Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಭಾರತ ಎಂದಿಗೂ ಶಾಂತಿಯ ಪರ’: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗಿನ ಭೇಟಿಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ALERT : ಕೋತಿಗಳ ಹಾವಳಿಗೆ ಮತ್ತೊಂದು ಬಲಿ: ಟೆರೇಸ್ ಮೇಲಿದ್ದ ಇಟ್ಟಿಗೆ ಬಿದ್ದು ಮಹಿಳೆ ಸಾವು.!

GOOD NEWS : `ಭಾರತ್ ರೋಜ್‌ ಗಾರ್’ ಯೋಜನೆಯಡಿ ಕೆಲಸಕ್ಕೆ ಸೇರಿದವರಿಗೆ ಗುಡ್ ನ್ಯೂಸ್ : ನಾಳೆಯೇ ಬ್ಯಾಂಕ್ ಖಾತೆಗೆ 15,000 ರೂ.ಜಮಾ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : `ಭಾರತ್ ರೋಜ್‌ ಗಾರ್’ ಯೋಜನೆಯಡಿ ಕೆಲಸಕ್ಕೆ ಸೇರಿದವರಿಗೆ ಗುಡ್ ನ್ಯೂಸ್ : ನಾಳೆಯೇ ಬ್ಯಾಂಕ್ ಖಾತೆಗೆ 15,000 ರೂ.ಜಮಾ.!
INDIA

GOOD NEWS : `ಭಾರತ್ ರೋಜ್‌ ಗಾರ್’ ಯೋಜನೆಯಡಿ ಕೆಲಸಕ್ಕೆ ಸೇರಿದವರಿಗೆ ಗುಡ್ ನ್ಯೂಸ್ : ನಾಳೆಯೇ ಬ್ಯಾಂಕ್ ಖಾತೆಗೆ 15,000 ರೂ.ಜಮಾ.!

By kannadanewsnow57

ನವದೆಹಲಿ : ಹೊಸದಾಗಿ ಉದ್ಯೋಗಕ್ಕೆ ಸೇರಿದ ಯುವಜನತೆಗೆ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಮತ್ತು ಸಂತಸದ ಸುದ್ದಿಯೊಂದನ್ನು ನೀಡಿದೆ. ಹೊಸ ಉದ್ಯೋಗಿಗಳಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆ (PM-VBRY) ಅಡಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜೂನ್ 19) ಮೊದಲ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕಂಪ್ಯೂಟರ್ ಬಟನ್ ಒತ್ತುವ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ (PMO) ಅಧಿಕೃತವಾಗಿ ಪ್ರಕಟಿಸಿದೆ.

ರೂ. 15,000 ಆರ್ಥಿಕ ನೆರವು

ಶಿಕ್ಷಣ ಮುಗಿಸಿ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿ, ಪಿಎಫ್ (PF) ಖಾತೆ ಹೊಂದಿರುವ ಉದ್ಯೋಗಿಗಳಿಗೆ ಈ ಯೋಜನೆಯಡಿ ಒಟ್ಟು ರೂ. 15,000 ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಈ ಹಣವನ್ನು ಉದ್ಯೋಗಿಗಳಿಗೆ ಎರಡು ಕಂತುಗಳಲ್ಲಿ ವಿತರಿಸಲಾಗುತ್ತಿದ್ದು, ನಾಳೆ ಮೊದಲ ಕಂತಿನ ರೂಪದಲ್ಲಿ ಒಟ್ಟು ರೂ. 2,400 ಕೋಟಿ ನಿಧಿಯನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.

ಕೇವಲ ಉದ್ಯೋಗಿಗಳಿಗೆ ಮಾತ್ರವಲ್ಲದೆ, ಹೊಸದಾಗಿ ಉದ್ಯೋಗಾವಕಾಶ ಸೃಷ್ಟಿಸಿದ ಕಂಪನಿಗಳಿಗೂ ಸಹ ಪ್ರತಿ ಉದ್ಯೋಗಿಯ ಪರವಾಗಿ ರೂ. 3,000 ಪ್ರೋತ್ಸಾಹ ಧನವನ್ನು ಕೇಂದ್ರ ಸರ್ಕಾರ ನೀಡಲಿದೆ.

ಯೋಜನೆ ಉದ್ದೇಶ ಮತ್ತು ಬಜೆಟ್

ದೇಶದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು ಮತ್ತು ಉದ್ಯೋಗ ನೀಡುವ ಕಂಪನಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಗಸ್ಟ್ 1, 2025 ರಂದು ಈ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯು ಜುಲೈ 31, 2027 ರವರೆಗೆ ಚಾಲ್ತಿಯಲ್ಲಿರಲಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ ಬರೋಬ್ಬರಿ ರೂ. 99,446 ಕೋಟಿಯನ್ನು ಮೀಸಲಿಡಲಾಗಿದೆ. ಈಗಾಗಲೇ ಈ ಯೋಜನೆಯ ಮೂಲಕ ದೇಶದಲ್ಲಿ ಸುಮಾರು 15 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸರ್ಕಾರ ತಿಳಿಸಿದೆ.

