Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮದ್ಯಪಾನ ಮಾತ್ರವಲ್ಲ: ಯುವಕರಲ್ಲಿ ‘ಫ್ಯಾಟಿ ಲಿವರ್’ ಹೆಚ್ಚಳಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ವೈದ್ಯರು!

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

ಕರ್ನಾಟಕದ ಶಿಕ್ಷಣ ರಂಗದಲ್ಲಿ ಕ್ರಾಂತಿ: 15,000 ಶಿಕ್ಷಕರ ಭರ್ತಿ, ‘800 KPS ಶಾಲೆ’ಗಳ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `SC-ST’ ಸಮುದಾಯವರಿಗೆ ಗುಡ್ ನ್ಯೂಸ್ : ಕೈಗಾರಿಕೆಗಳನ್ನು ಸ್ಥಾಪಿಸಲು ನಿಮಗೆ ಸರ್ಕಾರದಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !
KARNATAKA

ರಾಜ್ಯದ `SC-ST’ ಸಮುದಾಯವರಿಗೆ ಗುಡ್ ನ್ಯೂಸ್ : ಕೈಗಾರಿಕೆಗಳನ್ನು ಸ್ಥಾಪಿಸಲು ನಿಮಗೆ ಸರ್ಕಾರದಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

By kannadanewsnow57

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳನ್ನು ಮುಖ್ಯವಾಹಿನಿಗೆ ತರಲು ಕರ್ನಾಟಕ ಸರ್ಕಾರವು ‘ಕೈಗಾರಿಕಾ ನೀತಿ 2025-30’ ಅಡಿಯಲ್ಲಿ ಹತ್ತು ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ.

ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಬಲ್ಕಿಸ್ ಬಾನು ಅವರ ಪ್ರಶ್ನೆಗೆ ಉತ್ತರವಾಗಿ ಸರ್ಕಾರವು ಈ ಕೆಳಗಿನ ಪ್ರಮುಖ ಸೌಲಭ್ಯಗಳ ವಿವರಗಳನ್ನು ಹಂಚಿಕೊಂಡಿದೆ.

1. ಕೈಗಾರಿಕಾ ನೀತಿ 2025-30ರ ಪ್ರಮುಖ ಅಂಶಗಳು:

ಹೊಸ ನೀತಿಯಲ್ಲಿ ಹೂಡಿಕೆದಾರರಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ:

ಬಂಡವಾಳ ಹೂಡಿಕೆ ಹಾಗೂ ವಹಿವಾಟು ಆಧಾರಿತ ಸಹಾಯಧನ.

ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕದಲ್ಲಿ ರಿಯಾಯಿತಿ.

ವಿದ್ಯುತ್ ಶುಲ್ಕದ ಮೇಲಿನ ತೆರಿಗೆ ವಿನಾಯಿತಿ ಹಾಗೂ ವಿದ್ಯುತ್ ಶಕ್ತಿ ಸಹಾಯಧನ.

ತಂತ್ರಜ್ಞಾನ ಅಳವಡಿಕೆ, ರಫ್ತು ಘಟಕಗಳು ಹಾಗೂ ಸುಸ್ಥಿರ ಕೈಗಾರಿಕೀಕರಣಕ್ಕೆ ವಿಶೇಷ ಪ್ರೋತ್ಸಾಹ.

2. ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ವಿಶೇಷ ಪ್ಯಾಕೇಜ್:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗಾಗಿ ‘ವಿಶೇಷ ಘಟಕ ಯೋಜನೆ’ ಅಡಿ ಗಣನೀಯ ನೆರವು ನೀಡಲಾಗುತ್ತಿದೆ:

ಸಾಫ್ಟ್ ಸೀಡ್ ಕ್ಯಾಪಿಟಲ್ ನೆರವು: 10 ಕೋಟಿ ರೂ. ವರೆಗೆ ಹೂಡಿಕೆ ಮಾಡುವ ಘಟಕಗಳಿಗೆ ಗರಿಷ್ಠ 75 ಲಕ್ಷ ರೂ. ವರೆಗೆ ಸಾಫ್ಟ್ ಸೀಡ್ ಕ್ಯಾಪಿಟಲ್ ನೆರವು ಸಿಗಲಿದೆ. ಇದಕ್ಕೆ 4 ವರ್ಷಗಳ ‘ಮೊರಟೋರಿಯಂ’ ಅವಧಿ ಇರಲಿದ್ದು, ನಂತರದ 5 ವರ್ಷಗಳಲ್ಲಿ ಮರುಪಾವತಿ ಮಾಡಬಹುದು.

ನಿವೇಶನ ಹಂಚಿಕೆಯಲ್ಲಿ ರಿಯಾಯಿತಿ: KIADB ಅಥವಾ KSSIDC ವತಿಯಿಂದ ಹಂಚಿಕೆಯಾಗುವ ಗರಿಷ್ಠ 2 ಎಕರೆವರೆಗಿನ ನಿವೇಶನಗಳಿಗೆ 75% ರಷ್ಟು ಸಹಾಯಧನ ನೀಡಲಾಗುವುದು.

ಸಾಲದ ಮೇಲೆ 60% ಸಹಾಯಧನ: ಗುಡಿ ಮತ್ತು ಅತೀ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕ್‌ಗಳಿಂದ ಪಡೆಯುವ ಸಾಲದ ಮೇಲೆ 60% ರಷ್ಟು (ಗರಿಷ್ಠ 5 ಲಕ್ಷ ರೂ.ವರೆಗೆ) ಸಹಾಯಧನ ದೊರೆಯಲಿದೆ.

