆ ಶೇ.5 ರಿಯಾಯಿತಿ ಅವಧಿ ವಿಸ್ತರಣೆ

01/05/2026 5:51 AM1 Min Read

ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: 8,600 ಮೌಲ್ಯದ ಪುಸ್ತಕ, ಲೇಖನದ ಕಿಟ್ ವಿತರಣೆ

01/05/2026 5:45 AM1 Min Read

BIG NEWS : ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಬಂಪರ್ ಕೊಡುಗೆ: ಸಚಿವ ಸಂಪುಟದ ಅನುಮೋದನೆ

01/05/2026 5:36 AM1 Min Read
Recent News

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಮೇ.31ರವರೆಗೆ ಆಸ್ತಿ ತೆರಿಗೆ ಶೇ.5 ರಿಯಾಯಿತಿ ಅವಧಿ ವಿಸ್ತರಣೆ

01/05/2026 5:51 AM

ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಇನ್ನು ‘ಶೈಕ್ಷಣಿಕ ಸಂಯೋಜಕರು’: ಸಚಿವ ಎಂ.ಸಿ. ಸುಧಾಕರ್ ಘೋಷಣೆ

01/05/2026 5:48 AM

ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: 8,600 ಮೌಲ್ಯದ ಪುಸ್ತಕ, ಲೇಖನದ ಕಿಟ್ ವಿತರಣೆ

01/05/2026 5:45 AM

BIG NEWS : ಅತ್ಯಾಚಾರ ಪ್ರಕರಣಗಳಲ್ಲಿ ಗರ್ಭಪಾತಕ್ಕೆ 20 ವಾರಗಳ ಮಿತಿ ಸರಿಯಲ್ಲ: ಸುಪ್ರೀಂ ಕೋರ್ಟ್

01/05/2026 5:40 AM
State News
KARNATAKA

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಮೇ.31ರವರೆಗೆ ಆಸ್ತಿ ತೆರಿಗೆ ಶೇ.5 ರಿಯಾಯಿತಿ ಅವಧಿ ವಿಸ್ತರಣೆ

By kannadanewsnow0901/05/2026 5:51 AM KARNATAKA 1 Min Read

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿರುವ ಮತ್ತು ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಆಸ್ತಿ ತೆರಿಗೆದಾರರಿಗೆ ರಾಜ್ಯ…

ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಇನ್ನು ‘ಶೈಕ್ಷಣಿಕ ಸಂಯೋಜಕರು’: ಸಚಿವ ಎಂ.ಸಿ. ಸುಧಾಕರ್ ಘೋಷಣೆ

01/05/2026 5:48 AM

ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: 8,600 ಮೌಲ್ಯದ ಪುಸ್ತಕ, ಲೇಖನದ ಕಿಟ್ ವಿತರಣೆ

01/05/2026 5:45 AM

BIG NEWS : ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಬಂಪರ್ ಕೊಡುಗೆ: ಸಚಿವ ಸಂಪುಟದ ಅನುಮೋದನೆ

01/05/2026 5:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.