ರಾಯಚೂರು : ತಾಯಿಗೆ ಬಾಯಿಗೆ ಬಂದಂತೆ ನಿಂದನೆ ಮಾಡಿದ ಅಣ್ಣನನ್ನು ತಮ್ಮನೇ ಕೊಲೆ ಮಾಡಿರುವ ದುರ್ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಸವಸಾಗರ ಕ್ರಾಸ್ ಬಳಿ ನಡೆದಿದೆ. ಅಣ್ಣ ಬಸವರಾಜ(37) ಕೊಲೆಯಾದ ವ್ಯಕ್ತಿ. ತಮ್ಮ ಶ್ರೀಧರ ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಈ ಒಂದು ಕೊಲೆ ನಡೆದಿದ್ದು, ಶ್ರೀಧರ್ ಎಂಬುವರು ತನ್ನ ಅಣ್ಣ ಬಸವರಾಜ ಅವರನ್ನು ಕೊಲೆ ಮಾಡಿದ್ದಾರೆ. ಬಸವರಾಜ ಅವರು ಕುಡಿದು ಬಂದು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಶ್ರೀಧರ್ ಅವರು ಕೋಪಿತರಾಗಿ ಅಣ್ಣ ನಿದ್ರೆಗೆ ಹೋಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೇ ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.