ಪ್ರಮುಖ ಮಾಹಿತಿ: ಉದ್ಯೋಗ ಸೇರಿದ ಮೊದಲ ವರ್ಷದಲ್ಲಿ ನೌಕರನಿಗೆ ಎರಡು ಕಂತುಗಳಲ್ಲಿ ರೂ. 15,000 ಸಿಕ್ಕರೆ, ಉದ್ಯೋಗದಾತರಿಗೆ (ಕಂಪನಿಗಳಿಗೆ) ಎರಡು ವರ್ಷಗಳ ಅವಧಿಯಲ್ಲಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲಾಗುತ್ತದೆ.

ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ!

ಈ PM-VBRY ಯೋಜನೆಯ ಲಾಭ ಪಡೆಯಲು ಉದ್ಯೋಗಿಗಳು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

ನೀವು ಹೊಸದಾಗಿ ಉದ್ಯೋಗಕ್ಕೆ ಸೇರಿದಾಗ ಕಂಪನಿಯು ನಿಮಗಾಗಿ ಇಪಿಎಫ್‌ಒ (EPFO) ಅಡಿಯಲ್ಲಿ ಪಿಎಫ್ ಖಾತೆಯನ್ನು ತೆರೆಯುತ್ತದೆ.

ಆ ಪಿಎಫ್ ಖಾತೆಯನ್ನು ನೀವು ಆಕ್ಟಿವೇಟ್ ಮಾಡಿದ ತಕ್ಷಣ, ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ನಿಮ್ಮನ್ನು ಈ ಯೋಜನೆಗೆ ಅರ್ಹರನ್ನಾಗಿ ಗುರುತಿಸುತ್ತದೆ.

ನಿಮ್ಮ ಪಿಎಫ್ ಖಾತೆಯ ವಿವರಗಳ ಆಧಾರದ ಮೇಲೆಯೇ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.

GOOD NEWS: Good news for those who have joined the job under the `Bharat Rojgar' scheme: Rs. 15000 will be deposited in the bank account tomorrow!
Share. Facebook Twitter LinkedIn WhatsApp Email

Related Posts

‘ಭಾರತ ಎಂದಿಗೂ ಶಾಂತಿಯ ಪರ’: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗಿನ ಭೇಟಿಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

2 Mins Read

ALERT : ಕೋತಿಗಳ ಹಾವಳಿಗೆ ಮತ್ತೊಂದು ಬಲಿ: ಟೆರೇಸ್ ಮೇಲಿದ್ದ ಇಟ್ಟಿಗೆ ಬಿದ್ದು ಮಹಿಳೆ ಸಾವು.!

1 Min Read

​ಟೆಲಿಗ್ರಾಮ್ ನಿರ್ಬಂಧದ ವಿರುದ್ಧ ಅರ್ಜಿ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

2 Mins Read
Recent News

‘ಭಾರತ ಎಂದಿಗೂ ಶಾಂತಿಯ ಪರ’: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗಿನ ಭೇಟಿಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ALERT : ಕೋತಿಗಳ ಹಾವಳಿಗೆ ಮತ್ತೊಂದು ಬಲಿ: ಟೆರೇಸ್ ಮೇಲಿದ್ದ ಇಟ್ಟಿಗೆ ಬಿದ್ದು ಮಹಿಳೆ ಸಾವು.!

GOOD NEWS : `ಭಾರತ್ ರೋಜ್‌ ಗಾರ್’ ಯೋಜನೆಯಡಿ ಕೆಲಸಕ್ಕೆ ಸೇರಿದವರಿಗೆ ಗುಡ್ ನ್ಯೂಸ್ : ನಾಳೆಯೇ ಬ್ಯಾಂಕ್ ಖಾತೆಗೆ 15,000 ರೂ.ಜಮಾ.!

​ಟೆಲಿಗ್ರಾಮ್ ನಿರ್ಬಂಧದ ವಿರುದ್ಧ ಅರ್ಜಿ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

State News
KARNATAKA

`LPG’ ಗ್ರಾಹಕರೇ ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಕಟ್ | LPG Gas Subsidy

By kannadanewsnow57 KARNATAKA 2 Mins Read

ಬೆಂಗಳೂರು : ನೀವು ಭಾರತ ಗ್ಯಾಸ್ (Bharat Gas) ಗ್ರಾಹಕರಾಗಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಅತ್ಯಂತ ಪ್ರಮುಖ ಹಾಗೂ ಗಡುವಿನ ಮಾಹಿತಿಯಿದೆ.…

BIG NEWS : ರಾಜ್ಯದ ಪೊಲೀಸ್ ಇಲಾಖೆಯಲ್ಲೂ ಇನ್ಮುಂದೆ `ಡಿಜಿಟಲ್ ಹಾಜರಾತಿ’: ‘ಕರ್ತವ್ಯ’ ಆ್ಯಪ್ ಅನುಷ್ಠಾನಕ್ಕೆ ಸರ್ಕಾರ ಮಹತ್ವದ ಆದೇಶ

BIG NEWS: ರಾಜ್ಯದ ‘KSRP’ಯಲ್ಲಿ ಹೆಚ್ಚಾದ ‘ಕುಡುಕ ಪೊಲೀಸ’ರ ಸಂಖ್ಯೆ; ಮದ್ಯ ವ್ಯಸನ ಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್‌ಗೆ ಸರ್ಕಾರ ಆದೇಶ!

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ :’ಕರ್ತವ್ಯ’ ಆ್ಯಪ್ ನಲ್ಲಿ ಹಾಜರಾತಿ ಕಡ್ಡಾಯ ನೋಂದಣಿಗೆ 7 ದಿನಗಳ ಅಂತಿಮ ಗಡುವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.