ವಿದ್ಯುತ್ ದರದಲ್ಲಿ ವಿನಾಯಿತಿ: ಹೊಸದಾಗಿ ಸ್ಥಾಪನೆಯಾದ ಘಟಕಗಳಿಗೆ ಮೊದಲ 5 ವರ್ಷಗಳ ಕಾಲ ಪ್ರತಿ ಯೂನಿಟ್‌ಗೆ 2 ರೂ.ಗಳಂತೆ ವಿದ್ಯುತ್ ಶಕ್ತಿ ಸಹಾಯಧನ ನೀಡಲಾಗುವುದು.

ಶುಲ್ಕಗಳ ಮರುಪಾವತಿ: KSFC ಅಥವಾ ಇತರೆ ಹಣಕಾಸು ಸಂಸ್ಥೆಗಳು ವಿಧಿಸುವ ಪರಿಶೀಲನಾ ಶುಲ್ಕ ಮತ್ತು ಕಾನೂನು ಶುಲ್ಕಗಳನ್ನು ಸರ್ಕಾರವೇ ಮರುಪಾವತಿಸಲಿದೆ.

3. ಸಣ್ಣ ಉತ್ಪಾದನಾ ಘಟಕಗಳಿಗೆ ಬಡ್ಡಿ ಸಹಾಯಧನ:

ಹೊಸ ಹೂಡಿಕೆಗಾಗಿ KSFC ಇಂದ ಸಾಲ ಪಡೆಯುವ ಅತೀ ಸಣ್ಣ ಮತ್ತು ಸಣ್ಣ ಉತ್ಪಾದನಾ ಕೈಗಾರಿಕೆಗಳಿಗೆ 6% ಬಡ್ಡಿ ಸಹಾಯಧನ ನೀಡುವ ಯೋಜನೆಯನ್ನು ಸರ್ಕಾರ ಮುಂದುವರಿಸಿದೆ. ಇದು ಕಟ್ಟಡ ಮತ್ತು ಯಂತ್ರೋಪಕರಣಗಳ ಮೇಲಿನ ಹೂಡಿಕೆಗೆ ಅನ್ವಯಿಸಲಿದ್ದು, ಉದ್ಯಮಿಗಳಿಗೆ ಆರ್ಥಿಕ ಹೊರೆ ತಗ್ಗಿಸಲಿದೆ.

Good news for the `SC-ST' community in the state: You will get all these facilities from the government to set up industries!
Share. Facebook Twitter LinkedIn WhatsApp Email

Related Posts

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

4 Mins Read

ಕರ್ನಾಟಕದ ಶಿಕ್ಷಣ ರಂಗದಲ್ಲಿ ಕ್ರಾಂತಿ: 15,000 ಶಿಕ್ಷಕರ ಭರ್ತಿ, ‘800 KPS ಶಾಲೆ’ಗಳ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್!

3 Mins Read

BREAKING: ಇನ್ಮುಂದೆ ರಾಜ್ಯದಲ್ಲಿ ತೆರೆದ ವಾಹನದಲ್ಲಿ ಸಫಾರಿಗೆ ಅವಕಾಶವಿಲ್ಲ: ಸಚಿವ ಈಶ್ವರ್ ಖಂಡ್ರೆ ಆದೇಶ

1 Min Read
Recent News

ಮದ್ಯಪಾನ ಮಾತ್ರವಲ್ಲ: ಯುವಕರಲ್ಲಿ ‘ಫ್ಯಾಟಿ ಲಿವರ್’ ಹೆಚ್ಚಳಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ವೈದ್ಯರು!

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

ಕರ್ನಾಟಕದ ಶಿಕ್ಷಣ ರಂಗದಲ್ಲಿ ಕ್ರಾಂತಿ: 15,000 ಶಿಕ್ಷಕರ ಭರ್ತಿ, ‘800 KPS ಶಾಲೆ’ಗಳ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್!

ಎಚ್ಚರ! ನಿಮ್ಮ ಆಯಸ್ಸನ್ನು ಕಡಿಮೆ ಮಾಡುವ 4 ಆಹಾರಗಳಿವು

State News
KARNATAKA

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

By ವಸಂತ ಬಿ ಈಶ್ವರಗೆರೆ KARNATAKA 4 Mins Read

ಬೆಂಗಳೂರು :“ಬಿಜೆಪಿ ನಾಯಕರು ಒಂದು ದಿನದ ಫೋಟೋ ಶೂಟ್ ಬಿಟ್ಟು ಪ್ರತಿನಿತ್ಯ ಮೆಟ್ರೋ, ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತಾರಾ?” ಎಂದು ಡಿಸಿಎಂ…

ಕರ್ನಾಟಕದ ಶಿಕ್ಷಣ ರಂಗದಲ್ಲಿ ಕ್ರಾಂತಿ: 15,000 ಶಿಕ್ಷಕರ ಭರ್ತಿ, ‘800 KPS ಶಾಲೆ’ಗಳ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್!

BREAKING: ಇನ್ಮುಂದೆ ರಾಜ್ಯದಲ್ಲಿ ತೆರೆದ ವಾಹನದಲ್ಲಿ ಸಫಾರಿಗೆ ಅವಕಾಶವಿಲ್ಲ: ಸಚಿವ ಈಶ್ವರ್ ಖಂಡ್ರೆ ಆದೇಶ

Apple Store: ಬೆಂಗಳೂರಲ್ಲಿ ಎರಡನೇ ಸ್ಟೋರ್ ತೆರೆಯಲು ಆಪಲ್ ಸಿದ್ಧತೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.